ಹಾಸನ: ಯಾರು ಎಲ್ಲಿ ಬದುಕುತ್ತಿದ್ದಾರೆ ಅಲ್ಲೇ ಬದುಕಲಿ. ಸತ್ತರೆ ಅಲ್ಲೇ ಸಾಯಲಿ, ಬದುಕಿದರೆ ಅಲ್ಲೇ ಬದುಕಲಿ ಎಂದು ಶಾಸಕ ಶಿವಲಿಂಗೇಗೌಡ ಅವರು ಹೇಳಿದ್ದು, ಹೊರರಾಜ್ಯದಿಂದ ಹಾಸನಕ್ಕೆ ಬರುವವರಿಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ.
ಕೊರೊನಾ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ ಅವರು, ಹೊರರಾಜ್ಯದಿಂದ ಹಾಸನಕ್ಕೆ ಬರುವವರಿಗೆ ಅವಕಾಶ ನೀಡದಂತೆ ಸಚಿವ ಮಾಧುಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.
Advertisement
Advertisement
ಇಂದು ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಸಭೆ ನಡೆಯುತ್ತಿತ್ತು. ಈ ವೇಳೆ ಮುಂಬೈನಿಂದ ಬಂದವರಿಂದ ಹಾಸನ ಗ್ರೀನ್ಝೋನ್ ಪಟ್ಟ ಕಳೆದುಕೊಂಡು ಜಿಲ್ಲೆಯ ಜನ ಆತಂಕಕ್ಕೊಳಪಟ್ಟ ವಿಚಾರವನ್ನು ಶಿವಲಿಂಗೇಗೌಡ ಅವರು ಪ್ರಸ್ತಾಪಿಸಿದರು.
Advertisement
ಯಾರಿಗೂ ಹೊರರಾಜ್ಯದಿಂದ ಬರಲು ಅವಕಾಶ ನೀಡದಂತೆ ಮನವಿ ಮಾಡುತ್ತಿದ್ದೇನೆ. ಕಳೆದ 25 ವರ್ಷಗಳಿಂದ ಮುಂಬೈಯಲ್ಲಿ ವಾಸವಿದ್ದವರು ಈಗ ನಮ್ಮ ಜಿಲ್ಲೆ ಸೇಫ್ ಆಗಿದೆ ಎಂದು ಬರುತ್ತಿದ್ದಾರೆ. ಆದರೆ ಯಾರು ಎಲ್ಲಿ ಇದ್ದಾರೋ ಅಲ್ಲೇ ಇರಲಿ. ನಮ್ಮ ಜಿಲ್ಲೆ ಸೇಫ್ ಆಗಿದೆ. ಹೊರ ರಾಜ್ಯದವರ ಸಹವಾಸವೇ ಬೇಡ. ಅವರ ಜೀವನ ಅಲ್ಲಿ ಉತ್ತಮವಾಗಿದೆ. ಆದರೆ ಜೀವ ಭಯದಿಂದ ಮಾತ್ರ ಅವರು ಇಲ್ಲಿ ಬರಲು ಮುಂದಾಗುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬೇಕು ಎಂದರೇ ಇದಕ್ಕೆ ಅವಕಾಶ ನೀಡಬಾರದು. ಮೋದಿ ಅವರು ಯಾವ ದೃಷ್ಟಿಯಿಂದ ಈ ಬಗ್ಗೆ ಅವಕಾಶ ನೀಡಿದ್ದರೆ ಎಂದು ತಿಳಿದಿಲ್ಲ. ಆದರೆ ನಮ್ಮ ಜಿಲ್ಲೆ ಸೇಫ್ ಆಗಬೇಕು ಎಂದರೇ ಜಿಲ್ಲಾಧಿಕಾರಿಗಳು ತಮಗೆ ಲಭಿಸಿರುವ ಅಧಿಕಾರವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.