ಹಾವೇರಿ: ಕೊರೊನಾ ಸೋಂಕಿನಿಂದ ಮೃತಪಟ್ಟ ತಮ್ಮಕ್ಷೇತ್ರದ ಕುಟುಂಬದ ಸದಸ್ಯರಿಗೆ ವೈಯಕ್ತಿಕವಾಗಿ ಐವತ್ತು ಸಾವಿರ ರೂಪಾಯಿ ಪರಿಹಾರವಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ನೀಡಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಿರೇಕೋಣತಿ ಮತ್ತು ಸಾತೇನಹಳ್ಳಿ ಗ್ರಾಮದಲ್ಲಿ ಪರಿಹಾರ ವಿತರಣೆ ಮಾಡಿದರು.
Advertisement
ಕೊರೊನಾ ಸೋಂಕಿನಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಮೃತರ ಕುಟುಂಬಕ್ಕೆ ತಲಾ ಐವತ್ತು ಸಾವಿರ ರೂಪಾಯಿ ಪರಿಹಾರ ವಿತರಿಸಿ, ಅವರ ಆರೋಗ್ಯ ವಿಚಾರಿಸಿದರು. ನೀವು ಸಹ ಯಾವುದೇ ರೋಗ ಲಕ್ಷಣ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಆಗಮಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಕುಟುಂಬ ಸದಸ್ಯರಿಗೆ ಸಲಹೆ ನೀಡಿದರು. ಇದನ್ನೂ ಓದಿ: ಶಿಲ್ಪಾ ನಾಗ್ ಒಳ್ಳೆಯ ಐಎಎಸ್ ಅಧಿಕಾರಿ- ಮೈಸೂರು ಪಾಲಿಕೆ ಆಯುಕ್ತೆ ಪರ ಈಶ್ವರಪ್ಪ ಬ್ಯಾಟ್
Advertisement
Advertisement
ಕೊರೋನಾ ಸೋಂಕಿನಿಂದ ಮೃತಪಟ್ಟಿರುವ ಹಿರೇಕೆರೂರು ಕ್ಷೇತ್ರದ ಸಾತೇನಹಳ್ಳಿ ಗ್ರಾಮದ ನಿವಾಸಿಗಳಾದ ಬಸವರಾಜ್ ಮಾನೇರ್ ಹಾಗೂ ಸೋಮಸುಂದರ್ ಮಾನೇರ್ ಇವರ ಕುಟುಂಬ ಸದಸ್ಯರನ್ನು ಇಂದು ಭೇಟಿಯಾಗಿ, ಈ ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ನೆರವಾಗಲೆಂದು ವೈಯಕ್ತಿಕವಾಗಿ 50 ಸಾವಿರ ರೂ. ಗಳ ಸಹಾಯಧನವನ್ನು ನೀಡಿ, ಸಾಂತ್ವನ ಹೇಳಿ ಧೈರ್ಯ ತುಂಬಿದೆ.#Hirekerur pic.twitter.com/rY9fwTJ5Kc
— Kourava B.C.Patil (@bcpatilkourava) June 5, 2021
Advertisement
ಹಿರೇಕೆರೂರು ಮತ್ತು ರಟ್ಟಿಹಳ್ಳಿ ಕ್ಷೇತ್ರದಲ್ಲಿ ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ವೈಯಕ್ತಿಕವಾಗಿ ಐವತ್ತು ಸಾವಿರ ರೂಪಾಯಿ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಈವರೆಗೆ ಹಿರೇಕೆರೂರು ಕ್ಷೇತ್ರದಲ್ಲಿ ಮೃತಪಟ್ಟ 44 ಜನರ ಕುಟುಂಬಗಳಿಗೆ ಸಹಾಯಧನ ವಿತರಣೆ ಮಾಡಿದ್ದು,ಬಿ.ಪಿ.ಎಲ್ ಕಾರ್ಡ್ ಹೊಂದಿದ ಮೃತರ ಕುಟುಂಬಕ್ಕೆ ವಿತರಣೆ ಮಾಡುತ್ತಿದ್ದಾರೆ.