ಬೆಂಗಳೂರು: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಚುರುಕುಗೊಂಡಿದೆ. ಸಿಡಿಯಲ್ಲಿ ಇರುವ ಯವತಿ ಯಾರು? ಈಗ ಎಲ್ಲಿದ್ದಾಳೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಆಕೆ ಬೆಂಗಳೂರಿನಲ್ಲಿ ನೆಲೆಸಿದ್ದ ಬಗ್ಗೆ ಹಲವು ಮಾಹಿತಿಗಳು ಈಗ ಲಭ್ಯವಾಗಿದ್ದು, ಮಾರ್ಚ್ 2ರ ರಾತ್ರಿ 9:30ಕ್ಕೆ ಮನೆಯಿಂದ ಯುವತಿ ಹೊರಕ್ಕೆ ಹೋಗಿದ್ದಾಳೆ.
ಹೌದು. ಮಂಗಳವಾರ ಸಂಜೆ ಸ್ಫೋಟಕ ಸಿಡಿ ರಿಲೀಸ್ ಆಗಿತ್ತು. ಸಿಡಿ ರಿಲೀಸ್ ಆಗಿ 4 ಗಂಟೆ ಬಳಿಕ ಸಂತ್ರಸ್ತೆ ಮನೆಯಿಂದ ಹೊರಗಡೆ ಬಂದಿದ್ದಾಳೆ. ಬ್ಯಾಗ್ ಇಟ್ಟುಕೊಂಡು ಮನೆಯಿಂದ ಏಕಾಂಗಿಯಾಗಿ ಹೊರಗೆ ಬಂದ ಯುವತಿ ನಡೆದುಕೊಂಡೇ ಮುಖ್ಯ ರಸ್ತೆಗೆ ತಲುಪಿದ್ದಳು ಎಂಬ ವಿಚಾರ ಮೂಲಗಳಿಂದ ಲಭ್ಯವಾಗಿದೆ.
Advertisement
Advertisement
ಮನೆಯಿಂದ ಹೊರಬಂದ ಬಳಿಕ ಮೊಬೈಲ್ ಸ್ವಿಚ್ಆಫ್ ಮಾಡಿ ಸಿಮ್ ಡಿಆಕ್ಟಿವೇಟ್ ಮಾಡಿದ್ದಾಳೆ. ಮೊಬೈಲ್ ಸ್ವಿಚ್ ಆಫ್ ಮಾಡಿರುವ ವಿಚಾರ ತಾಂತ್ರಿಕ ದಾಖಲೆಗಳಿಂದ ಲಭ್ಯವಾಗಿದೆ
Advertisement
ಆರಂಭದಲ್ಲಿ ಯುವತಿ ಆರ್ಟಿ ನಗರದ ಪಿಜಿಯಲ್ಲಿ ವಾಸವಾಗಿದ್ದಳು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈಗ ಆಕೆ ಪಿಜಿಯಲ್ಲಿ ಇರಲಿಲ್ಲ. ಆರ್.ಟಿ.ನಗರದ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದ ವಿಚಾರ ಈಗ ಲಭ್ಯವಾಗಿದೆ.
Advertisement
ಯುವತಿಯ ಬಗ್ಗೆ ಪಬ್ಲಿಕ್ ಟಿವಿ ಮನೆ ಮಾಲೀಕರನ್ನು ಮಾತನಾಡಿಸಿದೆ. ಈ ವೇಳೆ ಅವರು, ಇದು ಪಿಜಿಯಲ್ಲ. ಅವರಿಗೆ ಬಾಡಿಗೆ ನೀಡಿದ್ದೆ. ಬಾಡಿಗೆಯಲ್ಲಿ ನಾಲ್ಕು ಜನ ಸೇರಿ ಮನೆ ತೆಗೆದುಕೊಂಡಿದ್ದಾರೆ. 2018ರಿಂದ ಅವರು ಇಲ್ಲಿ ನೆಲೆಸಿದ್ದರು. ರೂಮಿನಲ್ಲ ಆಕೆ ಒಬ್ಬಳೇ ಇದ್ದಳು. ಸೋಮವಾರ ಇಲ್ಲಿಂದ ತೆರಳಿದ್ದಾಳೆ ಎಂದು ತಿಳಿಸಿದ್ದಾರೆ.