ಮುಂಬೈ: ಸಿನಿಮಾಗಳಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚುವ ನಟ ಸಾಮಾಜಿಕ ಕೆಲಸ ಮಾಡಿ ಜನರ ನಡುವೆ ರಿಯಲ್ ಹೀರೋ ಎಂದು ಸೋನು ಸೂದ್ ಕರೆಸಿಕೊಂಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಸೋನು ಸೂದ್ ನೂರಾರು ಜನರಿಗೆ ಸಹಾಯ ಮಾಡಿದ್ದಾರೆ. ಇದೀಗ ಟ್ವಿಟ್ಟರ್ ಲ್ಲಿ ಸಹಾಯ ಕೇಳಿದ ಯುವಕನಿಗೆ ನಾನು ನಿಮ್ಮ ಜೊತೆ ಇದ್ದೇನೆ ಎಂದು ಹೇಳಿ ಭರವಸೆಯನ್ನು ನೀಡಿದ್ದಾರೆ.
Advertisement
ಟ್ವಿಟ್ಟರ್ ನಲ್ಲಿ ಏನಿದೆ?
ಸೋನು ಸೂದ್ ಅವರ ರೇಖಾಚಿತ್ರವನ್ನು ಹಂಚಿಕೊಂಡ ಯುವಕ ನನಗೆ ಈಗ 18 ವರ್ಷ ನಾನು ಪೇಡ್ ಕಲಾವಿದನಾಗಬೇಕು. ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಬಯಸುತ್ತೇನೆ ನನಗೆ ಸಹಾಯ ಮಾಡಿ ಎಂದು ಸೋನು ಸೂದ್ ಅವರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದ.
Advertisement
Title: HOPE
because he became hope, in India during this lockdown.
A little tribute from my side to this legendary actor#SonuSood
Hope this reaches sir????
About me :
I’m 18 years old I want to become a paid artist to as well help my family
I need sir’s help. pic.twitter.com/m6QAXDg6sZ
— G Bharadwaj (@GBharadwaj5) December 15, 2020
Advertisement
ಇದನ್ನು ಗಮನಿಸಿದ ಸೋನು ಸೂದ್ ಅವರು ಈ ಪೋಸ್ಟ್ ಗೆ ರೀ ಟ್ವೀಟ್ ಮಾಡಿದ್ದಾರೆ. ನಿಮ್ಮ ಪ್ರಯತ್ನಗಳಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಎಂದು ರೀ ಟ್ವೀಟ್ ಮಾಡುವ ಮೂಲಕವಾಗಿ ಮಾನವೀಯತೆ ಮೆರೆದಿದ್ದಾರೆ.
Advertisement
I am with you ???? https://t.co/3wBVzSddLi
— sonu sood (@SonuSood) December 16, 2020
ಸೋನು ಸೂದ್ ಮುಂಬೈನಲ್ಲಿ ತನ್ನ ಎಂಟು ಆಸ್ತಿ ಮೂಲಗಳನ್ನು ಅಡಮಾನ ಇಟ್ಟುಕೊಂಡು ನಿರ್ಗತಿಕರಿಗೆ ಸಹಾಯ ಮಾಡಲು 10 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿದ್ದರು. 2 ಅಂಗಡಿ, 6 ಫ್ಲಾಟ್ ಅನ್ನು ಸಹಾಯ ಮಾಡಲು ಹಣದ ಅವಶ್ಯಕತೆ ಇರುವುದರಿಂದ ಅಡವಿಟ್ಟಿದ್ದರು.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿರುವ ವೇಳೆ ಬದುಕಿನ ಮೂಲವನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಡವರಿಗೆ ಕೆಲವು ದಿನಗಳ ಹಿಂದೆ ಇ-ರಿಕ್ಷಾ ಒದಗಿಸುವ ಮೂಲಕ ಸೂನು ಸೂದ್ ನೆರವಾಗಿದ್ದರು.
ಈ ಹಿಂದೆ ಕೆಲಸಕ್ಕಾಗಿ ಹೊರಗಿದ್ದ ಹಲವಾರು ವಲಸೆ ಕಾರ್ಮಿಕರು ಲಾಕ್ಡೌನ್ ಅಲ್ಲಿ ಸಿಲುಕಿಕೊಂಡಿದ್ದರು. ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳಿಗೆ ಹಿಂತಿರುಗಲು ಕಷ್ಟವಾದಾಗ ರೈಲುಗಳು, ಬಸ್ ವ್ಯವಸ್ಥೆ ಏರ್ಪಡಿಸಿ ಸಹಾಯ ಮಾಡಿದರು. ಸೋನು ಸೂದ್ ಕೆಲಸಕ್ಕೆ ದೇಶಾದ್ಯಂತ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.