ಹಾಸನ: ಕೊರೊನಾ ವಾರಿಯರ್ ಗಳನ್ನ ಅಶ್ಲೀಲ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಅಶ್ಲೀಲವಾಗಿ ತಮ್ಮನ್ನು ನಿಂದಿಸಿದ ಕುಟುಂಬಸ್ಥರ ವಿರುದ್ಧ ವೈದ್ಯಕೀಯ ಸಿಬ್ಬಂದಿ ಆಕ್ರೋಶ ಹೊರ ಹಾಕಿದ್ದಾರೆ. ಆಲೂರು ತಾಲೂಕಿನ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರ ಮನೆ ಸೀಲ್ಡೌನ್ ಮಾಡಲು ಅಧಿಕಾರಿಗಳು ತೆರಳಿದ್ದರು. ಆದ್ರೆ ಮನೆಯವರು ಒಂದು ವರದಿಯಲ್ಲಿ ನೆಗೆಟಿವ್ ಎಂದಿದೆ. ಮತ್ತೊಂದು ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ ಎಂದು ವರದಿಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಸೀಲ್ಡೌನ್ ಮಾಡಲು ಒಪ್ಪಿಗೆ ನೀಡಲಿಲ್ಲ. ನಮ್ಮದು ರೈತಾಪಿ ಕುಟುಂಬ. ನೀವು ಸೀಲ್ಡೌನ್ ಮಾಡಿದ್ರೆ ದನಕರುಗಳ ಗತಿಯೇನು. ನಮ್ಮ ಜೀವನ ಹೇಗೆ ನಡೆಯಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ
Advertisement
Advertisement
ತಹಶಿಲ್ದಾರ್, ಪೊಲೀಸ್, ವೈದ್ಯಾಧಿಕಾರಿಗಳು ಬಂದು ತಿಳಿ ಹೇಳಿದರೂ ಕುಟುಂಬಸ್ಥರು ಮಾತು ಕೇಳಿರಲಿಲ್ಲ. ನಿಮ್ಮ ನಡೆ ನುಡಿಯಲ್ಲಿ ಸಂಸ್ಕಾರ ಇರಬೇಕು. ನೀವು ನಮ್ಮನ್ನು ಅಶ್ಲೀಲವಾಗಿ ಬೈದಿರುವುದು ರೆಕಾರ್ಡ್ ಇದೆ. ನಿಮ್ಮ ವಿರುದ್ಧ ದೂರು ಕೊಟ್ಟರೆ ಏನಾಗುತ್ತೆ ಗೊತ್ತಾ. ಅಶ್ಲೀಲವಾಗಿ ಬೈದವನ ಕರೆತನ್ನಿ. ಅವನ ವಿರುದ್ಧ ದೂರು ದಾಖಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
Advertisement
ವೈದ್ಯಾಧಿಕಾರಿಗಳು ತಿಳಿ ಹೇಳುವುದು, ಮನೆಯವರು ಆಕ್ರೋಶ ಹೊರಹಾಕುವ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.