ನವದೆಹಲಿ: ಸಿನಿಮಾ ಪೈರಸಿ ವಿಚಾರವಾಗಿ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದ್ದ ತಮಿಳ್ ರಾಕರ್ಸ್ ವೈಬ್ಸೈಟ್ ಅನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದೆ.
ಇತ್ತೀಚೆಗೆ ಅಮೆಜಾನ್ ಇಂಟರ್ ನ್ಯಾಷನಲ್ ಈ ಪೈರಸಿ ವೆಬ್ಸೈಟ್ ವಿರುದ್ಧ ಎರಡು ಬಾರಿ ಡಿಎಂಸಿಎ (ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆಕ್ಟ್)ಗೆ ವರದಿಗಳನ್ನು ಸಲ್ಲಿಸಿತ್ತು. ಈ ಕಾರಣದಿಂದ ಈ ಪೈರಸಿ ವೆಬ್ಸೈಟ್ ಅನ್ನು ಅಂತರ್ಜಾಲ ನಿರ್ದಿಷ್ಟ ಹೆಸರು ಮತ್ತು ಸಂಖ್ಯೆಯ ಕಾರ್ಪೊರೇಷನ್ (ಐಸಿಎಎನ್ಎನ್) ನೋಂದಾವಣೆಯಿಂದ ತೆಗೆದುಹಾಕಲಾಗಿದೆ.
Advertisement
Advertisement
ಸಿನಿಮಾಗಳು ಬಿಡುಗಡೆಯಾದ ಮರುದಿನವೇ ಪೈರಸಿ ಮಾಡುತ್ತಿದ್ದ ತಮಿಳ್ ರಾಕರ್ಸ್ ಅನ್ನು ಅಂತಿಮವಾಗಿ ನಿರ್ಬಂಧಿಸಲಾಗಿದೆ. ತಮಿಳು ರಾಕರ್ಸ್ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಮಲೆಯಾಳಂ, ಕನ್ನಡ ಮತ್ತು ಇತರ ಭಾಷೆಯ ಚಲನಚಿತ್ರಗಳನ್ನು ಬಿಡುಗಡೆಯಾದ ಮರುದಿನೇ ತನ್ನ ವೆಬ್ಸೈಟಿನಲ್ಲಿ ಅಪ್ಲೋಡ್ ಮಾಡುತ್ತಿತ್ತು. ಜೊತೆಗೆ ತನ್ನ ಸೈಟಿನ ಡೊಮೇನ್ ಅನ್ನು ಹೊಸ ಲಿಂಕ್ಗೆ ಪದೇ ಪದೇ ಬದಲಾಯಿಸುತ್ತಾ ಇಷ್ಟು ದಿನ ಅಕ್ರಮವಾಗಿ ಪೈರಸಿ ಮಾಡುತ್ತಾ ಬಂದಿತ್ತು.
Advertisement
Advertisement
ಆದರೆ ಈಗ ಐಸಿಎಎನ್ಎನ್ ತಮಿಳ್ ರಾಕರ್ಸ್ ಲಿಂಕ್ ಅನ್ನೇ ಕಿತ್ತು ಹಾಕಿದೆ. ಈಗ ಈ ವೆಬ್ಸೈಟ್ ಕೆಲಸ ಮಾಡುತ್ತಿಲ್ಲ. ಭಾರತದ ಚಿತ್ರರಂಗದಲ್ಲೇ ತಮಿಳು ಚಿತ್ರರಂಗ ಈ ವೆಬ್ಸೈಟಿ ಹಾವಳಿಗೆ ಹೆಚ್ಚು ಬಲಿಯಾಗಿತ್ತು. ಹಲವಾರು ಸಿನಿಮಾ ನಿರ್ಮಾಪಕರು ಇದರಿಂದ ತೊಂದರೆಗೆ ಸಿಲುಕಿದ್ದರು. ಜೊತೆಗೆ ಕನ್ನಡದಲ್ಲೂ ಹಲವಾರು ಸಿನಿಮಾಗಳು ಈ ವೆಬ್ಸೈಟಿನಲ್ಲಿ ಪೈರಸಿ ಆಗಿದ್ದವು. ಇದರ ವಿರುದ್ಧ ಕೆಲ ಕನ್ನಡ ನಿರ್ಮಾಪಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.