ಬೆಂಗಳೂರು: ಸರ್ಕಾರ ಹೋಂ ಐಸೋಲೇಷನ್ ಮಾರ್ಗಸೂಚಿಯನ್ನ ಪ್ರಕಟಿಸಿದೆ. ಸೋಂಕು ಗುಣಲಕ್ಷಣ ಇಲ್ಲದವರು, ಕಡಿಮೆ ಗುಣಲಕ್ಷಣ ಇದ್ದವರಿಗೆ ಹೋಂ ಐಸೊಲೇಷನ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
Advertisement
50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ ಯಾವುದೇ ಮಾರಕ ರೋಗ ಇಲ್ಲದವರಿಗೆ ಹೋಂ ಐಸೊಲೇಷನ್ ಮಾಡಲಾಗುತ್ತದೆ. ಹೋಂ ಐಸೊಲೇಷನ್ಗೆ ಮನೆ ಯೋಗ್ಯವೇ ಎಂಬುದನ್ನು ಆರೋಗ್ಯ ಇಲಾಖೆ ನಿರ್ಧರಿಸುತ್ತದೆ. ಪ್ರತ್ಯೇಕ ಕೊಠಡಿ, ಶುದ್ಧ ಗಾಳಿ, ಪ್ರತ್ಯೇಕ ಶೌಚಾಲಯ ಹೊಂದಿದ್ದ ಮನೆಯಲ್ಲಿ ಮಾತ್ರ ಐಸೊಲೇಷನ್ ಮಾಡಲಾಗುತ್ತದೆ.
Advertisement
Advertisement
ಸೋಂಕಿತರು 17 ದಿನ ಹೋಂ ಐಸೊಲೇಷನ್ ಆಗಬೇಕು. ಕೈಗೆ ಸೀಲ್, ಎಡಗೈಗೆ ಇ-ಟ್ಯಾಗ್ ಹಾಕಲಾಗುತ್ತೆ. ಹೋಂ ಐಸೊಲೇಷನ್ನಲ್ಲಿ ಇರುವಾಗ ಟೆಲಿ ಮೆಡಿಸಿನ್ ಸೌಲಭ್ಯ ಸಿಗಲಿದೆ. ಅಗತ್ಯ ಇದ್ದರೆ ಸ್ಥಳಕ್ಕೆ ವೈದ್ಯರು ಬರಲಿದ್ದಾರೆ. ಇನ್ನೂ ಹೋಂ ಐಸೊಲೇಷನ್ನದ್ದವರು ಪ್ರತಿ ದಿನ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪಲ್ಸ್ ಆಕ್ಸಿಮೀಟರ್, ಥರ್ಮೋ ಮೀಟರ್, ಪಿಪಿಇ ಕಿಟ್ ಹೊಂದಿರಬೇಕು. ಹೋಂ ಐಸೊಲೇಷನ್ ಆಗಿರುವುದು ಅಕ್ಕಪಕ್ಕದ ಮನೆಯವರಿಗೆ ತಿಳಿದಿರಬೇಕು. ಮನೆ ಮುಂದೆ ಹೋಂ ಐಸೊಲೇಷನ್ ನೋಟಿಸ್ ಅಂಟಿಸಲಾಗುತ್ತದೆ.