– ‘ಸಿ.ಟಿ.ರವಿಗೆ ಎಂ.ಎಲ್.ಸಿ ಮಾಡಿಸಿ ಅಂತ ಬೆಳಗ್ಗಿಂದ ಫೋನು’
ಚಿಕ್ಕಮಗಳೂರು: ಇದೇ ತಿಂಗಳ 19ರಂದು ನಡೆಯೋ ಎಂ.ಎಲ್.ಸಿ. ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಹಾಗೂ ಫಲಿತಾಂಶದ ಬಗ್ಗೆ ಬಿಜೆಪಿಯವರಿಗೆ ಮೊದಲೇ ತಿಳಿದು ಈಗಿನ ಆಂತರಿಕ ಬೇಗುದಿಗೆ ಕಾರಣವಾಗಿದೆಯಾ ಎಂಬ ಅನುಮಾನ ಮೂಡಿದೆ. ಏಕೆಂದರೆ, ಇಂದು ನಗರದ ಡಿಸಿಸಿ ಬ್ಯಾಂಕ್ನಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ ಮಾತು ಎಲ್ಲಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಉಪಚುನಾವಣೆಯಲ್ಲಿ ಸೋತ ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್ ಹಾಗೂ ವಿಶ್ವನಾಥ್ ಎಂ.ಎಲ್.ಸಿ. ಆಗಿ ಸಚಿವರಾಗ್ತಾರಾ ಎಂಬ ಅನುಮಾನ ಮೂಡಿದೆ.
Advertisement
ಬಿಜೆಪಿಗೆ ನಾಯಕರಿಗೆ ಇದರ ಮುನ್ಸೂಚನೆ ಸಿಕ್ಕಿಯೇ ಸಭೆಗಳು ಆರಂಭವಾಗಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಹೇಳಿಕೆ ಮೇಲಿನ ಎಲ್ಲದಕ್ಕೂ ಸಾಮಿಪ್ಯವಿರುವಂತ್ತಿದೆ. ಸಿಎಂ ನಮ್ಮೆಲ್ಲರನ್ನೂ ಶಾಸಕರು, ಸಚಿವರು ಮಾಡಿದ್ದಾರೆ. ಅವರು ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಎಲ್ಲರಿಗೂ ಅವಕಾಶ ಮಾಡಿ ಕೊಡ್ತೀನಿ ಎಂದಿದ್ದರು. ಅವರು ಮಾತಿಗೆ ತಪ್ಪಲ್ಲ ಎಂದಿರೋದು ಸೋತ ಮೂವರು ಎಂ.ಎಲ್.ಸಿ. ಮೂಲಕ ಮಿನಿಸ್ಟರ್ ಆಗುತ್ತಾರಾ ಎಂದು ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿ ಈ ಬೆಳಣಿಗೆ ನಡೆದಿರುವಂತಿದೆ.
Advertisement
ಸಿ.ಟಿ.ರವಿಗೆ ಬೆಳಗ್ಗಿಂದ ಫೋನು: ಈಗ ಎಂ.ಎಲ್.ಸಿ. ಚುನಾವಣೆ ನಡೆಯುತ್ತಿದೆ. ಎರಡು ರಾಜ್ಯ ಸಭೆ ಸೇರಿ 9 ಎಂ.ಎಲ್.ಸಿ. ಬಿಜೆಪಿಗೆ ಲಭ್ಯವಾಗಲಿದೆ. ಜಾತಿ ಸಮುದಾಯ ಹಾಗೂ ಪಕ್ಷಕ್ಕೆ ದುಡಿದವರು, ಶಾಸಕರು, ಸಂಸದರಿಂದ ಕೇಳುತ್ತಿದ್ದಾರೆ. ಇದರಲ್ಲಿ ರಾಜಕೀಯ ಇಲ್ಲ. ಈ ರೀತಿ ಎಲ್ಲಾ ಪಕ್ಷದಲ್ಲೂ ಕೇಳುತ್ತಾರೆ. ಸಿ.ಟಿ.ರವಿಗೆ ಬೆಳಗ್ಗಿಂದಲೂ ಫೋನ್ ಬರುತ್ತಿದೆ. ನಮ್ಮನ್ನು ಸಿಎಂ ಬಳಿ ಕರೆದುಕೊಂಡು ಹೋಗಿ, ಎಂ.ಎಲ್.ಸಿ ಹಾಗೂ ರಾಜ್ಯ ಸಭೆ ಸದಸ್ಯರನ್ನಾಗಿ ಮಾಡಿ ಎಂದು ಎಲ್ಲರೂ ಫೋನ್ ಮಾಡುತ್ತಿದ್ದಾರೆ. ಎಲ್ಲರಿಗೂ ಕೇಳಲು ರೈಟ್ಸ್ ಇದೆ ಎಂದಿದ್ದಾರೆ.
Advertisement
Advertisement
ಯಾರಿಂದ ರಾಜ್ಯಕ್ಕೆ ಒಳ್ಳೆಯದ್ದೋ ಅವರಿಗೆ ರೆಕಮೆಂಡ್: ಇದೇ ವೇಳೆ ಸೋಮಶೇಖರ್ ಜೊತೆಗಿದ್ದ ಸಚಿವ ಸಿ.ಟಿ.ರವಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಇನ್ನೊಂದು ವಾರದಲ್ಲಿ ಕೋರ್ ಕಮಿಟಿ ಸಭೆ ಕರೆಯಬಹುದು. ಕೋರ್ ಕಮಿಟಿಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಯಾವ್ಯಾವ ಹೆಸರು ಬಂದಿದೆ ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ಸಮಾಜಕ್ಕೆ-ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಯಾರಿಂದ ಒಳ್ಳೆದಾಗುತ್ತೋ ಅವರಿಗೆ ಕೊಡ್ಬೇಕು ಅನ್ನೋದು ನಮ್ಮ ರೆಕಮೆಂಟ್ ಎಂದಿದ್ದಾರೆ. ಇನ್ನು, ಶಾಸಕರು ಸಭೆ ಸೇರಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಊಟಕ್ಕೆ ಸೇರಿದ್ವಿ ಎಂದು ಅವರೇ ಹೇಳಿದ್ದಾರೆ. ಊಟಕ್ಕೆ ಸೇರೋದು ತಪ್ಪಲ್ಲ. ಆದ್ರೆ, ಪಕ್ಷವನ್ನ ಬಲಗೊಳಿಸಬೇಕೋ ವಿನಃ ಯಾರೂ ದುರ್ಬಲಗೊಳಿಸಬಾರದು ಎಂದಿದ್ದಾರೆ.