ಮೈಸೂರು: ಪತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಒಂದು ತಿಂಗಳು ಅಫ್ಘಾನಿಸ್ತಾನದ ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕೆಂದು ಮೈಸೂರು ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.
Advertisement
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ರಾಜ್ಯ ನಾಯಕರ ಮಾತು ಮಿತಿ ಮೀರಿದೆ. ನಾನು ಕೂಡ ಮಾಧ್ಯಮಗಳಲ್ಲಿ ಅವರ ಹೇಳಿಕೆ ನೋಡಿದ್ದೇನೆ. ಚುನಾವಣೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಮಾತು ಮಿತಿ ಮೀರಿದೆ. ಆಡಳಿತ ಪಕ್ಷಕ್ಕೂ ಜವಾಬ್ದಾರಿ ಇದೆ, ಪ್ರತಿ ಪಕ್ಷಕ್ಕೂ ಒಂದು ಜವಾಬ್ದಾರಿ ಇದೆ. ಪ್ರತಿಪಕ್ಷದ ನಾಯರ ಮಾತು ಮಿತಿ ಮೀರಿದೆ. ವಿರೋಧ ಪಕ್ಷದ ನಾಯಕ ಅವರ ಜವಾಬ್ದಾರಿ ಮರೆಯಬಾರದು ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಪ್ರಧಾನ ಮಂತ್ರಿಗಳಿಗೆ ಒಂದು ಗೌರವ ಇದೆ. ಅವರ ಬಗ್ಗೆ ಈ ರೀತಿಯಲ್ಲಿ ಅವಹೇಳನ ಮಾಡಬಾರದು. ಒಂದು ತಿಂಗಳು ತಾಲಿಬಾನ್ಗಳ ಜೊತೆಗೆ ಸಿದ್ದರಾಮಯ್ಯನನ್ನು ಕಳುಹಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈ ರೀತಿಯ ಹೇಳಿಕೆಗಳಿಂದ ಬಹಳ ನೋವಾಗಿದೆ. ಬೇರೆ ಸಮಯದಲ್ಲಿ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ. ನಾನು ಚುನಾವಣಾ ಕ್ಷೇತ್ರಗಳಿಗೆ ಹೋಗಿಲ್ಲ. ಆದರೆ ಚುನಾವಣೆಯಲ್ಲಿ ನಾವು ಎರಡು ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement