– ಎಸ್ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ
ಬೆಳಗಾವಿ: ಸಿಎಂ ಯಡಿಯೂರಪ್ಪನವರು ಸಿಡಿ ವಿಚಾರವಾಗಿ ಮಾತನಾಡಬೇಕು. ಅವರದ್ದು ಹುಳುಕು ಇರುವ ಕಾರಣ ಮಾತನಾಡುತ್ತಿಲ್ಲ. ಸಿಡಿ ಲೇಡಿ ನಮ್ಮ ಬಳಿ ರಕ್ಷಣೆ ಕೇಳಿದ್ದಾಳೆ. ಸರ್ಕಾರ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಹೇಳಿದ್ದಾರೆ.
Advertisement
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುವತಿ ನನ್ನ ಬಳಿ ರಕ್ಷಣಾ ಕೊಡಿ ಅಂತಾ ಕೇಳಿಲ್ಲ. ಆದರೆ ನನಗೆ ರಕ್ಷಣೆ ಕೊಡಿಸಿ ಅಂತಾ ಕೇಳಿದ್ದಾರೆ ಹೀಗಾಗಿ ಸರ್ಕಾರಕ್ಕೆ ರಕ್ಷಣೆ ಕೊಡಲು ಹೇಳಿದ್ದೇನೆ. ರಾಜ್ಯದ ಸಿಎಂ ಆಗಿರುವ ಯಡಿಯೂರಪ್ಪನವರು ಸಿಡಿ ಮತ್ತು ರಕ್ಷಣೆ ವಿಚಾರವಾಗಿ ಮಾತಾಡಬೇಕು. ಈ ವಿಚಾರ ರಾಷ್ಟ್ರದಾದ್ಯಂತ ಚರ್ಚೆ ಆಗುತ್ತಿದೆ. ಆದರೆ ಯಡಿಯೂರಪ್ಪ ಮೌನವಾಗಿ ಇರೋದು ನೋಡಿದ್ರೆ ಅವರಲ್ಲೇ ಹುಳುಕಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Advertisement
Advertisement
ಸಿಡಿ ಪ್ರಕರಣದಲ್ಲಿ ಎಸ್ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ. ಸಿಡಿ ಪ್ರಕರಣದಲ್ಲಿ ಯಡಿಯೂರಪ್ಪನವರದ್ದು ಹುಳುಕಿದೆ. ಉಪಚುನಾವಣೆಯಲ್ಲಿ ಸಿಡಿ ಪ್ರಕರಣ ಬಿಜೆಪಿಗೆ ವಿರುದ್ಧ ಆಗುತ್ತದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಆಗುತ್ತದೆ. ಪ್ರಕರಣ ತನಿಖೆ ಹಂತದಲ್ಲಿ ಇರೋದ್ರಿಂದ ಚುನಾವಣಾ ವಿಷಯವಾಗಿ ಬಳಸಿಕೊಳ್ಳಲ್ಲ. ಸಿಡಿ ಪ್ರಕರಣ ನಿಷ್ಪಕ್ಷಪಾತವಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಟ್ಯಾಂಡ್ ಇಲ್ಲ, ಅದು ಬಸ್ಸ್ಟ್ಯಾಂಡ್ ಎಂಬ ಪ್ರಹ್ಲಾದ್ ಜೋಶಿ ಆರೋಪ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಬಸ್ಸ್ಟ್ಯಾಂಡ್ ಆಗಿರೋರು ಯಾರಪ್ಪ, ಮಿಸ್ಟರ್ ನರೇಂದ್ರ ಮೋದಿ. ಪ್ರಹ್ಲಾದ್ ಜೋಶಿ ಒಬ್ಬ ಸೈಡ್ ಆಕ್ಟರ್, ಡೈರೆಕ್ಟರ್ ಆರ್ಎಸ್ಎಸ್ ಆಗಿದೆ. ಬೆಲೆ ಏರಿಕೆ, ಕೇಂದ್ರ ಸರ್ಕಾರ ವೈಫಲ್ಯ, ರೈತ ವಿರೋಧಿ ಕಾನೂನು ತಂದಿದ್ದಾರೆ. ಬೆಲೆ ಏರಿಕೆ ನಿಯಂತ್ರಣ ಇಲ್ಲ, ಅಚ್ಛೆ ದಿನ್ ಇಲ್ಲ ನರಕ ಆಗಿಬಿಟ್ಟಿದೆ ಎಂದು ಬಿಜೆಪಿ ವಿರುದ್ಧವಾಗಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವುದೇ ಜಾತಿಗೆ ಸೀಮಿತವಾದ ಪಾರ್ಟಿ ಅಲ್ಲ. ಎಲ್ಲಾ ಜಾತಿಗಳನ್ನು ಒಟ್ಟಿಗೆ ತಗೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್ ಆಗಿದೆ. ಸತೀಶ್ ಜಾರಕಿಹೊಳಿ ಬಹಳ ಒಳ್ಳೆಯ, ಸಮರ್ಥ ಅಭ್ಯರ್ಥಿಯಾಗಿದ್ದಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಗುಲಾಮರಾಗಿದ್ದಾರೆ. ಸಚಿವ ಮಾಧುಸ್ವಾಮಿ ಕೇಂದ್ರದ ಸರ್ವಾಧಿಕಾರಿ ಧೋರಣೆ ಪ್ರಸ್ತಾಪಿಸಿರುವುದು ಕೇಂದ್ರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ
ಅನುದಾನ ಸಮರ್ಪಕವಾಗಿ ಬರುತ್ತಿಲ್ಲ. ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ. ಈ ಎಲ್ಲಾ ಸಂಸದರಿಗೆ ಬೆಳಗಾವಿ ಚುನಾವಣೆ ಮೂಲಕ ಜನರು ಪಾಠ ಕಲಿಸಲಿದ್ದಾರೆ. ಯಡಿಯೂರಪ್ಪ ಸರ್ಕಾರ ಸಹ ಹೇಡಿ ಸರ್ಕಾರವಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಡಿ ಕೆ ಶಿವಕುಮಾರ್ ಕಾರಿನ ಮೇಲೆ ಚಪ್ಪಲಿ ಎಸೆದಿರುವ ವಿಚಾರವಾಗಿ ಮಾತನನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಗೂಂಡಾಗಿರಿ ಮಾಡುವುದು ಸರಿಯಲ್ಲ. ಈ ಬಗ್ಗೆ ವಿಚಾರಣೆ ಮಾಡಲು ನ್ಯಾಯಾಲಯ ಇದೆ. ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಪ್ರಚಾರಕ್ಕೆ ಬರಬೇಡಿ ಅನ್ನೋದು ಪ್ರಜಾಪ್ರಭುತ್ವ ವಿರೋಧೀ ನೀತಿಯಾಗಿದೆ. ಪ್ರಚಾರಕ್ಕೆ ಬರಬೇಡಿ ಅಂತಾ ಹೇಳಲು ಇವರು ಯಾರು? ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ.