– ಹನಿಮೂನ್ನಿಂದ ಬಂದು ತವರು ಮನೆಗೆ ಹೋದ ವಧು
ಲಕ್ನೋ: ವೈದ್ಯನೊಬ್ಬ ಹನಿಮೂನ್ ರಾತ್ರಿಯೇ ತಾನೊಬ್ಬ ಸಲಿಂಗಕಾಮಿ, ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಪತ್ನಿಯ ಮುಂದೆ ಸತ್ಯ ಬಾಯಿಬಿಟ್ಟಿದ್ದಾನೆ. ಅಲ್ಲದೇ ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದು, ಇದೀಗ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
Advertisement
ಮಹಿಳೆ ತನ್ನ ಪತಿಯ ವಿರುದ್ಧ ಆಗ್ರಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾಳೆ. ಮದುವೆ ನಂತರ ಹನಿಮೂನ್ಗಾಗಿ ಹೋಟೆಲ್ವೊಂದಕ್ಕೆ ಹೋಗಿದ್ದೆವು. ಆದರೆ ಆ ರಾತ್ರಿಯೇ ಪತಿ ಸತ್ಯ ಬಿಚ್ಚಿಟ್ಟಿದ್ದಾನೆ. ನಾನು ಸಲಿಂಗಕಾಮಿ ಮತ್ತು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ನನ್ನನ್ನು ಕೊಲೆ ಮಾಡಲು ಯತ್ನಿಸಿದ. ಅತ್ತೆ ಕೂಡ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
Advertisement
Advertisement
ಕೊತ್ವಾಲಿ ಪ್ರದೇಶದ ಮೂಲದ ಯುವತಿ 2019 ಮೇ ತಿಂಗಳಲ್ಲಿ ಹತ್ರಾಸ್ ಮೂಲದ ಹುಡುಗನ ಜೊತೆ ಮದುವೆಯಾಗಿದ್ದಳು. ಆತ ವೃತ್ತಿಯಲ್ಲಿ ವೈದ್ಯನಾಗಿದ್ದನು. ಮದುವೆಗಾಗಿ 30 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಆದರೂ ನಮ್ಮ ಅತ್ತೆ-ಮಾವ ಸಂತೋಷವಾಗಿರಲಿಲ್ಲ. ವಿವಾಹವಾದ ಎರಡು ದಿನಗಳ ನಂತರ ಪತಿ ಮನಾಲಿಗೆ ಹನಿಮೂನ್ಗೆ ಕರೆದುಕೊಂಡು ಹೋಗಿದ್ದನು. ಅಲ್ಲಿನ ರೆಸಾರ್ಟಿನಲ್ಲಿ ಉಳಿದುಕೊಂಡಿದ್ದೆವು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.
Advertisement
ಮಹಿಳೆ ಆರೋಪ:
ಹನಿಮೂನ್ ರಾತ್ರಿಯೇ ನಾನು ಸಲಿಂಗಕಾಮಿ ಮತ್ತು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದನು. ಅಲ್ಲದೇ ಹೋಟೆಲ್ನಲ್ಲಿಯೇ ನನಗೆ ಥಳಿಸಿ, ಕೊಲೆ ಮಾಡಲು ಪ್ರಯತ್ನಿಸಿದನು. ಜೊತೆಗೆ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಕೂಡ ಹಾಕಿದ್ದನು. ಇದಕ್ಕೆ ವಿರೋಧಿಸಿದಕ್ಕೆ ನನ್ನ ಮೊಬೈಲ್ ಫೋನ್ ಕಿತ್ತುಕೊಂಡು ಬಿಸಾಡಿದನು. ಈ ವೇಳೆ ಹೋಟೆಲ್ ಸಿಬ್ಬಂದಿ ನನ್ನ ರಕ್ಷಣೆ ಮಾಡಿದರು.
ಈ ಬಗ್ಗೆ ಮಾಹಿತಿ ಪಡೆದು ಮನಾಲಿ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಆದರೆ ಪತಿ ಪೊಲೀಸರೊಂದಿಗೆ ಶಾಂತವಾಗಿ ಮಾತನಾಡಿದನು. ಬಳಿಕ ಇಬ್ಬರೂ ವಾಪಸ್ ಮನೆಗೆ ಬಂದೆವು. ಆದರೆ ನಾನು ಪೋಷಕರ ಮನೆಗೆ ಹೋದೆ. ಕೆಲ ದಿನಗಳ ನಂತರ ಅತ್ತೆ ನಮ್ಮ ಮನೆಗೆ ಬಂದು 10 ಲಕ್ಷ ರೂಪಾಯಿ ವರದಕ್ಷಿಣೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆಕೆ ನೀಡಿದ ದೂರಿನ ಆಧಾರದ ಮೇರೆಗೆ ಪತಿಯ ವಿರುದ್ಧ ಅನೇಕ ಪ್ರಕರಣಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.