– ಓರ್ವ ಅಮಾನತು, ತನಿಖೆಗೆ ಆದೇಶ
ರಾಯ್ಪುರ: ಸ್ಥಳೀಯ ಬಿಜೆಪಿ ನಾಯಕ ಸರ್ಕಾರಿ ಹೆಲಿಕಾಪ್ಟರ್ ನಲ್ಲಿ ಪತ್ನಿ ಜೊತೆ ಫೋಟೋಶೂಟ್ ಮಾಡಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಬಿಜೆಪಿ ನಾಯಕನಿಂದಾಗಿ ಓರ್ವ ಅಮಾನತುಗೊಂಡಿದ್ರೆ, ಮೂವರ ವಿರುದ್ಧ ತನಿಖೆಗೆ ಸಚಿವಾಲಯ ಆದೇಶಿಸಿದೆ. ಏಳು ದಿನಗಳಲ್ಲಿ ತನಿಖಾ ವರದಿ ನೀಡುವಂತೆ ಸೂಚನೆ ನೀಡಿದೆ.
Advertisement
ಮಾಜಿ ಶಾಸಕ, ಜಶಪುರ ಬಿಜೆಪಿ ಜಿಲ್ಲಾಧ್ಯಕ್ಷ ಸಂಕೇತ್ ಸಾಯ್ ಫೋಟೋಶೂಟ್ ಮಾಡಿಸಿಕೊಂಡ ನಾಯಕ. ಕೆಲ ದಿನಗಳ ಹಿಂದೆ ಸಂಕೇತ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಭಾನುವಾರ ಹೆಲಿಕಾಪ್ಟರ್ ನಿಲ್ಲಿಸಿದ ಹೈಂಗರ್ ಪ್ರದೇಶಕ್ಕೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಗಂಟೆಗೂ ಅಧಿಕ ಕಾಲ ಫೋಟೋಶೂಟ್ ನಡೆಸಿದ್ರೂ ಅಧಿಕಾರಿಗಳು ತಡೆಯಲು ಮುಂದಾಗಿಲ್ಲ ಎನ್ನಲಾಗಿದೆ.
Advertisement
Advertisement
ಭಾನುವಾರ ಸಂಜೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬಳಿಕ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರಿ ಹೆಲಿಕಾಪ್ಟರ್ ಖಾಸಗಿಗೆ ಬಳಸಿಕೊಂಡಿದ್ದು ಎಷ್ಟು ಸರಿ? ಮುಖ್ಯಮಂತ್ರಿಗಳು ಪ್ರಯಾಣಿಸುವ ಕಾಪ್ಟರ್ ಇದಾಗಿದ್ದು, ಭದ್ರತಾ ಸಿಬ್ಬಂದಿ ಫೋಟೋಶೂಟ್ ಗೆ ಅವಕಾಶ ನೀಡಿದ್ದು ದೊಡ್ಡ ನಿರ್ಲಕ್ಷ್ಯ ಎಂದು ವಿಪಕ್ಷಗಳು ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡಿವೆ.
Advertisement