-ನಟನ ಪ್ರೇಯಸಿ ಸುತ್ತ ಅನುಮಾನದ ಹುತ್ತ
-ಬಿಹಾರ ಮೂಲದ ಯುವ ನಟ
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಂತರ ಮತ್ತೋರ್ವ ನಟ ಅಕ್ಷತ್ ಉತ್ಕರ್ಷ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಕ್ಷತ್ ಪ್ರೇಯಸಿ ಮತ್ತು ಆತನ ಗೆಳೆಯರ ಮೇಲೆ ಅನುಮಾನಗಳು ವ್ಯಕ್ತವಾಗಿವೆ. ಬಿಹಾರದ ಮುಜಫರ್ ನಗರ ಮೂಲದ ಅಕ್ಷತ್ ಮುಂಬೈನಲ್ಲಿ ಉಳಿದುಕೊಂಡಿದ್ದರು. ಕೆಲಸದ ಜೊತೆಯಲ್ಲಿ ಅಲ್ಬಂಗಳಲ್ಲಿಯೂ ಅಕ್ಷತ್ ಕಾಣಿಸಿಕೊಂಡಿದ್ದರು.
Advertisement
ಮುಜಫರ್ ನಗರದ ಸಿಕಂದರಪುರ ನಾಲಾ ರಸ್ತೆಯ ನಿವಾಸಿಯಾಗಿದ್ದ ಅಕ್ಷತ್ ಉದ್ಯೋಗ ಅರಸಿ ಮುಂಬೈಗೆ ಬಂದಿದ್ದರು. ಮುಂಬೈನ ಸುರೇಶ್ ನಗರದಲ್ಲಿರುವ ಪಶ್ಚಿಮ ಅಂಧೇರಿಯ ಆರ್ ಟಿಓ ಲೈನ್ ಕಟ್ಟಡದಲ್ಲಿ ಅಕ್ಷತ್ ವಾಸವಾಗಿದ್ದರು. ಅಕ್ಷತ್ ವಾಸವಾಗಿದ್ದ ಸ್ಥಳದ ಕೂಗಳತೆ ದೂರದಲ್ಲಿಯೇ ಗೆಳತಿ ಮತ್ತು ಆತನ ಗೆಳೆಯರು ವಾಸವಾಗಿದ್ದರು. ಸದ್ಯ ಅಕ್ಷತ್ ಜೊತೆಯಲ್ಲಿರುತ್ತಿದ್ದ ಫ್ರೆಂಡ್ಸ್ ಸರ್ಕಲ್ ಮೇಲೆ ಅನುಮಾನಗಳು ವ್ಯಕ್ತವಾಗಿವೆ.
Advertisement
Advertisement
ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಅಕ್ಷತ್ ತಂದೆ ಜೊತೆ ಫೋನ್ ನಲ್ಲಿ ಮಾತನಾಡಿದ್ದಾನೆ. ಅದಾದ ಬಳಿಕ ಅಕ್ಷತ್ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಂದು ತಡರಾತ್ರಿ ಅಕ್ಷತ್ ಸಾವಿನ ಬಗ್ಗೆ ನಮಗೆ ಮಾಹಿತಿ ಬಂತು. ಮುಂಬೈ ಪೊಲೀಸರು ನಮಗೆ ಯಾವುದೇ ಮಾಹಿತಿ ನೀಡಲಿಲ್ಲ ಎಂದು ಅಕ್ಷತ್ ಮಾವ ರಂಜಿತ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಎಲ್ಲ ಆಯಾಮಗಳಲ್ಲಿ ಸುಶಾಂತ್ ಕೇಸ್ ತನಿಖೆ: ಸಿಬಿಐ
Advertisement
ಅಕ್ಷತ್ ಸಾವು ಆಗಿದೆಯಾ ಅಥವಾ ಇಲ್ಲವಾ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಸಿಗದ ಹಿನ್ನೆಲೆ ಮುಂಬೈಗೆ ದೌಡಾಯಿಸಿದೆ. ಅಕ್ಷತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ಕೆಲವರು ಮಾಹಿತಿ ನೀಡಿದ್ರೆ, ಆತನ ಗೆಳೆಯರು ಅಕ್ಷತ್ ತಂದೆಗೆ ಫೋನ್ ಮಗ ಸಾವು ಆಗಿದೆ ಅಂತಾ ಹೇಳಿದ್ದರು. ಕೊನೆಗೆ ಮುಂಬೈಗೆ ಬಂದಾಗ ಅಕ್ಷತ್ ನಮ್ಮನ್ನು ಅಗಲಿರುವ ವಿಷಯ ತಿಳಿಯಿತು ಎಂದು ರಂಜಿತ್ ಸಿಂಗ್ ಕಣ್ಣೀರು ಹಾಕುತ್ತಾರೆ. ಇದನ್ನೂ ಓದಿ: ಸುಶಾಂತ್ ತನ್ನ ಹೆಸರಿನಲ್ಲಾಗ್ತಿರುವ ಸರ್ಕಸ್ ನೋಡಿ ನಗುತ್ತಿರಬಹುದು: ಸೋನು ಸೂದ್
ಅಕ್ಷತ್ ಜೊತೆ ವಾಸವಾಗಿದ್ದ ಸ್ನೇಹಾ ಚೌಹಾಣ್ ಮಾತನಾಡಿ, ಬಣ್ಣದ ಲೋಕದಲ್ಲಿ ಮಿಂಚಲು ಕಷ್ಟುಪಡುತ್ತಿದ್ದನು. ನಿಧನಕ್ಕೂ ಮುನ್ನ ಅಕ್ಷತ್ ಫೋನ್ ನಲ್ಲಿ ಒಬ್ಬರ ಜೊತೆ ಮಾತನಾಡುತ್ತಿದ್ದನು ಎಂದು ಹೇಳಿದ್ದಾರೆ. ಆದ್ರೆ ಅಕ್ಷತ್ ಸಾವು ಹೇಗಾಯಿತು ಎಂಬುವುದು ತಿಳಿದು ಬಂದಿಲ್ಲ. ಇತ್ತ ಸ್ನೇಹಾ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸುಶಾಂತ್ನನ್ನು ಕತ್ತುಹಿಸುಕಿ ಕೊಲೆ ಮಾಡಲಾಗಿದೆ: ಲಾಯರ್ ವಿಕಾಸ್ ಸಿಂಗ್
ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಅವರ ಬಾಂದ್ರಾದ ನಿವಾಸದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಮಾನಸಿಕ ಖಿನ್ನತೆಯಿಂದಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ನಟಿ ಕಂಗನಾ ರಣಾವತ್ ಮತ್ತು ಸುಶಾಂತ್ ಅಭಿಮಾನಿಗಳು ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿ, ಸಿಬಿಐ ತನಿಖೆ ನಡೆಯಬೇಕೆಂದು ಅಭಿಯಾನ ಆರಂಭಿಸಿದ್ದರು. ಬಿಹಾರ ಮತ್ತು ಮುಂಬೈ ಪೊಲೀಸರ ಹಗ್ಗ ಜಗ್ಗಾಟದಲ್ಲಿ ಸುಶಾಂತ್ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿದೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರೇರಣೆ – ಚಂದ್ರನ ಮೇಲೆ ಭೂಮಿ ಖರೀದಿಸಿ ಮಡದಿಗೆ ಗಿಫ್ಟ್ ಕೊಟ್ಟ!