– 38 ಮಂದಿ ಆಸ್ಪತ್ರೆಗೆ ದಾಖಲು
– ಮೇಲ್ಛಾವಣಿ ಕೆಳಗೆ ಆಶ್ರಯ ಪಡೆದಿದ್ದಾಗ ಘಟನೆ
ಲಕ್ನೋ: ಸ್ಮಶಾನದ ಮೇಲ್ಛಾವಣಿ ಕುಸಿದು 23 ಮಂದಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮುರಾದ್ನನಗರದಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಒಟ್ಟು 38 ಜನರನ್ನು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವಿಚಾರವಾಗಿ ತನಿಖೆ ಆರಂಭಿಸಲಾಗಿದ್ದು, ಘಟನೆಯಲ್ಲಿ 17 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, 38 ಜನರನ್ನು ರಕ್ಷಿಸಲಾಗಿದೆ. ಆದಷ್ಟು ಬೇಗ ತಪ್ಪಿತಸ್ಥರನ್ನು ಕಂಡು ಹಿಡಿದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮೀರತ್ ವಿಭಾಗೀಯ ಆಯುಕ್ತ ಅನಿತಾ ಸಿ ಮೆಶ್ರಮ್ ತಿಳಿಸಿದರು.
Advertisement
UP CM Yogi Adityanath takes cognizance of roof collapse incident in Muradnagar, Ghaziabad district.
"I've instructed district officials to conduct relief operations & submit a report of incident. All possible help will be provided to those affected by the incident," he said. pic.twitter.com/3Kt6ECqIz7
— ANI UP/Uttarakhand (@ANINewsUP) January 3, 2021
Advertisement
ಘಟನೆ ಕುರಿತಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಮತ್ತು ಘಟನೆಯ ವರದಿಯನ್ನು ಸಲ್ಲಿಸುವಂತೆ ನಾನು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಘಟನೆಯಿಂದ ಹಾನಿಗೊಳಗಾಗಿರುವವರಿಗೆ ಸಾಧ್ಯವಾಗುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಹೇಳಿದರು.
Advertisement
उत्तर प्रदेश के मुरादनगर में हुए दुर्भाग्यपूर्ण हादसे की खबर से अत्यंत दुख पहुंचा है। राज्य सरकार राहत और बचाव कार्य में तत्परता से जुटी है। इस दुर्घटना में जान गंवाने वालों के परिजनों के प्रति संवेदना प्रकट करता हूं, साथ ही घायलों के शीघ्र स्वस्थ होने की कामना करता हूं।
— Narendra Modi (@narendramodi) January 3, 2021
Advertisement
ಸ್ಮಶಾನದಲ್ಲಿ ನಡೆದ ದುರಂತರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಮುರಾದ್ನಗರದಲ್ಲಿ ನಡೆದ ದುರಾದೃಷ್ಟಕರ ಅವಘಡದ ಸುದ್ದಿ ಬಹಳ ದುಃಖವನ್ನುಂಟು ಮಾಡಿದೆ. ರಾಜ್ಯ ಸರ್ಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ನಿರತವಾಗಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಗೆ ಸಂತಾಪ ವ್ಯಕ್ತಪಡಿಸುತ್ತೇನೆ, ಹಾಗೆಯೇ ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.
गाजियाबाद: मुरादनगर में बारिश की वजह से छत गिरी, क़रीब 10-12 लोगों के फंसे होने की आशंका है। बचाव अभियान चल रहा है। pic.twitter.com/1WUHO5MLys
— ANI_HindiNews (@AHindinews) January 3, 2021
ಪೊಲೀಸರು ಮತ್ತು ಎನ್ಡಿಆರ್ಎಫ್ ತಂಡ ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದು, ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಮಳೆ ಸುರಿಯುತ್ತಿರುವ ಕಾರಣ ಕೆಲವರು ಮೇಲ್ಛಾವಣಿ ಕೆಳಗೆ ಆಶ್ರಯ ಪಡೆದಿದ್ದರು. ಈ ವೇಳೆ ದುರಂತ ಸಂಭವಿಸಿದೆ.