– ಅಂಗಡಿ, ಮುಗ್ಗಟ್ಟುಗಳ ಸ್ವಚ್ಛತೆ ಕಾರ್ಯ ಆರಂಭ
– ಡಿಪೋಗಳಿಂದ ಹೊರ ಬಂದು ಬಸ್ಗಳ ರೌಂಡ್ಸ್
ಬೆಂಗಳೂರು: ಸೋಮವಾರದಿಂದ ಎರಡನೇ ಹಂತದ ಅನ್ಲಾಕ್ ಆಗಲಿದೆ. ಹಾಗಾಗಿ ನಾಳೆಯ ಹೊಸ ಜೀವನಕ್ಕೆ ಜನ ಇಂದಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಬಾಗಿಲು ಹಾಕಿದ್ದ ಅಂಗಡಿಗಳ ಬಾಗಿಲು ತೆರೆದು ಸಿಬ್ಬಂದಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳು ಸೂಪರ್ ಮಾರುಕಟ್ಟೆಗಳಲ್ಲಿ ಹೋಲ್ಸೇಲ್ ಖರೀದಿಯತ್ತ ಚಿಂತಿಸಲಿದ್ದಾರೆ. ಹೀಗಾಗಿ ಸೂಪರ್ ಮಾರುಕಟ್ಟೆಗಳಲ್ಲಿ ಇಂದು ಸ್ಟಾಕ್ ಹೆಚ್ಚಳದ ಲಕ್ಷಣಗಳು ಕಾಣುತ್ತಿದೆ.
Advertisement
ಲಗ್ಗೆರೆ ಖಾಸಗಿ ಸೂಪರ್ ಮಾರುಕಟ್ಟೆಯಲ್ಲಿ ಬಟ್ಟೆ, ಎಲೆಕ್ಟ್ರಿಕ್ ವಸ್ತುಗಳ ಲೋಡ್ ಇಂದು ಲೋಡಿಂಗ್, ಅನ್ ಲೋಡ್ಡಿಂಗ್ ಕೆಲಸ ನಡೆಯುತ್ತಿದೆ .ಸೂಪರ್ ಮಾರುಕಟ್ಟೆಗಳಲ್ಲಿ ಎಂಆರ್ ಪಿಗಿಂತ ಕಡಿಮೆ ದರದಲ್ಲಿ ವಸ್ತುಗಳು ಲಭ್ಯವಿರುತ್ದೆ. ಇದನ್ನ ಖರೀದಿಸಿ ಸಣ್ಣ ಪುಟ್ಟ ಮಳಿಗೆಗಳು ಲಾಕ್ಡೌನ್ ಅವಧಿಯನ್ನ ನಷ್ಟ ಭರಿಸುವತ್ತ ಚಿಂತಿಸುತ್ತಿದೆ.
Advertisement
Advertisement
ಫಿಟ್ನೆಸ್ ಪ್ರಿಯರಿಗಾಗಿ ಭಾರೀ ಸಿದ್ಧತೆ: ಆನ್ಲಾಕ್ 2ರಲ್ಲಿ ಜಿಮ್ ಗಳು ಶೇ.50 ರಷ್ಟು ಓಪನ್ ಗೆ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ನಗರದ ಬಹುತೇಕ ಜಿಮ್ ಗಳಲ್ಲಿ ಭಾರಿ ತಯಾರಿ ನಡೆಯುತ್ತಿದೆ. ನಾಗರಬಾವಿಯ ಜಿಮ್ ವೊಂದರಲ್ಲಿ ಈಗಾಗಲೇ ಸಿದ್ಧತೆ ಶುರುವಾಗಿದೆ. ಸ್ಯಾನಿಟೈಜರ್ ಹಾಕಿ ಪ್ರತಿಯೊಂದು ಸಲಕರಣೆಗಳನ್ನ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ. ಇದೇ ವೇಳೆ ಪ್ರತಿಯೊಬ್ಬ ಮೆಂಬರ್ ಗೆ ಸರ್ಕಾರದ ಆದೇಶದಂತೆ ಡಬಲ್ ಶೆಡ್ಯೂಲ್ ನಲ್ಲಿ ಬರಲು ತಿಳಿಸಲಾಗುತ್ತಿದೆ. ಅಂದರೆ ಒಂದ್ ಬ್ಯಾಚ್ ಗೆ 20 ಜನ ಇದ್ದರೆ, ಕೇವಲ 10 ಜನ ಅರ್ಧ ಗಂಟೆ ಹಾಗೂ ಉಳಿದ 10 ಜನ ಅರ್ಧ ಗಂಟೆ ಬರುವಂತೆ ಸೂಚನೆ ನೀಡಲಾಗುತ್ತಿದೆ.
