ಬೆಂಗಳೂರು: ಕೋಟಿ ಕೋಟಿ ಹಣದ ಆರೋಪ ಮತ್ತು ಯುವರಾಜ್ ಜೊತೆಗಿನ ವ್ಯವಹಾರದ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಿಸಿಬಿ ನೋಟಿಸ್ ನೀಡಿತ್ತು. ನೋಟಿಸ್ ಹಿನ್ನೆಲೆ ಇಂದು ಬೆಳಗ್ಗೆ ನಟಿ ರಾಧಿಕಾ ವಿಚಾರಣೆಗೆ ಹಾಜರಾಗಿದ್ದರು.
ಮನೆಯಿಂದ ಹೊರಡುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ರಾಧಿಕಾ, ನೋಟಿಸ್ ಹಿನ್ನೆಲೆ ಕಚೇರಿಗೆ ಹೊರಟಿದ್ದೇನೆ. ವಿಚಾರಣೆ ಬಳಿಕ ನಿಮ್ಮೆಲ್ಲರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು. ಈಗಾಗಲೇ ಎಸಿಪಿ ನಾಗರಾಜ್, ಇನ್ಸ್ಪೆಕ್ಟರ್ ಕೇಶವಮೂರ್ತಿ, ಅಂಜುಮಾಲಾರಿಂದ ಇಂದ ವಿಚಾರಣೆ ಆರಂಭಗೊಂಡಿದೆ ಎಂದು ತಿಳಿದು ಬಂದಿದೆ.
Advertisement
Advertisement
ಯುವರಾಜ್ ಜೊತೆಗಿನ 75 ಲಕ್ಷ ರೂ. ವಹಿವಾಟಿನ ಬಗ್ಗೆ ಅಧಿಕಾರಿಗಳು ಪ್ರಶ್ನೆ ಮಾಡಲಿದ್ದಾರೆ. ದಿಢೀರ್ ಸುದ್ದಿಗೋಷ್ಠಿ ನಡೆಸಿದ ಕುರಿತು ಸಹ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳಲಿದ್ದಾರೆ. ನಟಿ ರಾಧಿಕಾ ಅವರು 75 ಲಕ್ಷ ವಹಿವಾಟಿಗೆ ಪೂರಕವಾದ ದಾಖಲೆ ನೀಡಬೇಕಾಗುತ್ತದೆ. ಯುವರಾಜ್, ಆಪ್ತರ ಹಾಗೂ ಇವತ್ತು ರಾಧಿಕಾ ನೀಡುವ ಹೇಳಿಕೆಗಳು ಮ್ಯಾಚ್ ಆಗಬೇಕು. ಒಂದು ವೇಳೆ ಅಧಿಕಾರಿಗಳ ಪ್ರಶ್ನೆಗೆ ಸಬೂಬು ಉತ್ತರಗಳು ನೀಡಿದ್ರೆ ರಾಧಿಕಾ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆಗಳಿವೆ.
Advertisement
Advertisement
ಕೋಟಿ ಕೋಟಿ ಹಣದ ಆರೋಪ ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ ಬಳಿ ಎಷ್ಟು ಆಸ್ತಿ ಎಂಬ ಲೆಕ್ಕಚಾರ ಆರಂಭವಾಗಿದೆ. ಈ ಸಂಪತ್ತೇ ರಾಧಿಕಾಗೆ ಕಂಟಕವಾಗುತ್ತಾ ಎಂಬ ಪ್ರಶ್ನೆ ಕೂಡ ಮೂಡಿದೆ.
ಆಸ್ತಿ ನಂಬರ್ 1: ಸ್ವಂತ ಊರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಸಾಲೆತ್ತೂರಿನಲ್ಲಿ 1 ಎಕರೆಯಲ್ಲಿ ಮನೆ, ತೋಟ. ಇದು ಒಟ್ಟು 3 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ.
ಆಸ್ತಿ ನಂಬರ್ 2: ಮಂಗಳೂರಿನಲ್ಲಿ `ದೇವಸ್ಯ’ ಹೆಸರಿನ ಭವ್ಯ ಮನೆ ಇದೆ. ಇದು ಮಂಗಳೂರು ನಗರದ ಯೆಯ್ಯಾಡಿಯಲ್ಲಿದೆ. ಗರ್ಭಿಣಿಯಾಗಿದ್ದಾಗ ಆಸ್ಪತ್ರೆ ಬಳಿಯೇ ರಾಧಿಕಾ ಈ ಮನೆ ಖರೀದಿ ಮಾಡಿದ್ದರು. ಇದು 60 ರಿಂದ 70 ಲಕ್ಷ ಬೆಲೆ ಬಾಳುತ್ತದೆ.
ಆಸ್ತಿ ನಂಬರ್ 3: ಕಲ್ಲಡ್ಕ ಬಳಿ ಅಮ್ಟೂರಿನಲ್ಲಿ 1 ತೋಟದ ಮನೆ ಇದ್ದು, ಮನೆಗೆ ‘ನಂದನವನ’ ಎಂದು ಹೆಸರಿಡಲಾಗಿದೆ. ಈ ಮನೆ ಸುಮಾರು 4 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ.
ಆಸ್ತಿ ನಂಬರ್ 4: ಬೆಂಗಳೂರಿನ ಸಂಜಯ್ ನಗರದಲ್ಲಿ ಬಂಗಲೆ ಇದ್ದು, ಇದು ಕೂಡ ಬಹುಕೋಟಿ ಬೆಲೆಬಾಳುವ ಮನೆಯಾಗಿದೆ.
ಆಸ್ತಿ ನಂಬರ್ 5: ಬೆಂಗಳೂರು ನಗರದಲ್ಲಿ ಕೂಡ ರಾಧಿಕಾ ಒಡೆತನದ ಬಹುಕೋಟಿ ಬೆಲೆ ಬಾಳುವ ಮಳಿಗೆ ಇದೆ ಎಂದು ಹೇಳಲಾಗುತ್ತಿದೆ.
ಆಸ್ತಿ ನಂಬರ್ 6: ಪುತ್ರಿ ಶಮಿಕಾ ಹೆಸರಲ್ಲಿ ನಿರ್ಮಾಣ ಸಂಸ್ಥೆ ಇದೆ. ಈ ಸಂಸ್ಥೆಯಿಂದ 3 ಚಿತ್ರ ನಿರ್ಮಾಣ ಮಾಡಲಾಗಿದೆ. ಲಕ್ಕಿ- ಸ್ವೀಟಿ – ಭೈರಾದೇವಿ ಚಿತ್ರ ನಿರ್ಮಾಣ ಇದೇ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿದೆ.
ಆಸ್ತಿ ನಂಬರ್ 7: ಇಷ್ಟು ಮಾತ್ರವಲ್ಲದೆ ಕೋಟಿ ಕೋಟಿ ಹಣಹೂಡಿಕೆ..? ಹಾಗೂ ಹಲವು ಕಂಪನಿಗಳಿಗೆ ರಾಧಿಕಾ ಪಾಲುದಾರಿಕೆ ಹೊಂದಿದ್ದಾರೆ ಎಂಬ ಗುಮಾನಿ ಕೂಡ ಇದೆ.