ಲಕ್ನೋ: ಶವಾಗರ ಮತ್ತು ಸ್ಮಶಾನದ ಬಳಿ ಶವಗಳ ಬಟ್ಟೆಗಳನ್ನು ಕದಿಯುತ್ತಿದ್ದ ಏಳು ಜನರನ್ನು ಪಶ್ಚಿಮ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
थाना बड़ौत पुलिस द्वारा शमशान घाट व कब्रिस्तान से कफन व वस्त्र चोरी कर बाजार में बेचने वाले गिरोह की गिरफ्तारी के सम्बंध में Co बड़ौत द्वारा दी गई वीडियो बाइट।@CMOfficeUP @Uppolice @adgzonemeerut @igrangemeerut pic.twitter.com/KE5IQoigvQ
— Baghpat Police (@baghpatpolice) May 9, 2021
Advertisement
ಏಳು ಜನರನ್ನು ಬಂಧಿಸಲಾಗಿದೆ. ಅವರು ಸತ್ತವರ ಮೈಮೇಲಿನ ಉಡುಪು, ಬೆಡ್ಶೀಟ್ಗಳು, ಶವಕ್ಕೆ ಹೊದಿಸಿದ್ದ ಬಟ್ಟೆಗಳನ್ನು ಕದಿಯಲೆತ್ನಿಸಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸುಮಾರು 520 ಬೆಡ್ಶೀಟ್ಗಳು, 127 ಕುರ್ತಾಗಳು, 52 ಬಿಳಿ ಸೀರೆಗಳು ಮತ್ತು ಇತರ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವೃತ್ತಾಧಿಕಾರಿ ಅಲೋಕ್ ಸಿಂಗ್ ಹೇಳಿದ್ದಾರೆ.
Advertisement
जनपद बागपत पुलिस ने शमशान घाट व कब्रिस्तान से कफन व वस्त्र चोरी कर बाजार में बेचने वाले गिरोह का किया भंडाफोड, सात अपराधी चोरी किये कफन व वस्त्रों सहित गिरफ्तार।@CMOfficeUP @Uppolice @adgzonemeerut @igrangemeerut pic.twitter.com/FCj4FqkXKT
— Baghpat Police (@baghpatpolice) May 9, 2021
Advertisement
ಬಟ್ಟೆಗಳನ್ನು ಚೆನ್ನಾಗಿ ತೊಳೆದು, ಇಸ್ತ್ರಿ ಮಾಡಿದ ನಂತರ ಗ್ವಾಲಿಯರ್ ಕಂಪನಿಯ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು. ಕದೀಮರು ಶವಗಳ ಬಟ್ಟೆ ಲೂಟಿ ಮಾಡುವುದಕ್ಕಾಗಿ ಈ ಪ್ರದೇಶದ ಕೆಲವು ಬಟ್ಟೆ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಪ್ರತಿದಿನ 300 ರೂ ಪಡೆಯುತ್ತಿದ್ದರು ಎಂದೂ ತಿಳಿಸಿದ್ದಾರೆ.
Advertisement