Advertisement
ಇನ್ನು ಮುಂದೆ ಪ್ರತಿಯೊಬ್ಬರು ತಮ್ಮದೇ ಕರವಸ್ತ್ರ, ಸ್ಯಾನಿಟೈಜರ್ , ತಪ್ಪದೇ ಮಾಸ್ಕ್ ತರಲು ಸೂಚಿಸಲಾಗಿದೆ. ಈ ಸಂಬಂಧ ಜಿಮ್ ಮಾಲಿಕ ರಫೀಕ್ ಮಾತನಾಡಿ, ಸರ್ಕಾರ ಅನುಮತಿ ನೀಡಿದೆ ಜತೆಗೆ ಕಟ್ಟಡದ ಮಾಲೀಕರು ಬಾಡಿಗೆ ಒತ್ತಡ ನೀಡುತ್ತಿರುವುದರಿಂದ ರಿಯಾಯಿತಿ ಕೊಡಿಸಿದರೆ ಸೂಕ್ತ ಎಂದು ಮನವಿ ಮಾಡಿದರು.
ಪ್ರಯಾಣಿಕರ ಹೊತ್ತೊಯ್ಯಲು ಮೆಟ್ರೋ ಸಜ್ಜು: ನಗರದಲ್ಲಿ ಮತ್ತೆ ಮೆಟ್ರೋ ಸೇವೆ ಆರಂಭವಾಗಲಿದೆ. ಸರ್ಕಾರದ ಸೂಚನೆಯಂತೆ ಕೋವಿಡ್ ನಿಯಮಗಳ ಅನುಸರಿಸಿಯೇ ಮೆಟ್ರೋ ರೈಲು ಸಂಚಾರ ಆಗಲಿದೆ. ಮೆಟ್ರೋ ಸ್ಟೇಷನ್ ,ಮೆಟ್ರೋ ಟ್ರೈನ್ ಕ್ಯಾಬಿನ್, ಸೀಟುಗಳು, ಸ್ಟೇಷನ್ ಲಗೇಜ್ ಪರಿಶೀಲನೆ ಮಿಷನ್ ಎಲ್ಲವನ್ನು ಪ್ರತ್ಯೇಕವಾಗಿ ಸ್ಯಾನಿಟೈಜೇಷನ್ ಮಾಡಲಾಗಿದೆ.
ಮೆಟ್ರೋ ಪ್ರಯಾಣಿಕರು ಪಾಲಿಸಲೇಬೇಕಾದ ನಿಯಮಗಳು:
* ಮಾಸ್ಕ್ ತಪ್ಪದೇ ಧರಿಸಲೇಬೇಕು.
* ದೈಹಿಕ ಅಂತರ ಕಾಯಲೇಬೇಕು.
* ಮೆಟ್ರೋ ಸ್ಮಾರ್ಟ್ ಕಾರ್ಡ್ ಗೆ ಆದ್ಯತೆ.
* ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಂಡಿರಬೇಕು.
* ಮೆಟ್ರೋ ಸಿಬ್ಬಂದಿ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಜ್ ಸೂಚನೆ ನೀಡಿದಾಗ ತಪ್ಪದೇ ಪಾಲಿಸಬೇಕು.
ಬಸ್ಗಳ ರೌಂಡ್ಸ್: ನಗರದ ಜೀವನಾಡಿ ಬಿಎಂಟಿಸಿ ರಸ್ತೆಗೆ ಇಳಿಯಲಿ ಅಣಿಯಾಗುತ್ತಿದೆ. ಇಷ್ಟು ದಿನ ಲಾಕ್ಡೌನ್ ಅಂತ ಡಿಪೋಗಳಿಂದ ಹೊರಬಂದು ಬಸ್ ಗಳು ರೌಂಡ್ಸ್ ಮಾಡುತ್ತಿದೆ.
