ಮಂಡ್ಯ: ಪ್ರಸ್ತುತ ಕರ್ನಾಟಕದಲ್ಲಿ ಚರ್ಚೆಯಲ್ಲಿರುವ ಐಎಎಸ್ ಅಧಿಕಾರಿ ಹಾಗೂ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೀವನ ಕಥೆ ಸಿನಿಮಾವಾಗಲಿದೆ. ಇದನ್ನು ಓದಿ:ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ
ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಸಾಹಿತಿ ಕೃಷ್ಣ ಸ್ವರ್ಣಸಂದ್ರ ಅವರು ರೋಹಿಣಿ ಸಿಂಧೂರಿ ಅವರ ಬಯೋಪಿಕ್ನ್ನು ಸಿನಿಮಾ ಮಾಡಲು ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿ 2020 ಜೂನ್ 15 ರಂದು ಭಾರತ ಸಿಂಧೂರಿ ಎಂಬ ಟೈಟಲ್ನ್ನು ರಿಜಿಸ್ಟರ್ ಮಾಡಿಸಿದ್ದಾರೆ.
Advertisement
Advertisement
ಈ ಸಿನಿಮಾದಲ್ಲಿ ರೋಹಿಣಿ ಸಿಂಧೂರಿ ಅವರು ಆರಂಭದಲ್ಲಿ ಮಂಡ್ಯದ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಮಾಡಿದ್ದ ಕೆಲಸ ಹಾಗೂ ಸಾಧನೆ ಮತ್ತು ಹಾಸನ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭಗಳು ಅಲ್ಲದೇ, ಸದ್ಯ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ನಡೆದ ಬೆಳವಣಿಗೆಗಳನ್ನು ಈ ಚಿತ್ರ ಕಥೆಯಲ್ಲಿ ಹೆಣೆಯಲಾಗಿದೆ. ಅಲ್ಲದೇ ಅವರು ಬೆಳೆದು ಬಂದ ಹಾದಿಯನ್ನು ಸಹ ಚಿತ್ರಕಥೆಯಲ್ಲಿ ಸೇರಿಸಲಾಗಿದೆ.
Advertisement
Advertisement
2020ರಲ್ಲೇ ಈ ಸಿನಿಮಾದ ಹೆಸರನ್ನು ರಿಜಿಸ್ಟರ್ ಮಾಡಿಸಲಾಗಿದ್ದು ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಕೃಷ್ಣ ಸ್ವರ್ಣಸಂದ್ರ ಅವರೇ ಹೊತ್ತಿದ್ದಾರೆ. ಇನ್ನೂ ನಟಿಯಾಗಿ ರಂಗಭೂಮಿ ಕಲಾವಿದೆ ಹಾಗೂ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರಿಗೆ ನೀಡಲಾಗಿದೆ. ಇನ್ನೂ ಎರಡು ಮೂರು ತಿಂಗಳಿನಲ್ಲಿ ಈ ಚಿತ್ರ ಸೆಟ್ಟರಲಿದೆ ಎಂದು ಕೃಷ್ಣ ಸ್ವರ್ಣಸಂದ್ರರವರು ಹೇಳಿದ್ದಾರೆ. ಇದನ್ನು ಓದಿ: ಕೊರೊನಾ ವಾರಿಯರ್ಗಳಿಗೆ ಆಹಾರ ಕಿಟ್ ವಿತರಿಸಿದ ನಿಖಿಲ್ ಕುಮಾರಸ್ವಾಮಿ