ನವದೆಹಲಿ: ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 5 ಕೋಟಿ ಸ್ಮಾರ್ಟ್ಫೋನ್ಗಳು ಭಾರತದಲ್ಲಿ ಮಾರಾಟಗೊಂಡಿದೆ. ಈ ಮೂಲಕ ಸ್ಮಾರ್ಟ್ಫೋನ್ ಮಾರಾಟದಲ್ಲಿ ಭಾರತದಲ್ಲಿ ದಾಖಲೆ ನಿರ್ಮಾಣವಾಗಿದೆ.
2019ರ ಈ ಅವಧಿಗೆ ಹೋಲಿಸಿದರೆ ಶೇ.8 ರಷ್ಟು ಬೆಳವಣಿಗೆಯಾಗಿದೆ. ಒಂದು ತ್ರೈಮಾಸಿಕದಲ್ಲಿ ಇಷ್ಟೊಂದು ಬೆಳವಣಿಗೆಯಾಗಿದ್ದು ದಾಖಲೆ ಎಂದು ಮಾರುಕಟ್ಟೆ ವಿಶ್ಲೇಷಣಾ ಕಂಪನಿ ಕ್ಯಾನಲಿಸ್ ಹೇಳಿದೆ.
Advertisement
Advertisement
ಲಾಕ್ಡೌನ್ ಬಳಿಕ ನಿರ್ಬಂಧಗಳು ತೆರವುಗೊಂಡಿದ್ದು ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿದೆ. 3 ತಿಂಗಳು ಲಾಕ್ಡೌನ್ ಅವಧಿಯಲ್ಲಿ ಅಂಗಡಿಗಳು ಮುಚ್ಚಿತ್ತು. ಬಳಿಕ ಗ್ರಾಹಕರು ಹೆಚ್ಚಿನ ಸಂಖ್ಯೆಯನ್ನು ಫೋನ್ ಖರೀದಿಸಿದ್ದರಿಂದ ಈ ಪ್ರಗತಿಯಾಗಿದೆ ಎಂದು ತಿಳಿಸಿದೆ.
Advertisement
Advertisement
ಗಲ್ವಾನ್ ಘರ್ಷಣೆಯ ಬಳಿಕ ಚೀನಾ ಮತ್ತು ಭಾರತ ನಡುವಿನ ಸಂಬಂಧ ಹಳಸಿದ್ದರೂ ರೆ ಇದು ಸ್ಮಾರ್ಟ್ಫೋನ್ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಳೆದ ವರ್ಷ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಚೀನಿ ಕಂಪನಿಗಳ ಪಾಲು ಶೇ.74 ರಷ್ಟು ಇದ್ದರೆ ಈ ವರ್ಷ ಶೇ.76ಕ್ಕೆ ಏರಿಕೆಯಾಗಿದೆ. ಈ ಮೂಲಕ ಶೇ.2 ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ ಜೂನ್ ತಿಂಗಳ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.4ರಷ್ಟು ಕುಸಿತ ಕಂಡಿದೆ. ಜೂನ್ ತ್ರೈಮಾಸಿಕದಲ್ಲಿ ಚೀನಿ ಕಂಪನಿಗಳ ಪಾಲು ಶೇ.80 ರಷ್ಟು ಇತ್ತು.
ಚೀನಾದೊಂದಿಗಿನ ಘರ್ಷಣೆಯ ಬಳಿಕ ಚೀನಾ ಕಂಪನಿಗಳು ಮಾರುಕಟ್ಟೆ ಹೂಡುವ ಖರ್ಚನ್ನು ಕಡಿಮೆ ಮಾಡಿವೆ. ನಾವು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದೇವೆ ಎಂಬುದನ್ನು ಬಿಂಬಿಸಲು ಮುಂದಾಗುತ್ತಿವೆ ಎಂದು ತಿಳಿಸಿದೆ.
ಯಾವ ಕಂಪನಿಯ ಪಾಲು ಎಷ್ಟಿದೆ?
ಮೊದಲ ಸ್ಥಾನದಲ್ಲಿ ಕ್ಸಿಯೋಮಿ ಮುಂದುವರಿದ್ದರೆ ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿ ಇದೆ. ಚೀನಾದ ವಿವೋ, ರಿಯಲ್ಮೀ, ಒಪ್ಪೋ ಅನುಕ್ರಮವಾಗಿ ಮೂರು, ನಾಲ್ಕು, ಐದನೇ ಸ್ಥಾನ ಪಡೆದಿದೆ.
ಕ್ಸಿಯೋಮಿ 1.31 ಕೋಟಿ ಸ್ಮಾರ್ಟ್ಫೋನ್ ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಶೇ.26.1 ರಷ್ಟು ಪಾಲನ್ನು ಹೊಂದಿದೆ. ಸ್ಯಾಮ್ಸಂಗ್ 1.02 ಕೋಟಿ ಫೋನ್ಗಳನ್ನು ಮಾರಾಟ ಮಾಡಿ ಮಾರುಕಟ್ಟೆಯಲ್ಲಿ ಶೇ.20.4 ರಷ್ಟು ಪಾಲನ್ನು ಪಡೆದುಕೊಂಡಿದೆ.
ಉಳಿದಂತೆ ವಿವೋ 88 ಲಕ್ಷ(ಶೇ.17.6), ರಿಯಲ್ಮೀ 87 ಲಕ್ಷ(ಶೇ.17.4), ಒಪ್ಪೋ 61 ಲಕ್ಷ(ಶೇ.12.1) ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡಿವೆ. ಐಫೋನ್, ಒನ್ ಪ್ಲಸ್ ಸೇರಿದಂತೆ ಇತರೇ ಎಲ್ಲ 31 ಲಕ್ಷ(ಶೇ.6.3) ಫೋನ್ಗಳು ಮಾರಾಟವಾಗಿದೆ ಎಂದು ಕ್ಯಾನಲಿಸ್ ತಿಳಿಸಿದೆ.
"Indian #smartphone market rebounds to reach all-time high of 50M in Q3 (July, August, Sept)." – @Canalys
Smartphones have emerged as a modern-day essential commodity. Users are constantly looking for the latest gadget for work-from-home & e-learning.
I ❤️ Mi #Xiaomi #India ???????? pic.twitter.com/ctnXGkoHAb
— Manu Kumar Jain (@manukumarjain) October 22, 2020