ಪ್ರಯಾಣಿಕರ ಬೇಡಿಕೆ ಆಧರಿಸಿ ಬಸ್ ಗಳ ಸಂಚಾರ ಇರಲಿದ್ದು, ಶೇ.50 ರಷ್ಟು ಬಸ್ ಓಡಿಸಲು ಅನುಮತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನಗರದ ಅತ್ತಿಗುಪ್ಪೆ ಸಾರಿಗೆ ಸಂಕೀರ್ಣದಲ್ಲಿ ಎಲ್ಲ ಬಸ್ ಗಳ ಸ್ವಚ್ಛತಾ ಕಾರ್ಯವನ್ನ ಸಿಬ್ಬಂದಿ ಮಾಡಿದ್ದು, ಇಂದು ಬಸ್ ಕೀಗಳನ್ನ ಅಧಿಕಾರಿಯಿಂದ ಪಡೆಯುತ್ತಿದ್ದರು. ಪ್ರಯಾಣಿಕರಂತೂ ಬಸ್ ಗಳಿಲ್ಲದೇ ಕೆಲಸ ಕಾರ್ಯಗಳಿಗೆ ಹೋಗಲಾಗದೇ ನೊಂದಿದ್ದರು. ಹಲವೆಡೆ ಬಸ್ ಇಲ್ಲ ಎಂದೇ ಅಗತ್ಯ ವಸ್ತುಗಳ ದರ ಸಹ ಡಬಲ್ ಬೆಲೆಗೆ ಮಾರಾಟವಾಗುತ್ತಿತ್ತು. ಈಗ ಬಸ್ ಸಂಚಾರ ಆರಂಭವಾದ ಮೇಲೆ ಎಲ್ಲ ತಹಬದಿಗೆ ಬರುತ್ತಾ ಎಂಬುದನ್ನ ನೋಡಬೇಕಾಗಿದೆ.
ವ್ಯಾಪಾರ ನಿರೀಕ್ಷೆ ಮಾತ್ರ ಕಷ್ಟ ಕಷ್ಟ: ದೇವರು ವರ ಕೊಟ್ರು ಪೂಜಾರಿ ಕೊಡಲ್ಲ ಎಂಬ ಮಾತಿದೆ. ಇದಕ್ಕೆ ತಕ್ಕ ಹಾಗೇ ಸದ್ಯದ ಕರ್ಮಷಿಯಲ್ ಮಳಿಗೆಗಳ ಪರಿಸ್ಥಿತಿ ಹೋಲಿಕೆ ಆಗುತ್ತಿದೆ. ನಗರದ ಅವಿನ್ಯೂ ರೋಡ್, ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆಯ ಅಡ್ಡರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಇಡೀ ರಸ್ತೆಗಳನ್ನ ಅಗೆದು ಕಾಮಗಾರಿಯ ಸಲಕರಣೆಗಳನ್ನ ಹಾಕಲಾಗಿದೆ. ಪರಿಣಾಮ ಬಹುತೇಕ ಶಾಪ್ ಗಳ ಬಾಗಿಲು ತೆಗೆಯುವುದು ಸದ್ಯ ಅಸಾಧ್ಯದ ಮಾತು. ಹೀಗಿರುವಾಗ ವ್ಯಾಪಾರ ಶುರು ಮಾಡಿ ಲಾಭವಂತೂ ದೂರದ ಮಾತಿದೆ. ಇದನ್ನೂ ಓದಿ: 16 ಜಿಲ್ಲೆಗಳಲ್ಲಿ ಸಂಜೆ 5ರವರೆಗೆ ಅನ್ಲಾಕ್- ನಿಯಮಗಳೇನು?
ಬಟ್ಟೆ, ಜ್ಯೂಯೆಲರಿ, ಎಲೆಕ್ಟ್ರಾನಿಕ್ ಗೂಡ್ಸ್ , ಸ್ಟೀಲ್ ಐಟಂ ಎಲ್ಲ ಹೋಲ್ ಸೆಲ್ ದರದಲ್ಲಿ ಸಿಗಲಿದೆ. ಇದಕ್ಕಾಗಿ ವ್ಯಾಪಾರಿಗಳು ಕಷ್ಟದಲ್ಲಿ ಮಳಿಗೆ ಓಪನ್ ಮಾಡಿದರೂ ಗ್ರಾಹಕರು ಬರಲು ಕಷ್ಟದ ಸ್ಥಿತಿ ಇದೆ. ರಸ್ತೆಯ ಒಳಗೆ ಬರಲು ,ಮತ್ತೆ ಶಾಪಿಂಗ್ ಮುಗಿಸಿ ಹೋಗಲು ನಡೆದು ಬರಬೇಕಾಗುತ್ತದೆ. ಕಡಿಮೆ ದರ ಎಂದು ಲೆಕ್ಕ ಹಾಕಿ ಖರೀದಿ ಜಾಸ್ತಿ ಮಾಡಿದರೂ, ಅದನ್ನ ಹೊತ್ತೊಯ್ಯಲು ವಾಹನಗಳ ಲಭ್ಯತೆ ಇರುವುದಿಲ್ಲ.
ಪ್ರಯಾಣಿಕರ ಪಾಸ್ ಅವಧಿ ವಿಸ್ತರಿಸಿದ ಬಿಎಂಟಿಸಿhttps://t.co/Iy4PvBrC3P#BMTC #BusPass #Passengers #KannadaNews #KarnatakaUnlock @BMTC_BENGALURU @LaxmanSavadi @CMofKarnataka
— PublicTV (@publictvnews) June 20, 2021