ಜೈಪುರ: ಸಾಮಾಜಿಕ ಜಾಲತಾಣದಲ್ಲಿ 13 ವರ್ಷದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಭೇಟಿಯಾಗುವ ನೆಪದಲ್ಲಿ ಮುಂಬೈಗೆ ಕರೆಸಿ ಒಬ್ಬ ಯುವಕ ಹಾಗೂ ಮತ್ತೊಬ್ಬ ಅಪ್ರಾಪ್ತ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.
ಬಾಲಕಿ ಮೂಲತಃ ರಾಜಸ್ಥಾನದ ಜೈಪುರದವಳಾಗಿದ್ದು, ಆರೋಪಿ ಸೈಫ್ ಅಲಿ ಖಾನ್(21) ಹಾಗೂ ಅಪ್ರಾಪ್ತ ಆಕೆಯನ್ನು ಮುಂಬೈನ ಕುರ್ಲಾಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ. ಯುವಕ ಮತ್ತು ಅಪ್ರಾಪ್ತ 13 ವರ್ಷದ ಬಾಲಕಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡಿದ್ದು, ಬಳಿಕ ಮೂವರ ಮಧ್ಯೆ ಸ್ನೇಹ ಬೆಳೆದಿದೆ. ಬಾಲಕಿ ತನ್ನ ಸ್ನೇಹಿತರನ್ನು ನೋಡಲು ರಾಜಸ್ಥಾನದಿಂದ ಮುಂಬೈಗೆ ತೆರಳಿದ್ದಾಳೆ. ಈ ವೇಳೆ ಆರೋಪಿ ಯುವಕ ಹಾಗೂ ಅಪ್ರಾಪ್ತ ಬಾಲಕ ಇಬ್ಬರೂ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
Advertisement
Advertisement
ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದು, ಈ ವೇಳೆ 21 ವರ್ಷದ ಯುವಕನೊಂದಿಗೆ ಸ್ನೇಹ ಬೆಳೆಸಿದ್ದಾಳೆ. ಬಳಿಕ ಆರೋಪಿ ಹಾಗೂ ಅಪ್ರಾಪ್ತನ ಜೊತೆ ಮಾತನಾಡಲು ಆರಂಭಿಸಿದ್ದಾಳೆ. ಇಬ್ಬರೂ ಆಕೆಯನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಜೈಪುರದ ಬಸ್ ನಿಲ್ದಾಣಕ್ಕೆ ಬರಲು ಸೂಚಿಸಿದ್ದಾರೆ. ಬಳಿಕ ಸೂರತ್ ಬಸ್ ಹತ್ತಲು ಸೂಚಿಸಿದ್ದು, 13 ವರ್ಷದ ಬಾಲಕಿ ಮನೆಯಿಂದ ಹೊರಟು ಸೂರತ್ ಬಸ್ ಹತ್ತಿದ್ದಾಳೆ.
Advertisement
ಆಕೆಯ ಬಳಿ ಹಣವಿರಲಿಲ್ಲ ಆರೋಪಿಯೇ ಯುಪಿಐ ಮೂಲಕ ನೇರವಾಗಿ ಬಸ್ ಕಂಡಕ್ಟರ್ಗೆ ಹಣ ಸಂದಾಯ ಮಾಡಿದ್ದಾನೆ. ಬಳಿಕ ಬಾಲಕಿ ಸೂರತ್ಗೆ ಬಂದು ಇಳಿದಿದ್ದಾಳೆ. ನಂತರ ಇಬ್ಬರೂ ಸೇರಿ ಆಕೆಯನ್ನು ಮುಂಬೈಗೆ ಕರೆದೊಯ್ದಿದ್ದಾರೆ.
Advertisement
ಆರೋಪಿಯನ್ನು ಸೈಫ್ ಅಲಿ ಖಾನ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಅಪ್ರಾಪ್ತ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಗಳು ಕಾಣದ್ದರಿಂದ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಬಾಲಕಿಯನ್ನು ಕುರ್ಲಾದಲ್ಲಿ ರಕ್ಷಣೆ ಮಾಡಲಾಗಿದೆ. ನಂತರ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅವಳು ಅಪ್ರಾಪ್ತೆಯಾಗಿರುವುದರಿಂದ ಮನೆ ಬಿಟ್ಟು ಹೋಗುವ ಇಚ್ಛೆ ಸ್ವೀಕಾರಾರ್ಹವಲ್ಲ. ಸಂಬಂಧಿಸಿದ ಐಪಿಸಿಯ ವಿವಿಧ ಸೆಕ್ಷನ್ಗಳಡಿ ಹಾಗೂ ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.