ತುಮಕೂರು: ಸಮೃದ್ಧವಾಗಿ ಮಳೆಯಾಗಲಿ ಎಂದು ಪರ್ಜನ್ಯ ಜಪ, ಹೋಮ-ಹವನವನ್ನು ತುಮಕೂರಿನಲ್ಲಿ ಮಾಡಲಾಗುತ್ತಿದೆ. ಇದನ್ನೂ ಓದಿ: ನಾನು ಈ ಮೂರು ವಸ್ತುಗಳನ್ನು ಮರೆಯುತ್ತೇನೆ: ರಮ್ಯಾ
Advertisement
ರಾಜ್ಯದ ಕೆಲವೆಡೆ ಬೆಂಬಿಡದೆ ಮಳೆ ಸುರಿಯುತ್ತಿದೆ. ಇನ್ನೂ ಹಲವೆಡೆ ತೀವ್ರ ಬರಗಾಲವಿದೆ. ತುಮಕೂರು ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಹೀಗಾಗಿ ಸಮೃದ್ದ ಮಳೆ ಬರಲೆಂದು ಹೋಮ ಹವನ ಮಾಡಲಾಗಿದೆ.
Advertisement
Advertisement
ಜಿಲ್ಲೆಯ ಮಧುಗಿರಿ ಪಟ್ಟಣದ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಪರ್ಜನ್ಯ ಹೋಮ ನೆರವೇರಿಸಲಾಯಿತು. ಈ ವೇಳೆ ಪುರೋಹಿತರು ನೀರು ತುಂಬಿದ ಡ್ರಮ್ಗಳಲ್ಲಿ ನಿಂತು ಋಷ್ಯಶೃಂಗ ದೇವರ ಜಪ ಮಾಡಿದರು. 11 ಜನ ಪುರೋಹಿತರು ಮಂತ್ರಗಳನ್ನು ಪಠಣೆ ಮಾಡಿದ್ದಾರೆ. ಎರಡು ದಿನಗಳ ಕಾಲ ನಡೆದ ಪೂಜಾ ಕೈಂಕಾರ್ಯದಲ್ಲಿ ಸಮೃದ್ಧ ಮಳೆಯಾಗಲೆಂದು ಪ್ರಾರ್ಥಿಸಿ ಗಣಪತಿ ಪೂಜೆ, ಏಕಾದಶಿ, ಉದಕ ಶಾಂತಿ, ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ ನಡೆಸಲಾಯಿತು.