ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ರಾಜ್ಯ ಸರ್ಕಾರ ದುಬಾರಿ ಬೆಲೆಯ ಕಾರನ್ನು ನೀಡಿದೆ.
ದೇವೇಗೌಡರ ಓಡಾಟಕ್ಕೆ ಸರ್ಕಾರ ಸುಮಾರು 60 ಲಕ್ಷ ಬೆಲೆಯ ವೋಲ್ವೋ ಹೊಸ ಕಾರನ್ನ ನೀಡಿದೆ. ದೇವೇಗೌಡರು ರಾಜ್ಯಸಭಾ ಸದಸ್ಯರಾದ ನಂತರ ಪ್ರೋಟೊ ಕಾಲ್ ಪ್ರಕಾರ ಕಾರು ನೀಡಬೇಕಿತ್ತು. ಈ ಹಿನ್ನೆಲೆ ಹೊಸ ವೋಲ್ವೋ ಕಾರನ್ನ ಸರ್ಕಾರ ನೀಡಿದೆ. 15 ದಿನಗಳ ಹಿಂದಷ್ಟೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ಕಾರು ಖರೀದಿ ಮಾಡಲಾಗಿದೆ.
Advertisement
Advertisement
ದೇವೇಗೌಡರ ಈ ಹೊಸ ಕಾರಿಗೆ ನೋಂದಣಿ ಕೆಎ 53 ಜಿ 3636 ನೀಡಲಾಗಿದೆ. ಈ ಮೂಲಕ ದೇವೇಗೌಡರು ರಾಜ್ಯದಲ್ಲಿ ಅತಿ ದುಬಾರಿ ಸರ್ಕಾರಿ ಕಾರು ಹೊಂದಿರುವ ಜನಪ್ರತಿನಿಧಿ ಎನಿಸಿಕೊಂಡಿದ್ದಾರೆ. Volvo XC60 D5 ಮಾಡೆಲ್ ಕಾರಿನ ಮೂಲ ಬೆಲೆ 59.90 ಲಕ್ಷ ರೂಪಾಯಿ ಆಗಿದೆ. ತೆರಿಗೆ, ವಿಮೆ ಮೊತ್ತ ಸೇರಿದರೆ 74.90 ಲಕ್ಷ ರೂಪಾಯಿ ಆಗುತ್ತದೆ. ಆದರೆ ಸರ್ಕಾರದ ಹೆಸರಿನಲ್ಲಿ ಖರೀದಿಸುವಾಗ ತೆರಿಗೆ ಇಲ್ಲದಿರುವುದರಿಂದ ಸುಮಾರು 60 ಲಕ್ಷ ರೂಪಾಯಿ ಆಗಿದೆ.
Advertisement
Advertisement
ಈಗಾಗಲೇ ಸಿಎಂ ಯಡಿಯೂರಪ್ಪ ಬಳಿ ಎರಡು ಫಾರ್ಚೂನರ್ ಕಾರುಗಳಿವೆ. ಇನ್ನೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ವಿಧಾನಸಭಾ ಸಚಿವಾಲಯದಿಂದ ಫಾರ್ಚೂನರ್ ಕಾರು ನೀಡಲಾಗಿದೆ. ದೇವೇಗೌಡರು ಇನ್ನೂ ಸರ್ಕಾರದ ಕಾರನ್ನು ಪಡೆಯಲಿಲ್ಲ. ಹೀಗಾಗಿ ಸದ್ಯಕ್ಕೆ ಕಾರು ಕುಮಾರಕೃಪದಲ್ಲಿದೆ.