ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಎಸ್ಎಸ್ಎಲ್ಸಿ ಓದುತ್ತಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಪಬ್ಲಿಕ್ ಟಿವಿ, ರೋಟರಿ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಉಚಿತ `ಟ್ಯಾಬ್’ ವಿತರಿಸಲು ಮುಂದಾಗಿದೆ.
ಖಾಸಗಿ ಶಾಲೆಯ ಮಕ್ಕಳು ಈಗಾಗಲೇ ಆನ್ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆರ್ಥಿಕ ಕಾರಣದಿಂದಾಗಿ ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಕಾರಣಕ್ಕೆ ಮುಂದೆ ಶಿಕ್ಷಣದಿಂದ ವಂಚಿತರಾಗಬಾರದು. ಈ ಕಾರಣಕ್ಕೆ ಆನ್ಲೈನ್ ಶಿಕ್ಷಣ ವಂಚಿತ ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ನೀಡಲು ಮುಂದಾಗುತ್ತಿದ್ದೇವೆ.
Advertisement
ಗಣಿತ, ಇಂಗ್ಲಿಷ್, ವಿಜ್ಞಾನ, ಸಮಾಜ ಪಠ್ಯವನ್ನು ಟ್ಯಾಬ್ ಒಳಗೊಂಡಿದ್ದು 2 ಲಕ್ಷ ವಿದ್ಯಾರ್ಥಿಗಳಿಗೆ ವಿತರಣೆಯ ಗುರಿಯನ್ನು ಹಾಕಲಾಗಿದೆ. ಡಿಡಿಪಿಐಗಳ ಮೂಲಕ 34 ಜಿಲ್ಲೆಗಳಿಗೂ ವಿತರಣೆಗೆ ಸಂಕಲ್ಪ ಮಾಡಿದ್ದು, ಶಾಲೆಗಳ ಮುಖ್ಯೋಪಾಧ್ಯಾಯರ ಮೂಲಕ ನಿಗಾ ಇಡಲಾಗುವುದು. ಟ್ಯಾಬ್ ದುರ್ಬಳಕೆ ಆಗದಂತೆ ಆ್ಯಪ್ ಆಧಾರಿತ ಲಾಕ್ ಇರಲಿದೆ.
Advertisement
ಒಂದು ಟ್ಯಾಬ್ಗೆ 3,495 ರೂ. ಆಗಲಿದ್ದು, ಈ ಸಹಾಯ ಹಸ್ತಕ್ಕೆ ನೀವು ನೆರವು ನೀಡಬಹುದು. ನೀವು ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ. ಬನ್ನಿ ಸಹಾಯ ಮಾಡೋಣ. ಮಕ್ಕಳ ಭವಿಷ್ಯ ಬೆಳಗಿಸೋಣ.
Advertisement
ದೇಣಿಗೆ ನೀಡಬಯಸುವ ಮಹಾದಾನಿಗಳಿಗಾಗಿ ಬ್ಯಾಂಕ್ ವಿವರ:
ಪಬ್ಲಿಕ್ ಟಿವಿ ಎಜುಕೇಷನ್& ಚಾರಿಟೇಬಲ್ ಟ್ರಸ್ಟ್
ಬ್ಯಾಂಕ್ – ಆಕ್ಸಿಸ್ ಬ್ಯಾಂಕ್
ಖಾತೆ ಸಂಖ್ಯೆ – 916010043440024
(ಆರ್.ಟಿ.ನಗರ ಬ್ರಾಂಚ್, ಬೆಂಗಳೂರು)
ಐಎಫ್ಎಸ್ಸಿ ಕೋಡ್- UTIB0000363 UTIB