ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಝೋನ್ಗಳು ಸಹ ಅಧಿಕವಾಗುತ್ತಿವೆ. ಹೀಗಾಗಿ ಬ್ಯಾರಿಕೇಡ್ಗಳ ಸಮಸ್ಯೆ ಎದುರಾಗುತ್ತಿದೆ.
ಬೆಂಗಳೂರು ನಗರದಲ್ಲಿ ಸೀಲ್ಡೌನ್ ಏರಿಯಾಗಳೇನು ಕಡಿಮೆ ಆಗುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಿವೆ. ಅಲ್ಲದೇ ಕಂಟೈನ್ಮೆಂಟ್, ಸೀಲ್ಡೌನ್ ಏರಿಯಾಗಳಿಂದ ಒಂದಿಲ್ಲ ಒಂದು ಸಂಕಷ್ಟ ಬರುತ್ತಲೆ ಇದೆ. ಈಗ ಸೀಲ್ಡೌನ್, ಕಂಟೈನ್ಮೆಂಟ್ ಝೋನ್ಗಳು ಹೆಚ್ಚಾಗಿರುವುದರಿಂದ ಸೀಲ್ ಮಾಡುವುದಕ್ಕೆ ಬ್ಯಾರಿಕೇಡ್ಗಳೇ ಇಲ್ಲದಂತಾಗಿದೆ.
Advertisement
Advertisement
ಸೀಲ್ ಮಾಡುವಾಗ ಬ್ಯಾರಿಕೇಡ್ಗಳ ಅವಶ್ಯಕತೆ ತುಂಬಾ ಇದೆ. ಆದರೆ ಈಗ ಎಲ್ಲೆಲ್ಲೂ ಸೀಲ್ಡೌನ್ ಆಗಿರುವುದರಿಂದ ಪೊಲೀಸರ ಬ್ಯಾರಿಕೇಡ್ಗಳು ಮುಗಿದು ಹೋಗಿದೆ. ಜೊತೆಗೆ ಪೊಲೀಸರು ಅನಿವಾರ್ಯವಾಗಿ ಶಾಮಿಯಾನದವರ ಬಳಿ ಬ್ಯಾರಿಕೇಡ್ಗಳನ್ನು ತಂದು ಸೀಲ್ಡೌನ್ ಮಾಡುತ್ತಿದ್ದಾರೆ.
Advertisement
ಬಾಡಿಗೆಗೆ ತಂದು ಸೀಲ್ ಮಾಡುವುದು ಕಷ್ಟ ಆಗುತ್ತಿದೆ. ಶಾಮಿಯಾನದವರೂ ಕೂಡ ಸೀಲ್ಡೌನ್ ಏರಿಯಾ ಅಂದರೆ ಬಾಡಿಗೆಗೆ ಬ್ಯಾರಿಕೇಡ್ ಕೊಡುತ್ತಿಲ್ಲ. ಇನ್ನೂ ಸ್ವಲ್ಪ ದಿನ ಹೀಗೆ ಕೊರೊನಾ ಪ್ರಕರಣ ಜಾಸ್ತಿಯಾದರೆ ಸೀಲ್ ಮಾಡುವುದನ್ನೇ ಬಿಡಬೇಕಾಗುತ್ತೆ ಎಂದು ಪೊಲೀಸ್ ಸಿಬ್ಬಂದಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Advertisement