ಬೆಂಗಳೂರು: ನಿಸ್ಸಂಶಯವಾಗಿ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಅವರ ಬದಲಾವಣೆ ಕೇವಲ ಊಹಾಪೋಹ. ಈ ವಿಚಾರ ಮುಗಿದು ಹೋಗಿದ್ದು, ಪಕ್ಷದ ನಾಯಕರು ಸಿಎಂ ಬದಲಾವಣೆ ಕುರಿತಂತೆ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಸಿದರು.
ಈ ಕುರಿತಂತೆ ಮಾಹಿತಿ ನೀಡಿದ ಸಚಿವ ಆರ್ ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದ್ದು, ಮುಖ್ಯಮಂತ್ರಿಗಳು, ಪ್ರಧಾನ ಕಾರ್ಯದರ್ಶಿ ಹಾಗೂ ಮೂವರು ಹಿರಿಯ ಸಚಿವರು ಇದರಲ್ಲಿ ಇರಲಿದ್ದಾರೆ. ಈ ಸಮಿತಿಯ ಉದ್ದೇಶವೇ ಊಹಾಪೋಹದ ಸುದ್ದಿಗಳಿಗೆ ಕಡಿವಾಣ ಹಾಕುವುದಾಗಿದೆ. ಅದು ಪರವಾದರೂ ಆಗಿರಬಹುದು ಅಥವಾ ವಿರುದ್ಧವಾದರೂ ಇರಬಹುದು. ಈ ಶಿಸ್ತನ್ನು ಉಲ್ಲಂಘಿಸಿದ್ದೇ ಆದಲ್ಲಿ ಅಂಥವರ ವಿರುದ್ಧ ಪಕ್ಷ ಗಂಭೀರ ಕ್ರಮ ಜರುಗಿಸಲಿದೆ ಎಂದು ಹೇಳಿದರು.
Advertisement
ಸಿಎಂ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಹಾಕಲಾಗಿದೆ ಎಂದು ನಾನು ಭಾನುವಾರವೇ ಸ್ಪಷ್ಟಪಡಿಸಿದ್ದೇನೆ. ಯಡಿಯೂರಪ್ಪನವರೇ ನಮ್ಮ ನಾಯಕರಾಗಿದ್ದು, ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮುಂಗಾರು ಪ್ರವಾಹ ಪೂರ್ವ ಸಿದ್ಧತೆ: ಕಂದಾಯ ಸಚಿವ ಅಶೋಕ್ ಸಭೆ
Advertisement
ಈ ವೇಳೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಹಾಗೂ ಸದಸ್ಯರು ಕಾವೇರಿಯಲ್ಲಿ ಅಸ್ಥಿ ವಿಸರ್ಜನೆಯ ಕಾರ್ಯ ಕೈಗೊಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.