ಹಾವೇರಿ: ಬಿಜೆಪಿ ಮತ್ತು ಕಾಂಗ್ರೆಸ್ ಸಂಸ್ಕೃತಿ ಬೇರೆ. ಬಿಜೆಪಿ ಸಂಸ್ಕೃತಿಯನ್ನು ಸಿದ್ದರಾಮಯ್ಯ ಹೊಗಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಸಂಸ್ಕೃತಿ ಹೊಗಳುತ್ತಾರೆ. ಅವರ ಹೊಗಳಿಕೆ ನಮ್ಮ ಪಕ್ಷಕ್ಕೆ ಅಗತ್ಯವಿಲ್ಲ ಎಂದು ಮಾಜಿ ಸಚಿವ, ಹಿರೇಕೆರೂರು ಶಾಸಕ .ಪಾಟೀಲ್ ಹೇಳಿದ್ದಾರೆ.
Advertisement
ಹಾವೇರಿ ಜಿಲ್ಲೆ ಹಿರೇಕೆರೂರು ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸ್ಕೃತಿಯನ್ನು ಸಿದ್ದರಾಮಯ್ಯ ಹೊಗಳಲು ಸಾಧ್ಯವಿಲ್ಲ. ಅವರ ಹೊಗಳಿಕೆ ನಮ್ಮ ಪಕ್ಷಕ್ಕೆ ಅಗತ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ನಮ್ಮ ಪಾತ್ರ ಬಹಳವಿದೆ. ಕಾಂಗ್ರೆಸ್, ಜೆಡಿಎಸ್ ನಿಂದ ಗೆದ್ದ ಶಾಸಕರು ನಮ್ಮ ನಮ್ಮ ಕ್ಷೇತ್ರಕ್ಕೆ ಅನ್ಯಾಯ ಆಗಬಾರದು ಅಂತ ಸಿಡಿದೆದ್ದು ಬಂದು ಬಿಜೆಪಿ ಆಡಳಿತಕ್ಕೆ ತಂದಿದ್ದೇವೆ. ಆ ನಿಟ್ಟಿನಲ್ಲಿ ಬಿಜೆಪಿ ಮಾತು ಕೊಟ್ಟಂತೆ ನಡೆದುಕೊಂಡಿದೆ. ಈಗಲೂ ಕೂಡ ಅದರಂತೆ ಅವರು ಸ್ಟಿಕ್ ಆನ್ ಆಗುತ್ತಾರೆ ಎನ್ನುವ ಭಾವನೆ ಇದೆ. ಮಂತ್ರಿಮಂಡಲ ವಿಸ್ತರಣೆ ಮುಳ್ಳಿನ ಕಗ್ಗಂಟು. ಎಲ್ಲ ಜನಾಂಗ, ಪ್ರದೇಶ ಎಲ್ಲರನ್ನ ತೃಪ್ತಿಪಡಿಸಬೇಕು. ಇದರ ಜೊತೆಗೆ ಪಕ್ಷ ಸಂಘಟನೆಯಲ್ಲಿ ಯಾರು ಭಾಗಿಯಾಗ್ತಾರೆ, ಆಡಳಿತದಲ್ಲಿ ಯಾರು ತೊಡಗಿಸಿಕೊಳ್ಳುತ್ತಾರೆ ಎಲ್ಲವನ್ನು ನೋಡಿಕೊಂಡು ವಿಸ್ತರಣೆ ಮಾಡುತ್ತಾರೆ ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಮುಂದಿನ 2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ಸಂಕಲ್ಪವನ್ನು ರಾಜ್ಯ ಸರ್ಕಾರ, ರಾಜ್ಯ ಬಿಜೆಪಿ ಪಕ್ಷ, ಕೇಂದ್ರ ವರಿಷ್ಠರು, ಕೇಂದ್ರ ಬಿಜೆಪಿ ಪಕ್ಷ ಈಗಾಗಲೇ ತೀರ್ಮಾನ ಮಾಡಿದೆ. ಆ ನಿಟ್ಟಿನಲ್ಲಿ ಹೊಸ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿಯವರ ಜೊತೆಗೆ ಸೋಮವಾರ ಪಕ್ಷದ ವರಿಷ್ಠರು ಸಭೆ ಮಾಡಿದ್ದಾರೆ. ಇವತ್ತು ಸಂಜೆಯೊಳಗೆ ಪಟ್ಟಿ ಸಿದ್ದವಾಗುತ್ತದೆ ಅಂತ ಸಿಎಂ ಹೇಳಿದ್ದಾರೆ. ಜಾತಿವಾರು, ಪ್ರಾಂತ್ಯವಾರು ಎಲ್ಲರಿಗೂ ಸರಿಯಾದ, ಸಮಾನವಾದ ಅವಕಾಶ ಬಿಜೆಪಿ ಪಕ್ಷ ಮಾಡಿಕೊಡುತ್ತದೆ ಎಂದು ನುಡಿದಿದ್ದಾರೆ.
Advertisement
ಮುಂದಿನ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಸಚಿವ ಸಂಪುಟ ರಚನೆ ಮಾಡುತ್ತಾರೆ. ಒಂದು ಚುನಾವಣೆ ಗೆದ್ದ ಮೇಲೆ ಮುಂದಿನ ಚುನಾವಣೆಗೆ ನಾವು ಲೆಕ್ಕ ಹಾಕುತ್ತಿರುತ್ತೇವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದಿದ್ದಾರೆ. ಇದನ್ನೂ ಓದಿ:ನೂತನ ಸಂಪುಟದಲ್ಲೂ ಸಚಿವ ಸ್ಥಾನಕ್ಕೆ ನಾರಾಯಣಗೌಡ ಕಸರತ್ತು