ಮಡಿಕೇರಿ: ಸಿಎಂ ಬದಲಾವಣೆಗೆ ಸಿ.ಪಿ ಯೋಗೇಶ್ವರ್ ರಾಷ್ಟ್ರನಾಯಕರಿಗೆ ದೂರು ನೀಡಿರುವ ವಿಚಾರವಾಗಿ, ಯೋಗೇಶ್ವರ್ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಕಪ್ಪೆಯಂತೆ ಹಾರುತ್ತಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ವಾಗ್ದಾಳಿ ನಡೆಸಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್, ಸಿ.ಪಿ ಯೋಗೇಶ್ವರ್ ಯಾರವನು? ಯೋಗೇಶ್ವರ್ ದಿನಕ್ಕೊಂದು ಪಾರ್ಟಿಗೆ ಹೋಗುತ್ತಾರೆ. ಅವರನೆಲ್ಲಾ ಕಟ್ಟಿಕೊಂಡು ಅವರ ಹಿಂದೆ ಯಾರಾದ್ರು ಹೋಗುತ್ತಾರಾ. ಅವರ ನಾಯಕತ್ವದಲ್ಲಿ ನಾವ್ಯಾರು ಹೋಗೋದಿಲ್ಲಾ. ಯೋಗೇಶ್ವರ್ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದು ಸಚಿವರಾಗಿದ್ದರು. ಇದೀಗ ಪುನಃ ಬಿಜೆಪಿಗೆ ಬಂದು ಸಚಿವರಾಗಿದ್ದಾರೆ ಎಂದು ಅಪ್ಪಚ್ಚು ರಂಜನ್ ಕೆಂಡಾಮಂಡಲವಾಗಿದ್ದಾರೆ.
ಯೋಗೇಶ್ವರ್ ಅಂತವರೆಲ್ಲ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಕಪ್ಪೆಯಂತೆ ಹಾರುತ್ತಾರೆ. ಅವರನ್ನೆಲ್ಲಾ ಪಕ್ಷದಿಂದಲೇ ವಜಾ ಮಾಡಬೇಕು. ಅದಕ್ಕೆ ಬೇಕಾದ್ರೆ ನಾನೂ ಸಹಿ ಮಾಡಿಕೊಡುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.