ಪಾಟ್ನಾ: ಬಿಹಾರದಲ್ಲಿ ಈ ಬಾರಿ ಮಹಾ ಮೈತ್ರಿ ಅಧಿಕಾರಕ್ಕೆ ಏರಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು. ಆದರೆ ಸದ್ಯದ ಟ್ರೆಂಡ್ ಗಮನಿಸುವಾಗ ಮತ್ತೆ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಏರುವ ಸಾಧ್ಯತೆಯಿದೆ.
ಸದ್ಯದ ಟ್ರೆಂಡ್ ಪ್ರಕಾರ ಎನ್ಡಿಎ 131, ಮಹಾಮೈತ್ರಿ 95 ಇತರರು 17 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ.
Advertisement
Advertisement
15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಅಧಿಕಾರ ಕಳೆದುಕೊಳ್ಳುವ ನಿರೀಕ್ಷೆ ಇದೆ. ಆರ್ಜೆಡಿ, ಜೆಡಿಯು ಮತ್ತು ಎಡಪಕ್ಷಗಳ ಮಹಾಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಸಿಎಂ ಆಗಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿತ್ತು. ಅದರಲ್ಲೂ ಇಂಡಿಯಾ ಟುಡೇ-ಆಕ್ಸಿಸ್ ಸರ್ವೆ ಮತ್ತು ಟುಡೇಸ್ ಚಾಣಕ್ಯ ಸರ್ವೆ ಮಹಾಮೈತ್ರಿಕೂಟಕ್ಕೆ ಪ್ರಚಂಡ ಬಹುಮತವನ್ನು ಅಂದಾಜಿಸಿತ್ತು.
Advertisement
ಆರಂಭದ ಮತ ಎಣಿಕೆಯಲ್ಲಿ ಮಹಾಮೈತ್ರಿ ಮುನ್ನಡೆಯಲ್ಲಿತ್ತು. ಆದರೆ ಬೆಳಗ್ಗೆ 10 ಗಂಟೆಯ ನಂತರ ಟ್ರೆಂಡ್ ಬದಲಾಗತೊಡಗಿತು. 2015ರ ಚುನಾವಣೆಯಲ್ಲಿ ಆರ್ಜೆಡಿ 80, ಬಿಜೆಪಿ 53, ಜೆಡಿಯು 71, ಕಾಂಗ್ರೆಸ್ 27 ಎಲ್ಜೆಪಿ 2, ಇತರರು 10 ಸ್ಥಾನ ಗೆದ್ದಿದ್ದರು. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿದ್ದು 123 ಮ್ಯಾಜಿಕ್ ಸಂಖ್ಯೆಯಾಗಿದೆ.
Advertisement