ಹುಬ್ಬಳ್ಳಿ: ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಸಿಕ್ತಾ ಇಲ್ಲ. ಬೆಡ್ ಸಿಕ್ಕವರಿಗೆ ಆಕ್ಸಿಜನ್ ಪೊರೈಕೆ ಇಲ್ಲ. ಸೋಂಕಿತರಿಗೆ ಬೆಡ್ ಆಕ್ಸಿಜನ್ ಸಿಕ್ಕರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಿಲ್ಲ ಅನ್ನೋ ಆರೋಪಗಳನ್ನ ಕೇಳ್ತಾನೇ ಇದ್ದೇವೆ. ಆದರೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಮಹಿಳೆಯರ ಆರೈಕೆ ಮಾಡ್ತಾ ಇರೋ ನರ್ಸಗಳ ಕಾರ್ಯಕ್ಕೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡನಲ್ಲಿ ನೂರಾರು ಕೋವಿಡ್ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಸೋಂಕಿತರನ್ನ ಇದೀಗ ನರ್ಸಗಳು, ದಾದಿಯರು ವಿಶೇಷ ಕಾಳಜಿ ವಹಿಸಿ ಆರೈಕೆ ಮಾಡುತ್ತಿದ್ದಾರೆ.
Advertisement
Advertisement
ಸೋಂಕಿತ ಮಹಿಳೆಗೆ ಬರೀ ಮಾತ್ರೆ, ಇಂಜೆಕ್ಷನ್, ಊಟ ಕೊಡುವ ಜೊತೆ ಜೊತೆಗೆ ಇಲ್ಲಿನ ದಾದಿಯರು, ನರ್ಸ್ ಗಳು ಸೋಂಕಿತರಿಗೆ ವಿಶೇಷ ಕಾಳಜಿ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಡ್ ಮೇಲೆ ಆಕ್ಸಿಜನ್ ಪಡೆಯುತ್ತಿದ್ದ ಸೋಂಕಿತ ಹಿಳೆಗೆ ನರ್ಸ್ ಒಬ್ಬರು ತಮ್ಮ ಮನೆಯ ಹಿರಿಯ ಸದಸ್ಯರಿಗೆ ಸೇವೆ ಮಾಡುವಂತೆ ಅವರ ತಲೆ ಬಾಚಿ ಜಡೆ ಹಾಕಿ ಆರೈಕೆ ಮಾಡುತ್ತಿರುವ ಫೋಟೋ ಇದೀಗ ಬಿಡುಗಡೆಯಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Advertisement
Advertisement
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ನಲ್ಲಿ ನರ್ಸ್, ದಾದಿಯರು ಪಿಪಿಇ ಕಿಟ್ ಹಾಕಿಕೊಂಡು ದಿನಪೂರ್ತಿ ಕೆಲಸ ಮಾಡುವುದರ ಜೊತೆಗೆ ಸೋಂಕಿತರಿಗೆ ವಿಶೇಷ ಆರೈಕೆ ಮಾಡುತ್ತಿರುವುದು ವಿಶೇಷವಾಗಿದೆ. ಅಲ್ಲದೇ 6 ಗಂಟೆಗಳ ಕಾಲ ಸತತವಾಗಿ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದೇ ದುಸ್ತರವಾಗಿರುವ ಸಮಯದಲ್ಲಿ ನರ್ಸಗಳು ವಿಶೇಷ ಕಾಳಜಿವಹಿಸಿ ಮಹಿಳೆಯೊಬ್ಬರಿಗೆ ತಲೆಬಾಚಿ ಜಡೆ ಹಾಕಿರುವುದು ನಿಜಕ್ಕೂ ಮಾನವೀಯತೆಗೆ ಸಾಕ್ಷಿಯಾಗಿದೆ.