ಬೆಂಗಳೂರು: ಖ್ಯಾತ ನಿರೂಪಕಿ, ಸ್ಟುವರ್ಟ್ ಬಿನ್ನಿ ಪತ್ನಿ ಮಾಯಂತಿ ಲ್ಯಾಂಗರ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
2020ರ ಐಪಿಎಲ್ ಟೂರ್ನಿಯ ನಿರೂಪಕರ ಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಬಿಡುಗಡೆ ಮಾಡಿದ್ದು, ಆದರೆ ಪಟ್ಟಿಯಲ್ಲಿ ನಿರೂಪಕಿ ಮಾಯಂತಿ ಲ್ಯಾಂಗರ್ ಅವರ ಹೆಸರು ಕೈಬಿಡಲಾಗಿತ್ತು. ಪಟ್ಟಿ ಬಿಡುಗಡೆಯಾಗುತ್ತಿದಂತೆ ತಮ್ಮ ನೆಚ್ಚಿನ ನಿರೂಪಣೆಯನ್ನು ಕೈಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡಿತ್ತು. ಸದ್ಯ ಈ ಪ್ರಶ್ನೆಗಳಿಗೆ ಮಾಯಂತಿ ಲ್ಯಾಂಗರ್ ಉತ್ತರಿಸಿದ್ದು, ಗಂಡು ಮಗುವಿಗೆ ತಾಯಿಯಾಗಿರುವ ವಿಚಾರವನ್ನು ತಿಳಿಸಿದ್ದಾರೆ.
Advertisement
So I’m going to love watching the IPL @StarSportsIndia all the best to the team ???? @jatinsapru @suhailchandhok @cricketaakash @SanjanaGanesan @ProfDeano @scottbstyris @BrettLee_58 @Sanjog_G and the full gang!! pic.twitter.com/fZVk0NUbTi
— Mayanti Langer Binny (@MayantiLanger_B) September 18, 2020
Advertisement
ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಮಾಯಂತಿ ಲ್ಯಾಂಗರ್, ಕಳೆದ 5 ವರ್ಷಗಳಿಂದ ಸ್ಟಾರ್ ಸ್ಪೋರ್ಟ್ಸ್ ನಲ್ಲಿರುವ ನನ್ನ ಕುಟುಂಬ ಅವರ ಉನ್ನತ ಈವೆಂಟ್ಗಳನ್ನು ಎದುರಿಸುವ ಅದ್ಭುತ ಅವಕಾಶವನ್ನು ನನಗೆ ನೀಡಿದೆ. ನನಗೆ ಅಗತ್ಯವಿರುವ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದೆ. ನಾನು ಗರ್ಭಿಣಿಯಾಗಿದ್ದ ಸಂದರ್ಭದಲ್ಲೂ 5 ತಿಂಗಳವರೆಗೆ ಕಾರ್ಯಕ್ರಮ ಹೋಸ್ಟ್ ಮಾಡಲು ಹಲವು ಹೊಂದಾಣಿಕೆಗಳನ್ನು ಮಾಡಿದೆ. 2020ರ ಐಪಿಎಲ್ ಟೂರ್ನಿ ನಿಗದಿಯಂತೆ ಮುಂದುವರಿಯುತ್ತಿದ್ದು, ಈಗಾಗಲೇ ಸಾಕಷ್ಟು ಜನರು ಅಲ್ಲಿ ತಲುಪಿದ್ದಾರೆ. 6 ವಾರಗಳ ಹಿಂದೆ ಗಂಡು ಮಗುವನ್ನು ನಾನು ಮತ್ತು ಸ್ಟುವರ್ಟ್ ಪಡೆದಿದ್ದು, ಜೀವನ ಉತ್ತಮವಾಗಿ ಬದಲಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಇತರೇ ನಿರೂಪಕರಿಗೆ ಶುಭಕೋರಿರುವ ಮಾಯಂತಿ, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲೇ ಟೂರ್ನಿಯನ್ನು ನೋಡಲು ಇಷ್ಟಪಡುತ್ತೇನೆ ಎಂದಿದ್ದಾರೆ.
ನಾಳೆಯಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಸುರೇನ್ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್, ಧೀರಜ್ ಜುನೇಜಾ, ಜತಿನ್ ಸಪ್ರು, ಸುಹೇಲ್ ಚಂದೋಕ್, ಸಂಜನಾ ಗಣೇಶನ್, ಅನಂತ್ ತ್ಯಾಗಿ ಸೇರಿದಂತೆ 9 ಮಂದಿ ನಿರೂಪಕರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಕನ್ನಡದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಂಗಳೂರಿನ ವೀಣಾ ಡಿಸೋಜಾ ನಿರೂಪಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮುಂಬರುವ ಐಪಿಎಲ್ಗಾಗಿ ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕ ನೆರೋಲಿ ಮೆಡೋಸ್ ಅವರನ್ನು ಕರೆತಂದಿದೆ. ಉಳಿದ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್ ಮತ್ತು ಧೀರಜ್ ಜುನೇಜಾ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದು, ಸುರೇನ್ ಸುಂದರಂ ಇದಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿರೂಪಕರಾಗಿದ್ದರು. ಅವರು ಕಳೆದ ವರ್ಷದಿಂದ ಸ್ಟಾರ್ ನೆಟ್ವರ್ಕ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಕಿರಾ ನಾರಾಯಣನ್ ಭಾರತೀಯ ಚಲನಚಿತ್ರ ಮತ್ತು ರಂಗಭೂಮಿ ನಟಿಯಾಗಿದ್ದು, ಕ್ರೀಡಾ ನಿರೂಪಕಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ತಾನ್ಯಾ ಪುರೋಹಿತ್ ಕೂಡ ನಟಿಯಾಗಿದ್ದು, ಹಲವಾರು ಸಿನಿಮಾದಲ್ಲಿ ಮತ್ತು ಟಿವಿ ಚಾನೆಲ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾನ್ಯಾ ಅನುಷ್ಕಾ ಶರ್ಮಾ ಅಭಿನಯದ ಎನ್ಎಚ್-10 ಚಿತ್ರದಲ್ಲಿ ನಟಿಸಿದ್ದಾರೆ. ಮಾಯಂತಿ ಲ್ಯಾಂಗರ್ ಅವರ ಅನುಪಸ್ಥಿತಿಯಲ್ಲಿ, ಈ ಬಾರಿಯ ಐಪಿಎಲ್ನಲ್ಲಿ ಹೊಸ ನಿರೂಪಕರ ತಂಡ ಕೆಲಸ ಮಾಡಲಿದೆ.