-ಕೊಲೆಯ ಸಂಚು ಎಂದ ಸುಶಾಂತ್ ಪರ ವಕೀಲ
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ಪ್ರೇಯಸಿ ರಿಯಾ ಚಕ್ರವರ್ತಿ ಮತ್ತಷ್ಟು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಜೂನ್ 8ರಂದು ಸುಶಾಂತ್ ಮನೆಯಿಂದ ಹೊರಡುವ ಮುನ್ನ ರಿಯಾ ಚಕ್ರವರ್ತಿ ಎಂಟು ಹಾರ್ಡ್ ಡಿಸ್ಕ್ ಗಳಲ್ಲಿನ ಡೇಟಾ ಡಿಲೀಟ್ ಮಾಡಿದ್ದು, ಇದೊಂದು ಕೊಲೆಯ ಸಂಚು ಎಂದು ಸುಶಾಂತ್ ಪರ ವಕೀಲರಾದ ವಿಕಾಸ್ ಸಿಂಗ್ ಆರೋಪಿಸಿದ್ದಾರೆ.
ಪ್ರಕರಣ ಸಿಬಿಐಗೆ ವರ್ಗಾವಣೆಯಾಗ್ತಿದ್ದಂತೆ ಸುಶಾಂತ್ ಸಾವಿನ ನೆರಳಿನಲ್ಲಿ ಅವಿತುಕೊಂಡಿದ್ದ ಹೆಸರುಗಳು ಬೆಳಕಿಗೆ ಬರುತ್ತಿವೆ. ಸುಶಾಂತ್ ಆಪ್ತ ಸಿದ್ಧಾರ್ಥ್ ಪಿಠಾಣಿ ಸಿಬಿಐ ವಿಚಾರಣೆ ವೇಳೆ ರಿಯಾ ಹಾರ್ಡ್ ಡಿಸ್ಕ್ ನಲ್ಲಿದ ಮಾಹಿತಿ ಡಿಲೀಟ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಇಡಿ ಬಳಿಕ ಮತ್ತೊಂದು ಸಂಕಷ್ಟದಲ್ಲಿ ಸುಶಾಂತ್ ಪ್ರೇಯಸಿ ರಿಯಾ
Advertisement
Advertisement
ಸುಶಾಂತ್ ಸಮ್ಮುಖದಲ್ಲಿ ಡೇಟಾ ಡಿಲೀಟ್ ಮಾಡಲಾಯ್ತು. ಆಗ ಸುಶಾಂತ್ ಅಡ್ಡಿ ಸಹ ಮಾಡಿಲ್ಲ ಎಂದು ಸಿದ್ಧಾರ್ಥ್ ಹೇಳಿದ್ದು, ಹಾರ್ಡ್ ಡಿಸ್ಕ್ ನಲ್ಲಿ ಏನಿತ್ತು ಎಂಬುದರ ಬಗ್ಗೆ ತಿಳಿಸಿಲ್ಲ. ಸದ್ಯ ಸಿಬಿಐ ಆ ಎಂಟು ಹಾರ್ಡ್ ಡಿಸ್ಕ್ ನಲ್ಲಿ ಯಾವ ಮಾಹಿತಿ ಸಂಗ್ರಹಿಸಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದೆ. ಜೂನ್ 8 ರಂದು ರಿಯಾ ತಮ್ಮ ಮನೆಗೆ ತೆರಳಿದ್ದರು. ಜೂನ್ 14ರಂದು ಸುಶಾಂತ್ ಶವ ಅವರ ಬಾಂದ್ರಾ ನಿವಾಸದಲ್ಲಿ ಪತ್ತೆಯಾಗಿತ್ತು. ಸುಶಾಂತ್ ನಿಧನದ ದಿನ ಮನೆಯಲ್ಲಿದ್ದ ಸಿದ್ಧಾರ್ಥ್ ಪಿಠಾಣಿ, ದೀಪೇಶ್ ಮತ್ತು ಕುಕ್ ನೀರಜ್ ಸಿಂಗ್ ಮೂವರನ್ನು ಅಧಿಕಾರಿಗಳು ಕಠಿಣ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ
Advertisement
Advertisement
ಜೂನ್ 8ರಂದು ರಿಯಾ ಸೋದರ ಶೌವಿಕ್ ನನ್ನ ಸುಶಾಂತ್ ಮನೆಗೆ ಕರೆಸಿಕೊಂಡಿದ್ದರು. ನಂತರ ಇಬ್ಬರು ಮೂರು ಸೂಟ್ಕೇಸ್ ಸಮೇಯ ಅಲ್ಲಿಂದ ಹೋಗಿರೋದನ್ನ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಖಚಿತಪಡಿಸಿದ್ದಾರೆ. ಬುಧವಾರ ಸಿಬಿಐ ಅಧಿಕಾರಿಗಳು ಕಟ್ಟಡದ ಸೆಕ್ಯುರಿಟಿ ಗಾರ್ಡ್ ನನ್ನು ಸಹ ವಿಚಾರಣೆ ನಡೆಸಿದ್ದರು. ಇನ್ನು 8 ಹಾರ್ಡ್ ಡಿಸ್ಕ್ ನಲ್ಲಿ ರಿಯಾ ಮತ್ತು ಸುಶಾಂತ್ ಖಾಸಗಿ ಫೋಟೋ ಮತ್ತು ವಿಡಿಯೋಗಳಿತ್ತು ಎಂದು ಹೇಳಲಾಗ್ತಿದ್ದು, ದೃಢಪಟ್ಟಿಲ್ಲ. ಇದನ್ನೂ ಓದಿ: ಸರ್ ನಿಧನದ ಬಳಿಕ ಮನೆಯಲ್ಲಿದ್ದ ಡ್ರಗ್ ಸಿಗರೇಟ್ ರೋಲ್ ಮಾಯವಾಯ್ತು: ಸುಶಾಂತ್ ಮನೆಯ ಕುಕ್
