ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಗರಂ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಪಕ್ಷದ ನಾಯಕರ ಎದುರೇ ಸಿಎಲ್ ಪಿ ಸಭೆಯಲ್ಲಿ ಅಖಂಡ ತನ್ನ ಆಕ್ರೋಶ ಹೊರಹಾಕಿದ್ದಾರೆ. ನನಗೊಂದು ನ್ಯಾಯ, ಸೌಮ್ಯ ರೆಡ್ಡಿಗೆ ಒಂದು ನ್ಯಾಯನಾ..?, ನನ್ನ ಪರ ಯಾವ ಒಬ್ಬ ಶಾಸಕರು ಹೇಳಿಕೆ ಕೊಟ್ಟಿಲ್ಲ. ಸೌಮ್ಯ ರೆಡ್ಡಿ ಪರ ಹೋರಾಟ ನಡೆದಿದೆ ಎಂದು ಕಿಡಿಕಾರಿದರು ಎನ್ನಲಾಗಿದೆ.
Advertisement
Advertisement
ಅಖಂಡ ಶ್ರೀನಿವಾಸ್ ಮೂರ್ತಿ ಮಾತಿಗೆ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಕೂಡ ದನಿಗೂಡಿಸಿದರು. ಆದರೆ ಅಖಂಡ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂಬುದಾಗಿ ತಿಳಿದುಬಂದಿದೆ.
Advertisement
' @siddaramaiah ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ.
ಕೆಪಿಸಿಸಿ ಅಧ್ಯಕ್ಷರಾದ @DKShivakumar, ವಿ.ಪರಿಷತ್ ವಿಪಕ್ಷ ನಾಯಕ @srpatilbagalkot, ಕಾರ್ಯಾಧ್ಯಕ್ಷರಾದ @SaleemAhmadINC, ಧ್ರುವ ನಾರಾಯಣ್, ಮಾಜಿ ಡಿಸಿಎಂ @DrParameshwara, ಮಾಜಿ ಸಚಿವರಾದ @RLR_BTM, @thekjgeorge ಸೇರಿ ಹಲವು ನಾಯಕರ ಉಪಸ್ಥಿತಿ. pic.twitter.com/KfjwSDXBGv
— Karnataka Congress (@INCKarnataka) January 28, 2021
ಸಭೆಯಲ್ಲಿ ಸಿ ಎಲ್ ಪಿ ನಾಯಕ ಸಿದ್ದರಾಮಯ್ಯ, ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಹಾಗೂ ಕೆ ಸಿ ಕೊಂಡಯ್ಯ ಮತ್ತಿತರರು ಉಪಸ್ಥಿತರಿದ್ದರು.