ಬೆಂಗಳೂರು: ಸಿಎಂ ಬಿಎಸ್ವೈ ವಿರುದ್ಧ 4 ಶಾಸಕರು ತಿರುಗಿ ಬಿದ್ದಿದ್ದಾರೆ. ಈ ಶಾಸಕರು ಇಂದು ಉಸ್ತುವಾರಿ ಅರುಣ್ ಸಿಂಗ್ಗೆ ದೂರು ನೀಡುವ ಸಾಧ್ಯತೆಯಿದೆ.
ರಾಮನಗರದ ಸಿ.ಪಿ.ಯೋಗೇಶ್ವರ್, ಧಾರವಾಡ ಪಶ್ಚಿಮ ಕ್ಷೇತ್ರದ ಅರವಿಂದ ಬೆಲ್ಲದ್, ಮೈಸೂರಿನ ವಿಶ್ವನಾಥ್, ವಿಜಯಪುರದ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.
Advertisement
Advertisement
ಯೋಗೇಶ್ವರ್ ಚಾರ್ಜ್ಶೀಟ್ ಏನು?
ಸರ್ಕಾರ ಅಧಿಕಾರಕ್ಕೆ ತರುವಲ್ಲಿ ನನ್ನ ಪಾತ್ರ ದೊಡ್ಡದಾಗಿದ್ದರೂ ಬಹಳ ಸತಾಯಿಸಿ ಎಂಎಲ್ಸಿ ಮತ್ತು ಸಚಿವ ಸ್ಥಾನ ನೀಡಿದ್ದಾರೆ. ಆದರೆ ಈವರೆಗೂ ರಾಮನಗರ ಜಿಲ್ಲಾ ಉಸ್ತುವಾರಿ ಕೊಟ್ಟಿಲ್ಲ. ರಾಮನಗರದಲ್ಲಿ ಡಿಕೆಶಿ, ಚನ್ನಪಟ್ಟಣದಲ್ಲಿ ಎಚ್ಡಿಕೆಗೆ ಬಿಎಸ್ವೈ ಹೊಂದಾಣಿಕೆಯಿದೆ. ಡಿಕೆಶಿ, ಎಚ್ಡಿಕೆ ಕೇಳುವ ಅಧಿಕಾರಿಗಳನ್ನು ಸಿಎಂ ವರ್ಗ ಮಾಡ್ತಾರೆ. ನಾನು ಹೆಸರಿಗೆ ಮಾತ್ರ ಮಿನಿಸ್ಟರ್. ಜಿಲ್ಲೆಯಲ್ಲಿ ಡಿಕೆಶಿ, ಎಚ್ಡಿಕೆಯದ್ದೇ ಹವಾ. ಡಿಕೆಶಿ, ಎಚ್ಡಿಕೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ದೊಡ್ಡ ಅಡ್ಡಿಯಾಗಿದ್ದಾರೆ. ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಾಗಿದ್ದು ಪ್ರತಿಯೊಂದಕ್ಕೂ ಯಡಿಯೂರಪ್ಪ ಬದಲು ವಿಜಯೇಂದ್ರ ಬಳಿ ಹೋಗುವ ಪರಿಸ್ಥಿತಿ ಇದೆ.
Advertisement
Advertisement
ಯತ್ನಾಳ್ ಚಾರ್ಜ್ಶೀಟ್ ಏನು?
ಬಿಎಸ್ವೈ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಸರ್ಕಾರ, ಸಚಿವರ ಇಲಾಖೆಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಜಾಸ್ತಿಯಿದೆ. ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರಗಳು ಪಕ್ಷದ ಇಮೇಜ್ಗೆ ಧಕ್ಕೆಯಾಗಿದ್ದು, ಬಿಎಸ್ವೈಗೆ ಆರೋಗ್ಯ, ವಯಸ್ಸು ಸಪೋರ್ಟ್ ಮಾಡ್ತಿಲ್ಲ. ಯಡಿಯೂರಪ್ಪ ಬದಲಿಗೆ ಸಿಎಂ ಸ್ಥಾನ ಬೇರೆಯವರಿಗೆ ಕೊಡಿ.
ಅರವಿಂದ ಬೆಲ್ಲದ್ ಚಾರ್ಜ್ಶೀಟ್ ಏನು?
ಯಡಿಯೂರಪ್ಪ ನಾಯಕತ್ವ ಮೊದಲಿನಂತಿಲ್ಲ. ಎಲ್ಲಕ್ಕೂ ಮಗನ ಮೇಲೆ ಅವಲಂಬಿತರಾಗಿದ್ದಾರೆ. ಪಕ್ಷ ನಿಷ್ಟರನ್ನು ದೂರ ಇಟ್ಟು, ವಲಸಿಗರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಕೋವಿಡ್ನಿಂದಾಗಿ ಸಿಎಂ ಜನಪ್ರಿಯತೆ ಕಮ್ಮಿಯಾಗಿದ್ದು ಬಿಎಸ್ವೈ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಅಧಿಕಾರ ಕೈತಪ್ಪುತ್ತೆ, ಸ್ಥಾನಗಳೂ ಕಡಿಮೆ ಬರಬಹುದು. ಪಕ್ಷದ ಹಿತಕ್ಕಾಗಿ ಈಗಲೇ ಪರ್ಯಾಯ ಪರಿಹಾರ ಕಂಡುಕೊಳ್ಳಬೇಕು. ನಾನು ಸಿಎಂ ಸ್ಥಾನಕ್ಕೆ ಯೋಗ್ಯನಾಗಿದ್ದು ನನಗೂ ಸಮುದಾಯದ ಬಲ, ಶಾಸಕರ ಬೆಂಬಲವೂ ಇದೆ.
ವಿಶ್ವನಾಥ್ ಚಾರ್ಜ್ಶೀಟ್ ಏನು?
ಸಿಎಂ ಯಡಿಯೂರಪ್ಪನವರಿಗೆ ವಯಸ್ಸಾಗಿದ್ದು ಬದಲಾವಣೆ ಮಾಡಬೇಕು. ಅವರ ಕೆಲಸಗಳಿಗೆ ವಯಸ್ಸು ಅಡ್ಡಿ ಆಗುತ್ತಿದೆ. ಹೀಗಾಗಿ ಬದಲಾವಣೆ ಮಾಡಿ ಬೇರೆಯವರಿಗೆ ಸಿಎಂ ಸ್ಥಾನ ನೀಡಬೇಕು. ಇದನ್ನೂ ಓದಿ: ಬಿಜೆಪಿಯಲ್ಲಿ ಬಿಕ್ಕಟ್ಟು – ಬಿಎಸ್ವೈ ಪರ, ವಿರೋಧ ಯಾರು? ತಟಸ್ಥ ಬಣದಲ್ಲಿ ಯಾರಿದ್ದಾರೆ?