ಮಾಸ್ಕೋ: ನಟಿ ತಾಪ್ಸಿ ಪನ್ನು ಸೀರೆಯುಟ್ಟು ವಿದೇಶದಲ್ಲಿ ಸುತ್ತಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ತಾಪ್ಸಿ ಪನ್ನು ತಮ್ಮತಂಗಿ ಶಗುನ್ ಪನ್ನು ಜೊತೆಗೆ ವಿದೇಶದಲ್ಲಿ ರಜೆಯ ಮಜದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾಪ್ಸಿ ಅವರ ಪ್ರವಾಸದ ಚಿತ್ರಗಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ತಾಪ್ಸಿ ಸೀರೆಯನ್ನು ತೊಟ್ಟಿದ್ದಾರೆ. ಸೀರೆಯುಟ್ಟು ಶೂ ತೊಟ್ಟು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ತಾಪ್ಸಿ ಹಂಚಿಕೊಂಡಿದ್ದಾರೆ. ನೆಟ್ಟಗರು ಸೀರೆಯಲ್ಲಿ ತಾಪ್ಸಿ ವಿದೇಶ ಸುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆ ನಡೆಸಬಾರದು: ವಾಟಳ್ ನಾಗರಾಜ್
View this post on Instagram
ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಾಪ್ಸಿ ಸದ್ಯ ಕೊಂಚ ಬ್ರೇಕ್ ಪಡೆದಿದ್ದು ವಿದೇಶ ಪ್ರವಾಸದಲ್ಲಿದ್ದಾರೆ. ತನ್ನ ತಂಗಿಯ ಜೊತೆಗೆ ರಷ್ಯಾದ ಮಾಸ್ಕೋನಲ್ಲಿ ಸುತ್ತಾಡುತ್ತಿದ್ದಾರೆ. ವಿದೇಶ ಪ್ರವಾಸದಲ್ಲೂ ತಾಪ್ಸಿ ಭಾರತೀಯ ಸಂಸ್ಕೃತಿಯ ಉಡುಪನ್ನು ತೊಟ್ಟಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ಬಾಯ್ಫ್ರೆಂಡ್ ಮಥಿಯಾಸ್ ಜತೆ ಲವ್ ರಿಲೇಶನ್ ಶಿಪ್ನಲ್ಲಿದ್ದೇನೆ. ಆದರೆ ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ತನಗೆ ಮಕ್ಕಳು ಬೇಕೆನಿಸಿದಾಗ ಮದುವೆಯಾಗುತ್ತೇನೆ. ಸದ್ಯಕ್ಕೆ ಆ ಆಲೋಚನೆ ಇಲ್ಲ. ಸದ್ಯಕ್ಕೆ ಏನಿದ್ದರೂ ತನ್ನ ಗಮನವೆಲ್ಲ ಸಿನಿಮಾದತ್ತ ಇದೆ. ತಾನು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸದಾ ಪ್ರತ್ಯೇಕವಾಗಿ ನೋಡುತ್ತೇನೆ. ಎರಡನ್ನೂ ಮಿಕ್ಸ್ ಮಾಡುವುದಿಲ್ಲ ಎಂದು ಲವ್ ಲೈಫ್ ಹಾಗೂ ಬಾಯ್ ಫ್ರೆಂಡ್ ಬಗ್ಗೆ ಈ ಹಿಂದೆ ತಾಪ್ಸಿ ಹೇಳಿಕೊಂಡಿದ್ದರು.
ನಟಿ ತಾಪ್ಸಿ ಪನ್ನು ಸದಾ ಒಂದಿಲ್ಲೊಂದು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ. ಈ ಬಾರಿ ಅವರು ಹಸೀನ್ ದಿಲ್ರುಬಾ ಚಿತ್ರಕ್ಕಾಗಿ ಹಾಟ್ ಅವತಾರ ತಾಳಿದ್ದಾರೆ. ಇತ್ತಿಚೇಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.