ನವದೆಹಲಿ: ಎಂದಾದರೂ ಸಮುದ್ರ ಕುದುರೆ ಮರಿ ಹಾಕುವುದನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಗಂಡು ಸಮುದ್ರ ಕುದುರೆ ಮರಿ ಹಾಕುವ ದೃಶ್ಯ. ಈ ವಿಡಿಯೋ ನೋಡಿದರೆ ನಿಜಕ್ಕೂ ನೀವು ಒಂದು ಕ್ಷಣ ಬೆರಗಾಗುತ್ತೀರಿ.
Advertisement
ಮುಖ-ಕುದುರೆಯಂತೆ, ದೇಹ-ಕಂಬಳಿ ಹುಳುವಿನಂತೆ, ಬಾಲ-ಹಲ್ಲಿಯಂತೆ ಇರುವ ಸಮುದ್ರ ಕುದುರೆ, ಮೀನುಗಳು ಕಶೇರುಕಗಳ (Chordata) ಗುಂಪಿಗೆ ಸೇರಿದೆ. ಕಾಂಗರೂಗಳ ರೀತಿಯಲ್ಲೇ ಗಂಡು ಸಮುದ್ರ ಉದುರೆ ಸಹ ತನ್ನ ಮರಿಗಳನ್ನು ಹೊಟ್ಟೆ ಭಾಗದ ಚೀಲದಲ್ಲಿ ಇಟ್ಟುಕೊಂಡಿರುತ್ತದೆ. ಇನ್ನೂ ವಿಶೇಷವೆಂದರೆ ಸಮುದ್ರ ಕುದುರೆ ಒಂದೇ ಬಾರಿಗೆ ಸಾವಿರಾರು ಮರಿಗಳನ್ನು ಹಾಕುತ್ತದೆ. ಸಮುದ್ರ ಕುದುರೆ ಮರಿ ಹಾಕುವ ಅಪರೂಪದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Advertisement
ನೇಚರ್ ಇಸ್ ಲಿಟ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, 19 ಸೆಕೆಂಡ್ನ ವಿಡಿಯೋ ಟ್ವೀಟ್ ಮಾಡಿ ಒನ್ ವರ್ಡ್ ದಿಸ್ ವಿಡಿಯೋ ಎಂಬ ಸಾಲುಗಳನ್ನು ಬರೆಯಲಾಗಿದೆ. ಈ ಮೂಲಕ ಫಾಲೋವರ್ಸ್ ಗೆ ಕಮೆಂಟ್ ಮಾಡುವಂತೆ ಕರೆ ನೀಡಲಾಗಿದೆ. ಅಕ್ವೇರಿಯಂನಲ್ಲಿನ ಸಮುದ್ರ ಕುದುರೆ ಹಲವು ಮರಿಗಳಿಗೆ ಜನ್ಮ ನೀಡುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ವಿಡಿಯೋ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. 41.4 ಬಾರಿ ವೀಕ್ಷಣೆಯಾಗಿದೆ. 265ಜನ ರೀಟ್ವೀಟ್ ಮಾಡಿದ್ದಾರೆ.
Advertisement
One word this video pic.twitter.com/L2dHm05Cdz
— Nature is Lit???? (@NaturelsLit) July 21, 2020
Advertisement
ಸಮುದ್ರ ಕುದುರೆ ಮರಿಗಳನ್ನು ಹಾಕುತ್ತದೆ ಆದರೆ ಅವುಗಳನ್ನು ಬೆಳೆಸುವುದಿಲ್ಲ. ಒಂದು ಬಾರಿ ಚೀಲದಿಂದ ಹೊರ ಬಂದ ಬಳಿಕ ಮರಿಗಳು ಸ್ವಂತ ಶಕ್ತಿಯಿಂದ ಬೆಳೆಯುತ್ತವೆ. ಇದರ ಸಂತತಿಗೆ ಯಾವುದೇ ರಕ್ಷಣೆ ಸಿಗುವುದಿಲ್ಲ. ಹೀಗಾಗಿ ಹೆಚ್ಚು ಮರಿಗಳು ಸಾವಿಗೆ ತುತ್ತಾಗುತ್ತವೆ. ಕೆಲವೇ ಸಮುದ್ರ ಕುದುರೆಗಳು ಬದುಕುಳಿಯಲು ಇದೇ ಕಾರಣವಾಗಿದೆ.