ಶಿವಮೊಗ್ಗ: ಜಿಲ್ಲೆಯ ಹುಣಸೋಡು ಬಳಿ ನಡೆದ ದುರಂತ ಸ್ಥಳದಿಂದ ನೋಟುಗಳು ಹಾರಿ ಬಂದಿವೆ.
ಹೌದು. ಘಟನಾ ಸ್ಥಳದಿಂದ ಗ್ರಾಮಕ್ಕೆ ನೋಟುಗಳು ಹಾರಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಫೋಟಕ ತುಂಬಿದ ಲಾರಿಯಲ್ಲಿ ಹಣವಿದ್ದ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
Advertisement
ಗ್ರಾಮಕ್ಕೆ ನೋಟುಗಳು ಹಾರಿ ಬರುತ್ತಿದ್ದಂತೆಯೇ 500 ರೂ. ನೋಟುಗಳನ್ನು ಹುಣಸೋಡು ಗ್ರಾಮಸ್ಥರು ಆಯ್ದುಕೊಂಡಿದ್ದಾರೆ. ಅಲ್ಲದೆ ಗ್ರಾಮಕ್ಕೆ ಬಂದ 500 ರೂ ನೋಟು ನೋಡಿ ಕರೆನ್ಸಿ ಹುಡುಕಿದ್ದಾರೆ. ಒಟ್ಟಿನಲ್ಲಿ ಇದೀಗ 500, 2000 ರೂ. ನೋಟುಗಳು ಬಂದಿದ್ದು ಹೇಗೆ..?, ಸ್ಫೋಟಕ ತುಂಬಿದ ಲಾರಿಯಲ್ಲಿ ಹಣ ಎಷ್ಟಿತ್ತು ಎಂಬ ಪ್ರಶ್ನೆ ಎದ್ದಿದೆ.
Advertisement
Advertisement
ಘೋರ ದುರಂತಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲೀಕ ಸುಧಾಕರ್ ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಮೂಲ ಮಾಲೀಕ ಅನಿಲ್ ಕುಲಕರ್ಣಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಸ್ಫೋಟದ ತೀವ್ರತೆಗೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಿಡಿಭಾಗಗಳು ಎಲ್ಲೆಂದರಲ್ಲಿ ಹಾರಿ ಬಿದ್ದಿವೆ. ದುರ್ಘಟನೆಯಲ್ಲಿ ಮೃತಪಟ್ಟ 7 ಮಂದಿಯ ಮೃತದೇಹ ಸದ್ಯ ದೊರಕಿದೆ.
ಈ ಸಂಬಂಧ ಹುಣಸೋಡು ಗ್ರಾಮದ ಮಹಿಳೆಯರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕಳೆದ ರಾತ್ರಿ ನಡೆದ ಘಟನೆಯಿಂದ ನಾವು ಬದುಕುಳಿಯುವುದು ಕೂಡ ಕಷ್ಟವಾಗಿತ್ತು. ಆ ರೀತಿಯಾಗಿ ಶಬ್ದ ಬಂದಿತ್ತು. ಮನೆಯ ಅಂಚುಗಳೆಲ್ಲಾ ನಡುಗಿದವು, ಮನೆಯಲ್ಲಿದ್ದ ಸಾಮಗ್ರಿಗಳೆಲ್ಲ ಕೆಳಗೆ ಬಿದ್ದಿದ್ದವು. ಆ ರೀತಿಯಾಗಿ ಸ್ಪೋಟವಾಯಿತು, ಮಕ್ಕಳು ಮುದುಕರನ್ನು ಕಟ್ಟಿಕೊಂಡು ಅಷ್ಟೊತ್ತಿನಲ್ಲಿ ಹೊರ ಬಂದೆವು. ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಮ್ಮ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.