ಬೆಂಗಳೂರು: ಸೋಮವಾರದಿಂದ ಮೈಸೂರು ಜಿಲ್ಲೆಯಲ್ಲಿ ಬಸ್ ಸಂಚಾರ ಶುರುವಾಗಲಿದೆ ಎಂದು ಕೆಎಸ್ಆರ್ ಟಿಸಿ ಮಾಧ್ಯಮ ಪ್ರಕಟನೆ ಹೊರಡಿಸಿದೆ. ಪ್ರಯಾಣಿಕರ ಸಂಖ್ಯೆ ಹಾಗೂ ದಟ್ಟಣೆಗೆ ಅನುಗುಣವಾಗಿ ಬಸ್ ಸಂಚಾರಕ್ಕೆ ಸಿದ್ಧವಾಗಿದೆ. ನಗರ ಸಾರಿಗೆ, ಸಾಮಾನ್ಯ ಸಾರಿಗೆ ಮತ್ತು ದೂರ ಮಾರ್ಗದ ಸಾರಿಗೆ ಸಂಚಾರ ನಡೆಸಲು ನಿರ್ಧರಿಸಿದೆ.
ಕೋವಿಡ್ ನಿಯಮದ ಪ್ರಕಾರ ಶೇ.50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ಆರಂಭಿಸಲಿದೆ. ನಿಗಮದ ಬಸ್ಸುಗಳಲ್ಲಿ ಸಂಚರಿಸಿಸುವ ಪ್ರಯಾಣಿಕರು ಕೋವಿಡ್ 19 ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲನೆ ಮಾಡಲು ಸಹ ಕೋರಲಾಗಿದೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್ ಸಂಖ್ಯೆಯನ್ನ ಹೆಚ್ಚು ಮಾಡಲು ಸಾರಿಗೆ ಸಂಸ್ಥೆ ಪ್ಲಾನ್ ಮಾಡಿದೆ.
Advertisement
Advertisement
ಕೋವಿಡ್- 19 ಸೋಂಕು ಹರಡುವಿಕೆಯನ್ನ ತಪ್ಪಿಸಲು ಕರ್ನಾಟಕ ಸರ್ಕಾರ ಮೈಸೂರು ಜಿಲ್ಲೆಗೆ ವಿಧಿಸಿದ್ದ ನಿರ್ಬಂಧಗಳನ್ನ ಸಡಿಲ ಮಾಡಿತ್ತು. ಪಾಸಿಟಿವಿಟಿ ರೇಟ್ ಹೆಚ್ಚಿದ್ದ ಕಾರಣ ಅನ್ಲಾಕ್ ನಿಂದ ಮೈಸೂರು ಜಿಲ್ಲೆಗೆ ವಿನಾಯ್ತಿಯನ್ನ ಕೊಟ್ಟಿರಲಿಲ್ಲ. ಈಗ ಮೈಸೂರು ಪಾಸಿಟಿವಿಟಿ ರೇಟ್ ಕಡಿಮೆಯಾದ ಕಾರಣ ಕೆಲವನ್ನ ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿತ್ತು. ಇದರಿಂದಾಗಿ ಮೈಸೂರು ಜಿಲ್ಲೆಯಾದ್ಯಂತ ಸಾರಿಗೆ ಸಂಚಾರ ಮಾಡಲು ಕೆಎಸ್ಆರ್ ಟಿಸಿ ನಿರ್ಧಾರ ಮಾಡಿದೆ.