ಬೆಂಗಳೂರು: 4 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಿದ್ದು ಇಂದು ಸಂಜೆಯಿಂದಲೇ ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿಯಲಿವೆ.
ಭಾನುವಾರ ಸರ್ಕಾರ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಈ ಬೇಡಿಕೆಯನ್ನು ಒಪ್ಪಿರುವ ಬಗ್ಗೆ ಸರ್ಕಾರ ಅಧಿಕೃತವಾಗಿ ತಿಳಿಸಬೇಕು ಜೊತೆಗೆ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮುಂದುವರಿಸಿದ್ದರು.
Advertisement
Advertisement
ಈ ನಡುವೆ ಮಧ್ಯಾಹ್ನ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಬೇಡಿಕೆ ಒಪ್ಪಿರುವ ಬಗ್ಗೆ ಪತ್ರ ಕಳುಹಿಸಿದ್ದರು. ಈ ಬೆನ್ನಲ್ಲೇ ನೌಕರರ ಸಂಘದ ಮುಖಂಡರು ಸಭೆ ನಡೆಸಿ ಮಷ್ಕರವನ್ನು ಕೈ ಬಿಡುವ ತೀರ್ಮಾನವನ್ನು ತೆಗೆದುಕೊಂಡರು.
Advertisement
ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರ ನೀಡಿದ ಭರವಸೆ ಈಡೇರಿಕೆಗಾಗಿ ಮೂರು ತಿಂಗಳು ಅವಕಾಶ ನೀಡುತ್ತೇವೆ. ಒಂದು ವೇಳೆ ಈ ಅವಧಿಯ ಒಳಗಡೆ ಬೇಡಿಕೆ ಈಡೇರದೇ ಇದ್ದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Advertisement
ಜನವರಿ 1 ರಿಂದ 30ರವರೆಗೆ ಯಾವ ಯಾವ ಕೆಲಸ ಆಗಬೇಕೋ ಅದನ್ನು ಫಾಲೋ ಮಾಡುತ್ತೇವೆ. ನಿಮ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ದೊಡ್ಡ ಬೇಡಿಕೆ ಇದೆ ಎಂದು ಹೇಳಿ ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.