ಬೆಂಗಳೂರು: ಕೊರೋನಾ ಸಂಕಷ್ಟದ ಕಾಲದಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸಿ, ಹೃದಯವಂತಿಕೆಯನ್ನು ಮೆರೆಯುತ್ತಿದ್ದಾರೆ. ಕೆಲವರು ರೇಶನ್ ಕಿಟ್ ಗಳನ್ನು ವಿತರಿಸುತ್ತಿದ್ದಾರೆ. ಮತ್ತೆ ಕೆಲವರು ಪುಡ್ ಪ್ಯಾಕೆಟ್ ಗಳನ್ನು ಹಂಚುತ್ತಿದ್ದಾರೆ. ಇವತ್ತು ಭಾನುವಾರವಾಗಿದ್ದರಿಂದ ನಾನ್ ವೆಜ್ ಬಿರಿಯಾನಿಯನ್ನು ವಿತರಿಸಲಾಯಿತು.
ಬ್ಯಾಟರಾಯನಪುರದ ಸಮಾಜ ಸೇವಕರಾದ ಎಂ ಸುರೇಶ್ ನೇತೃತ್ವದಲ್ಲಿ ಕೇಂದ್ರಸಚಿವ ಡಿ.ವಿ.ಸದಾನಂದಗೌಡ, ಎ.ರವಿ ಸುಮಾರು 200 ಜನಕ್ಕೆ ಬಿರಿಯಾನಿ ವಿತರಿಸಿದರು. ಬ್ಯಾಟರಾಯನಪುರದ ಪೌರಕಾರ್ಮಿಕರಿಗೆ ಬಿರಿಯಾನಿ ಪ್ಯಾಕೆಟ್ ಗಳನ್ನು ಹಂಚಿದರು.
Advertisement
Advertisement
ಹಾಗೆಯೇ ನಾಗರಬಾವಿಯ ಯತೀಶ್ ಆ್ಯಂಡ್ ಫ್ರೆಂಡ್ಸ್ ಟೀಮ್, ಇವತ್ತು ಸಾವಿರಾರು ಜನಕ್ಕೆ ಉಚಿತವಾಗಿ ಬಿರಿಯಾನಿಯನ್ನು ವಿತರಣೆ ಮಾಡಿದ್ರು. ಕಳೆದ ಒಂದು ತಿಂಗಳಿನಿಂದ ಪ್ರತಿದಿನ ಯತೀಶ್ ಹಾಗೂ ಅವರ ಸ್ನೇಹಿತರ ಬಳಗ 3000 ಫುಡ್ ಪ್ಯಾಕೆಟ್ ಗಳನ್ನು ಹಂಚುತ್ತಿದ್ದಾರೆ. ಭಾನುವಾರ ಹಾಗೂ ಬುಧವಾರ ಎರಡು ದಿನ ನಾನ್ ವೆಜ್ ನೀಡುತ್ತಿದ್ದು, ಉಳಿದ ದಿನ ವೆಜ್ ಊಟ ಹಂಚುತ್ತಾರೆ.
Advertisement
Advertisement
ಈ ಮೂಲಕ ಸಾವಿರಾರು ಬಡವರು, ಕೂಲಿ ಕಾರ್ಮಿಕರು ಹಾಗೂ ಅನಾಥರ ಹೊಟ್ಟೆ ತುಂಬಿಸುತ್ತಿದ್ದಾರೆ. ಕಳೆದ ಬಾರಿ ಲಾಕ್ಡೌನ್ ಆದಾಗ ಈ ಸ್ನೇಹಿತರ ಬಳಗ ಎರಡು ತಿಂಗಳುಗಳ ಕಾಲ ರೇಶನ್ ಕಿಟ್ ವಿತರಿಸಿದ್ರು. ಲಾಕ್ಡೌನ್ ಮುಗಿಯುವವರೆಗೂ ಈ ಆಹಾರ ಸೇವೆ ಮುಂದುವರಿಯಲಿದೆ.