ಇಡಿ ಅಧಿಕಾರಿಗಳಿಗೆ ಡ್ರಗ್ಸ್ ಸೇವನೆ ಮತ್ತು ಮಾರಾಟದ ಬಗ್ಗೆ ಅನುಮಾನಗಳು ವ್ಯಕ್ತವಾದ ಹಿನ್ನೆಲೆ ಪ್ರಕರಣದ ಮಾಹಿತಿ ಎನ್ಬಿಸಿ ನೀಡಿತ್ತು. ಈ ಸಂಬಂಧ ಸದ್ಯ ಎನ್ಬಿಸಿ ರಿಯಾ ಸೇರಿದಂತೆ ಕೆಲವರ ವಿರುದ್ಧ ಎನ್ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಮತ್ತು ಬರಿಸುವ ವಸ್ತುಗಳ ನಿಯಂತ್ರಣ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ಇದನ್ನೂ ಓದಿ: ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ
ಈಗಾಗಲೇ ಇಡಿಯಲ್ಲಿ ರಿಯಾ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ವಿಚಾರಣೆಯನ್ನು ಸಹ ಎದುರಿಸಿದ್ದಾರೆ. ಇಡಿ ಅಧಿಕಾರಿಗಳು ಡ್ರಗ್ಸ್ ಡೀಲರ್ ಜೊತೆ ರಿಯಾ ಸಂಪರ್ಕ ಹೊಂದಿರೋದನ್ನ ಪತ್ತೆ ಮಾಡಿದ್ದರು. ಈ ಹಿನ್ನೆಲೆ ಸುಶಾಂತ್ ಮತ್ತು ರಿಯಾ ನಡೆಸಿದ್ದ ವಾಟ್ಸಪ್ ಸಂದೇಶಗಳ ಸ್ಕ್ರೀನ್ ಶಾಟ್ ಫೋಟೋಗಳನ್ನ ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)ಗೆ ವರ್ಗಾಯಿಸಿದ್ದರು. ಇಡಿ ಕಳುಹಿಸಿದ ದಾಖಲೆಗಳನ್ವಯ ಎನ್ಸಿಬಿ ಪ್ರಕರಣ ದಾಖಲಿಸಿಕೊಂಡಿದೆ. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ
ರಿಯಾರನ್ನ ವಿಚಾರಣೆಗೆ ಒಳಪಡಿಸಿದ್ದಾಗ ಇಡಿ ಅಧಿಕಾರಿಗಳ ನಾಲ್ಕು ಮೊಬೈಲ್, ಒಂದು ಐಪ್ಯಾಡ್ ಮತ್ತು ಲ್ಯಾಪ್ಟಾಪ್ ವಶಕ್ಕೆ ಪಡೆದುಕೊಂಡಿದ್ದರು. ನಾಲ್ಕು ಮೊಬೈಲ್ ಗಳಲ್ಲಿ ರಿಯಾ ಬಳಸುತ್ತಿದ್ದ ಎರಡು ಸೆಟ್ ಗಳಿದ್ದವು. ಮೊಬೈಲ್ ಗಳನ್ನು ಫೊರೆನಿಕ್ಸ್ ಲ್ಯಾಬ್ ಗೆ ಕಳುಹಿಸಿದ್ದಾಗ ರಿಯಾ ಮತ್ತು ಸುಶಾಂತ್ ನಡುವಿನ ಚಾಟ್ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ನೀಡಿದ್ದವು. ಹೀಗಾಗಿ ಎನ್ಸಿಗೆ ಇಡಿ ಸುಧೀರ್ಘವಾದ ಪತ್ರ ಬರೆದು ಪ್ರಕರಣದ ಮಾಹಿತಿ ನೀಡಿತ್ತು. ಪತ್ರದಲ್ಲಿ ಎಂಡಿಎಂಎ ಡ್ರಗ್ಸ್, ಗಾಂಜಾ, ಎಲ್ಸಿಡಿ ಡ್ರಗ್ ಹೆಸರುಗಳನ್ನು ಇಡಿ ಉಲ್ಲೇಖಿಸಿತ್ತು. ಇದರ ಜೊತೆ ರಿಯಾ ವ್ಯವಹರಿಸುತ್ತಿದ್ದ ಕೆಲ ಡ್ರಗ್ ಡೀಲರ್ ಗಳ ಮೊಬೈಲ್ ನಂಬರ್ ಸಹ ನೀಡಿತ್ತು. ಇದನ್ನೂ ಓದಿ: ಜೂನ್ 14ರಂದು ನಡೆದ ಘಟನೆ ಎಳೆ ಎಳೆಯಾಗಿ ಬಿಚ್ಚಿಟ್ಟ ಕೋಣೆ ಬಾಗಿಲು ಒಡೆದ ವ್ಯಕ್ತಿ