ಗದಗ: ಸೈಬರ್ ಖದೀಮರು ಸೈನಿಕನಿಗೆ 1.70 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ಸಿಕ್ಕಿಂ ರಾಜ್ಯದ ಗಡಿಯಲ್ಲಿ ದೇಶಸೇವೆ ಮಾಡುತ್ತಿರುವ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಈರಪ್ಪ ಅವರಿಗೆ ಸೈಬರ್ ಖದೀಮರು ಮೋಸ ಮಾಡಿದ್ದಾರೆ. ಬರೋಬ್ಬರಿ 1.70 ಲಕ್ಷ ರೂ.ಗಳನ್ನು ಈರಪ್ಪ ಕಳೆದುಕೊಂಡಿದ್ದಾರೆ.
Advertisement
Advertisement
ಆಗಿದ್ದೆನು?
ವೈಯಕ್ತಿಕ ಕೆಲಸದ ನಿಮಿತ್ತ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಈರಪ್ಪ, ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ ಹಿರಿಯ ಅಧಿಕಾರಿಗಳು ಸದ್ಯಕ್ಕೆ ಬೇಡ ಇನ್ನೊಂದಿಷ್ಟು ದಿನ ಬಿಟ್ಟು ಬರಲು ಹೇಳಿದ್ದಾರೆ. ಇದರಿಂದಾಗಿ ಬುಕ್ ಮಾಡಿಸಿದ್ದ ಟಿಕೆಟ್ ರದ್ದು ಪಡಿಸಲು ಗೂಗಲ್ ತಡಕಾಡಿದ್ದಾರೆ. ಆಗ ಸಿಕ್ಕ ನಂಬರ್ಗೆ ಕರೆ ಮಾಡಿದಾಗ ಎನಿಡೆಸ್ಕ್ ಸಾಫ್ಟ್ವೇರ್ ಹಾಕಿಕೊಂಡು ಆಕ್ಸಸ್ ಕೊಡಲು ಸೂಚಿಸಿದ್ದಾರೆ.
Advertisement
ವಂಚಕರು ಹೇಳಿದಂತೆ ಎನಿಡೆಸ್ಕ್ ಆರಂಭವಾಗುತ್ತಿದ್ದಂತೆ ಸೈಬರ್ ಖದೀಮರು ಅಸಲಿ ಆಟ ಶುರುಮಾಡಿಕೊಂಡಿದ್ದಾರೆ. ಯೂಸರ್ ನೇಮ್, ಪಾಸ್ವರ್ಡ್ ಹಾಕಲು ಹೇಳಿ, ಅದರಿಂದ ಬಂದ ಓಟಿಪಿ ನಂಬರ್ ಕೇಳಿದ್ದಾರೆ. ಖದೀಮರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಸೈನಿಕ ಈರಪ್ಪ ಉತ್ತರ ನೀಡುತ್ತಾ ಹೋಗಿದ್ದಾರೆ.
Advertisement
ಹೀಗೆ ಎಸ್ಬಿಐ ಬ್ಯಾಂಕಿನ ಅಕೌಂಟ್ ನಂಬರ್ ನಿಂದ 1.70 ಲಕ್ಷ ರೂ. ಹಣವನ್ನು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಿಂದ ಕಂಗಾಲಾದ ಸೈನಿಕ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆಯ ಇನ್ಸ್ಪೆಪೆಕ್ಟರ್ ಟಿ.ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.