ಭೋಪಾಲ್: ಸೆಲ್ಫಿ ಕುರಿತು ಎಷ್ಟೇ ಅರಿವು ಮೂಡಿಸಿದರೂ ಪ್ರಯೋಜನವಿಲ್ಲದಂತಾಗಿದ್ದು, ಹೆಚ್ಚಿನ ಯುವ ಸಮೂಹ ಸೆಲ್ಫಿಗಾಗಿ ಅಪಾಯ ತಂದೊಡ್ಡಿಕೊಳ್ಳುತ್ತಿದೆ. ಅದೇ ರೀತಿಯ ಪ್ರಕರಣ ಇದೀಗ ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಸೆಲ್ಫಿ ಕ್ಲಿಕ್ಕಿಸಲು ನದಿ ಮಧ್ಯೆ ಹೋದ ಇಬ್ಬರು ಯುವತಿಯರು ಅಲ್ಲೇ ಸಿಲುಕಿದ್ದಾರೆ.
ಮಧ್ಯ ಪ್ರದೇಶದ ಚಿಂದ್ವಾರ ಜಿಲ್ಲೆಯ ಪೆಂಚ್ ನದಿಯಲ್ಲಿ ಘಟನೆ ನಡೆದಿದ್ದು, ಯುವತಿಯರಿಬ್ಬರು ಸೆಲ್ಫಿ ಕ್ಲಿಕ್ಕಿಸಲು ಹೋಗಿ ನದಿ ಮಧ್ಯದಲ್ಲೇ ಸಿಲುಕಿ ಪರದಾಡಿದ್ದಾರೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸೆಲ್ಫಿ ಗೀಳಿನಿಂದ ಯುವತಿಯರು ನದಿಗೆ ಇಳಿದಿದ್ದಾರೆ. ಆಗ ಇದ್ದಕ್ಕಿದ್ದಂತೆ ನೀರು ಹೆಚ್ಚಾಗಿದ್ದು, ಇಬ್ಬರೂ ನದಿಯಲ್ಲೇ ಸಿಲುಕಿಕೊಂಡಿದ್ದಾರೆ.
Advertisement
Two #MadhyaPradesh girls venture into the Pench river to take selfie, get trapped in swelling water pic.twitter.com/M3sJ2tjTwA
— Adarsh kumar Bejjenki (@AdarshSunny9) July 24, 2020
Advertisement
ನದಿ ಮಧ್ಯೆ ಸಿಲುಕಿದ ಯುವತಿಯರನ್ನು ಪೊಲೀಸರು ಹಾಗೂ ಇತರ ಅಧಿಕಾರಿಗಳು ರಭಸದಿಂದ ಹರಿಯುತ್ತಿದ್ದ ನೀರು ದಾಟಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Advertisement
ಯುವತಿಯರ ಗುಂಪೊಂದು ಪಿಕ್ನಿಕ್ಗೆ ಬೆಳ್ಕೇಡಿಗೆ ತೆರಳಿದ್ದು, ಕೊರೊನಾ ವೈರಸ್ ಹಿನ್ನೆಲೆ ಗುಂಪಾಗಿ ಸೇರದಂತೆ ಎಲ್ಲರೂ ಇಬ್ಬಿಬ್ಬರಂತೆ ಬೇರೆ ಆಗಿದ್ದಾರೆ. ಆಗ ಈ ಇಬ್ಬರು ಸೆಲ್ಫಿ ತೆಗೆದುಕೊಳ್ಳಲು ನದಿ ಬಳಿ ತೆರಳಿದ್ದಾರೆ. ಈ ವೇಳೆ ನದಿಯ ಮಧ್ಯಕ್ಕೆ ಹೋಗಿದ್ದು, ಸೆಲ್ಫಿ ಕ್ಲಿಕ್ಕಿಸುವಷ್ಟರಲ್ಲಿ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬಂದಿದೆ. ಈ ವೇಳೆ ಇಬ್ಬರೂ ಮಧ್ಯದಲ್ಲೇ ಸಿಲುಕಿದ್ದಾರೆ. ತಕ್ಷಣವೇ ಇಬ್ಬರು ಹುಡುಗಿಯರ ಉಳಿದ ಸ್ನೇಹಿತೆಯರು ಪೊಲೀಸ್ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ರಕ್ಷಿಸಲಾಗಿದೆ.