ಹುಬ್ಬಳ್ಳಿ: ಲಾಕ್ಡೌನ್ ಸಡಿಲಿಕೆ ಬಳಿಕ ಭಾರತೀಯ ರೈಲ್ವೆ ಇಲಾಖೆ ಕೆಲವು ಸೂಕ್ತ ನಿರ್ದೇಶನಗಳನ್ನು ಜಾರಿ ಮಾಡಿ ಸಾರ್ವಜನಿಕರ ಸೇವೆಗೆ ಹತ್ತು ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸೇವೆಯನ್ನು ಪ್ರಾರಂಭಿಸಲಿದೆ.
ಭಾರತೀಯ ರೈಲ್ವೆ ವಲಯದ ನೈಋತ್ಯ ವಿಭಾಗದಲ್ಲಿ ಸುಮಾರು ಹತ್ತು ವಿಶೇಷ ಎಕ್ಸ್ಪ್ರೆಸ್ ರೈಲುಗಳು ಕಾರ್ಯಾರಂಭ ಮಾಡಲು ಸಿದ್ಧಗೊಂಡಿದ್ದು, ಗಾಡಿ ಸಂಖ್ಯೆ 06587/06588 ಯಶವಂತಪುರ ದಿಂದ ಬಿಕಾನೇರ್ ವಾರಕ್ಕೊಮ್ಮೆ ಸಂಚರಿಸಲಿದೆ.
Advertisement
Advertisement
ಗಾಡಿ ಸಂಖ್ಯೆ 06535/36 ರೈಲು ಮೈಸೂರು-ಸೊಲ್ಲಾಪೂರ ಮಧ್ಯೆ ಪ್ರತಿದಿನವೂ ಸಂಚರಿಸಲಿವೆ. 02253/02254 ರೈಲು ಯಶವಂತಪುರ ಹಾಗೂ ಬಿಜಾಪುರ ಮಧ್ಯೆ ವಾರಕ್ಕೊಮ್ಮೆ ಸಂಚಾರ ನಡೆಸಲಿವೆ. 02627/02628 ಬೆಂಗಳೂರು-ದೆಹಲಿ ಮಧ್ಯೆದಲ್ಲಿ ದಿನವೂ ಸಂಚಾರ ನಡೆಸಲಿವೆ. ಇನ್ನೂ 06539/40 ರೈಲು ಬೆಂಗಳೂರು ಮತ್ತು ಮೈಸೂರು ಮಧ್ಯೆ ಭಾನುವಾರ ಹೊರತು ಪಡಿಸಿ ವಾರದ ಆರು ದಿನದಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
ಅನ್ಲಾಕ್ 4 ಜಾರಿಯಾದ ಬಳಿಕ ಗೃಹ ಸಚಿವಾಲಯ ವಿಶೇಷ ರೈಲು ಸಂಚಾರ ಆರಂಭಿಸಲು ಅನುಮತಿ ನೀಡಿತ್ತು. ಸುಮಾರು 100 ಹೆಚ್ಚು ವಿಶೇಷ ರೈಲುಗಳು ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆಗಳಲ್ಲೂ ಸಂಚಾರ ಮಾಡಲಿದೆ. ಬೇಡಿಕೆ ಹಾಗೂ ಕೋವಿಡ್ ಪರಿಸ್ಥಿತಿಯನ್ನು ಪರಿಗಣಿಸಿ ಹೆಚ್ಚಿನ ರೈಲುಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ರೈಲ್ವೆ ಇಲಾಖೆ ಕಳೆದ ತಿಂಗಳು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.