ದಿಪಾವಳಿ ಹಬ್ಬದ ಸಡಗರ ಸಂಭ್ರಮದಲ್ಲಿ ಸ್ವೀಟ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಜಗತ್ತಿನಾದ್ಯಂತ ಕೊರೋನ ಇರುವ ಹಿನ್ನೆಲೆ ಹೊರಗಡೆಯಿಂದ ಸ್ವೀಟ್ ತರುವ ಬದಲಾಗಿ ಮನೆಯಲ್ಲಿಯೆ ಈ 2 ರುಚಿಯಾದ ಸ್ವೀಟ್ ತಯಾರಿಸಿ ಸವಿಯಿರಿ.
ಮಹಾಲಕ್ಷ್ಮಿ ಭಕ್ಷ್ಯ
Advertisement
ಬೇಕಾಗುವ ಸಾಮಾಗ್ರಿಗಳು:
* ಗೋಧಿಹಿಟ್ಟು 1 ಕಪ್
* ತುಪ್ಪ ಅರ್ಧ ಕಪ್
* ಹಾಲು 3 ಕಪ್
* ಎಲಕ್ಕಿ ಪುಡಿ ಮತ್ತು ಉಪ್ಪು ಚಿಟಿಕೆ
* ಗೋಡಂಬಿ, ಒಣದ್ರಾಕ್ಷಿ
Advertisement
ತಯಾರಿಸುವ ವಿಧಾನ:
* ತುಪ್ಪ ಮತ್ತು ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ ದಪ್ಪತಳದ ಪಾತ್ರೆಯಲ್ಲಿ ಚಿನ್ನಾಗಿ ಹುರಿದುಕೊಳ್ಳಬೇಕು.
* ಘಮ ಘಮ ಎಂದು ಸುವಾಸನೆ ಬಂದ ನಂತರ ಇದಕ್ಕೆ ಹಾಲು ಬಿಸಿ ಮಾಡಿ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಸೌಟಿನಿಂದ ಕೈಯಾಡಿಸುತ್ತಿರಬೇಕು.
* ಬೆಂದ ನಂತರ ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಗೂ ಚಿಟಿಕೆ ಅಷ್ಟು ಉಪ್ಪು ಸೇರಿಸಬೇಕು.
* ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಚೂರು ಮತ್ತು ಒಣ ದ್ರಾಕ್ಷಿ ಸೇರಿಸಿ ಸವಿದರೆ ದೀಪಾವಳಿ ಹಬ್ಬದ ಮಹಾಲಕ್ಷ್ಮಿನ ಭಕ್ಷ್ಯ ಸಿದ್ಧವಾಗಿರುತ್ತದೆ.
Advertisement
ಡ್ರೈ ಫ್ರೂಟ್ಸ್ ಲಡ್ಡು
Advertisement
ಬೇಕಾಗುವ ಸಾಮಗ್ರಿಗಳು:
* ಗೋಡಂಬಿ-ಕಾಲು ಕಪ್
* ಹಸಿ ಖರ್ಜೂರ-ಅರ್ಧ ಕೆ.ಜಿ
* ಬಾದಾಮಿ-ಕಾಲು ಕಪ್
* ಪಿಸ್ತಾ-ಕಾಲು ಕಪ್
* ತುಪ್ಪ-2 ಟೇಬಲ್ ಸ್ಪೂನ್
* ಗೋಂದು-1 ಟೇಬಲ್ ಸ್ಪೂನ್
* ಗಸಗಸೆ-1 ಟೇಬಲ್ ಸ್ಪೂನ್
* ಏಲಕ್ಕಿ ಪುಡಿ-1 ಟೀ ಸ್ಪೂನ್,
* ಜಾಕಾಯಿ ಪುಡಿ-ಅರ್ಧ ಟೀ ಸ್ಪೂನ್
ತಯಾರಿಸುವ ವಿಧಾನ :
* ಖರ್ಜೂರವನ್ನು ಮಿಕ್ಸಿ ಜಾರ್ಗೆ ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ.
* ನಂತರ ಗೋಡಂಬಿ, ಗಸಗಸೆ, ಬಾದಾಮಿ, ಪಿಸ್ತಾವನ್ನು ತರಿತರಿಯಾಗಿ ಪುಡಿ ಮಾಡಿ.
* ಬಾಣಲೆಯಲ್ಲಿ ಒಂದು ಟೇಬಲ್ ಸ್ಪೂನ್ ತುಪ್ಪ ಬಿಸಿ ಮಾಡಿ ಹೊಂಬಣ್ಣ ಬರುವವರೆಗೆ ಹುರಿದು ತೆಗೆದಿಡಿ. * ಬಾಣಲೆಗೆ ಉಳಿದ ತುಪ್ಪ ಹಾಕಿ ಒಣ ಹಣ್ಣುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
* ನಂತರ ಇದಕ್ಕೆ ಖರ್ಜೂರದ ತುಂಡುಗಳನ್ನು ಹಾಕಿ ಬಿಸಿ ಆಗುವವರೆಗೆ ತಿರುವಿ. ಇವೆಲ್ಲವನ್ನು ಒಂದು ತಟ್ಟೆಗೆ ಹಾಕಿ ಇಡಬೇಕು ನಂತರ ಇದಕ್ಕೆ ಏಲಕ್ಕಿ, ಜಾಯಿಕಾಯಿ ಪುಡಿ ಮತ್ತು ಪುಡಿ ಮಾಡಿದ ಗೋಂದು ಹಾಕಿ ಮಿಶ್ರ ಮಾಡಿ.
* ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಸಣ್ಣ ಲಡ್ಡುಗಳನ್ನು ಮಾಡಿದರೆ ಡ್ರೈ ಫ್ರೂಟ್ಸ್ ಲಡ್ಡು ಸವಿಯಲು ಸಿದ್ಧವಾಗುತ್ತದೆ.