– ಕೊರೊನಾ ಮೊದಲ ಅಲೆ ಬಳಿಕ ಎಲ್ಲರೂ ಎಚ್ಚರ ಕಳೆದುಕೊಂಡರು
ನವದೆಹಲಿ: ಪ್ರಸ್ತುತ ಕೊರೊನಾ ಭೀಕರ ಪರಿಸ್ಥಿತಿಗೆ ಮೊದಲ ಅಲೆ ಬಳಿಕ ಸರ್ಕಾರ, ಆಡಳಿತ ಹಾಗೂ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಿರುವುದೇ ಕಾರಣ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಆಡಳಿತ ವರ್ಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಆನ್ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕೊರೊನಾ ಮೊದಲ ಅಲೆಯ ಬಳಿಕ ವೈದ್ಯರು ಎಷ್ಟೇ ಎಚ್ಚರಿಕೆ ನೀಡಿದರೂ ಸರ್ಕಾರ, ಆಡಳಿತ ವರ್ಗ ಹಾಗೂ ಸಾರ್ವಜನಿಕರು, ಎಲ್ಲರೂ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದೇವೆ. ಹೀಗಾಗಿಯೇ ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಇಂತಹ ಪರೀಕ್ಷೆ ಸಂದರ್ಭದಲ್ಲಿ ದೇಶದ ಜನತೆ ಇತರರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಒಗ್ಗಟ್ಟಾಗಿ, ತಂಡಗಳಾಗಿ ಕೆಲಸ ಮಾಡಿ. ಸಾರ್ವಜನಿಕರು ಧನಾತ್ಮಕ ವಿಚಾರಗಳು, ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವ ಮೂಲಕ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಇದೇ ವೇಳೆ ಮೂರನೇ ಅಲೆ ಬಗ್ಗೆ ಸಹ ಮಾತನಾಡಿರುವ ಮೋಹನ್ ಭಾಗವತ್, ನಾವು ಹೆದರಬಾರದು, ಬಂಡೆಯಂತೆ ನಿಲ್ಲಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಋಣಾತ್ಮಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಧನಾತ್ಮಕ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು. ಮುನ್ನೆಚ್ಚರಿಕಾ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಕರೆ ನೀಡಿದಿದ್ದಾರೆ.
Advertisement
ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಲು ಇದು ಸೂಕ್ತ ಸಮಯವಲ್ಲ, ಅನಗತ್ಯ ಟೀಕೆಗಳನ್ನು ಮಾಡಬಾರದು. ಜನ ಧೈರ್ಯವನ್ನು ಕಳೆದುಕೊಳ್ಳಬಾರದು, ದೇಶವಯ ದೃಢ ನಿಶ್ಚಯ ಹೊಂದಿರಬೇಕು. ನಮಗೆ ಸುಸ್ತಾಗಿ ಬಿಟ್ಟುಕೊಟ್ಟರೆ ಹಾವಿನ ಮುಂದೆ ಇಲಿ ಬಿಟ್ಟುಕೊಟ್ಟಂತೆ. ಈ ರೀತಿ ಆಗವುದನ್ನು ನಾವು ಸಹಿಸುವುದಿಲ್ಲ. ಅತೃಪ್ತಿ ಇರುವಷ್ಟು ಭರವಸೆ ಸಹ ಇದೆ, ಒಳ್ಳೆಯ ಕಾರ್ಯಗಳನ್ನು ಮಾಡುವ ಜನರಿದ್ದಾರೆ. ಅವರ ಸಾಮಥ್ರ್ಯಕ್ಕೆ ಅನುಗುಣವಾಗಿ ಇತರರಿಗೆ ಸಹಾಯ ಮಾಡುತ್ತಾರೆ ಎಂದು ತಮ್ಮ ಭಾಷಣದಲ್ಲಿ ಅವರು ಹೇಳಿದ್ದಾರೆ.
ಮೊದಲ ಅಲೆಯ ಸಂದರ್ಭದಲ್ಲಿ ಫೆಬ್ರವರಿಯಲ್ಲಿ ಕೊರೊನಾ ಪ್ರಕರಣಗಳು ಕುಸಿತ ಕಂಡಾಗ ಪ್ರಧಾನಿ ನರೇಂದ್ರ ಮೋದಿ ನಾಯತ್ವವನ್ನು ಶ್ಲಾಘಿಸಲಾಗಿತ್ತು. ಈ ಕುರಿತು ಸ್ವತಃ ಬಿಜೆಪಿ ಹೇಳಿಕೊಂಡಿತ್ತು.