– ಸಿಸಿಬಿ ವಿಚಾರಣೆ ಎದುರಿಸಿದ ಕಾಂಗ್ರೆಸ್ ಪರಿಷತ್ ಸದಸ್ಯ ಪುತ್ರ
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ನಿರ್ಮಾಪಕ ಸೌಂದರ್ಯ ಜಗದೀಶ್ ಮತ್ತು ಕಾಂಗ್ರೆಸ್ ಪರಿಷತ್ ಸದಸ್ಯ ಯುಬಿ ವೆಂಕಟೇಶ್ ಪುತ್ರ ವಿ.ಗಣೇಶ್ ರಾವ್ ಸಹ ಸಿಸಿಬಿ ವಿಚಾರಣೆಗೆ ಆಗಮಿಸಿದ್ದರು.
Advertisement
ನೋಟಿಸ್ ಹಿನ್ನೆಲೆ ನಿರ್ಮಾಪಕ ಸೌಂದರ್ಯ ಜಗದೀಶ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೌಂದರ್ಯ ಜಗದೀಶ್ ಪತ್ನಿ, ಡ್ರಗ್ಸ್ ಪ್ರಕಜರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಪತಿ ನಿರ್ಮಾಣದ ರಾಮ್ ಲೀಲಾ ಚಿತ್ರದಲ್ಲಿ ನಟಿ ಸಂಜನಾ ಗಲ್ರಾನಿ ನಟಿಸಿದ್ದರು. ಸಿನಿಮಾದ ನಟನೆಗಾಗಿ ಸಂಜನಾಗೆ ನೀಡಿದ ಸಂಭಾವನೆ ಕೇಳಿದರು. ಸಂಜನಾಗೆ ಸಂಭಾವನೆ ಚೆಕ್ ಅಥವಾ ನಗದು ಮೂಲಕ ನೀಡಿದ್ರಾ ಎಂದು ಚಿತ್ರದ ಕುರಿತು ಮಾಹಿತಿ ಕೇಳಿದ್ದರು. ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್
Advertisement
Advertisement
ಸೌಂದರ್ಯ ಜಗದೀಶ್ ಬೆಂಗಳೂರಿನ ಓರಿಯನ್ ಮಾಲ್ ಬಳಿ ಜೆಟ್ ಲಾಗ್ ಹೆಸರಿನ ಪಬ್ ಹೊಂದಿದ್ದಾರೆ. ಈ ಪಬ್ ನಲ್ಲಿ ವೀರೇನ್ ಖನ್ನಾ ಮತ್ತು ವೈಭವ್ ಜೈನ್ ಪಾರ್ಟಿ ಆಯೋಜಿಸುತ್ತಿದ್ದರು ಎಂದು ತಿಳಿದು ಬಂದಿದೆ. ಜೆಟ್ ಲಾಗ್ ನಲ್ಲಿ ನಡೆದ ಪಾರ್ಟಿಗಳ ಮಾಹಿತಿ ಪಡೆದುಕೊಳ್ಳಲು ಸಿಸಿಬಿ ಸೌಂದರ್ಯ ಜಗದೀಶ್ ಅವರಿಗೆ ನೋಟಿಸ್ ನೀಡಿತ್ತು ಎಂದು ಮೂಲಗಳು ತಿಳಿಸಿವೆ. ಆದ್ರೆ ಸೌಂದರ್ಯ ಜಗದೀಶ್, ಜೆಟ್ ಲಾಗ್ ಕುರಿತು ಏನು ಕೇಳಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ಹೆಂಡ್ತಿಗೆ ಫೋನ್ ಮಾಡ್ಬೇಕು ಅಂತ ಲವ್ವರ್ಗೆ ಕಾಲ್ – ತಗ್ಲಾಕ್ಕೊಂಡ ವೈಭವ್
Advertisement
ರಾಯಲ್ ಮೀನಾಕ್ಷಿ ಮಾಲ್ ಮಾಲೀಕರಾಗಿರುವ ವಿ.ಗಣೇಶ್ ರಾವ್ ತಮ್ಮ ಒಡೆತನದ ಫ್ಲ್ಯಾಟ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದರು. ಜೇಡ್ ಶ್ರೀ ಸುಬ್ರಮಣ್ಯ ಸೇರಿದಂತೆ ಹಲವರೊಂದಿಗೆ ಸೇರಿ ಗಣೇಶ್ ರಾವ್ ಪಾರ್ಟಿ ಆಯೋಜಿಸುತ್ತಿದ್ದರು. ಈಗಾಗಲೇ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಜೊತೆಯಲ್ಲಿಯೂ ಗಣೇಶ್ ರಾವ್ ಹಣಕಾಸಿನ ವ್ಯವಹಾರ ನಡೆಸಿದ್ದರು ಎಂಬ ಮಾಹಿತಿ ಸಿಸಿಬಿ ಲಭ್ಯವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿದ ಹಿನ್ನೆಲೆ ಗಣೇಶ್ ರಾವ್ ಇಂದು ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಗಣೇಶ್ ರಾವ್ ವಿಚಾರಣೆಗೆ ಅಂತ್ಯವಾಗಿದ್ದು, ಸಿಸಿಬಿ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜೈಲಿನಲ್ಲಿ ಸೊಳ್ಳೆ ಕಚ್ತಿದೆಂದು ನಿದ್ರಿಸದೆ ಸಂಜನಾ ರಂಪಾಟ!