ನವದೆಹಲಿ: ಮೆದುಳು ಸತ್ತ 57 ವರ್ಷದ ಮಹಿಳೆಯೊಬ್ಬರು ತಮ್ಮ ಅಂಗಾಂಗವನ್ನು ದಾನ ಮಾಡುವ ಮೂಲಕ 3 ಮಂದಿಯ ಪ್ರಾಣವನ್ನು ಉಳಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಮಹಿಳೆ ತೀವ್ರವಾಗಿ ತಲೆಗೆ ಗಾಯಗೊಂಡು ಮಾರ್ಚ್ 28ರಂದು ಚಿಕಿತ್ಸೆಗಾಗಿ ದ್ವಾರಕಾದ ಆಕಾಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈದ್ಯರು ರೋಗಿಯ ಮೆದುಳು ಸತ್ತಿದೆ ಎಂದು ಘೋಷಿಸಿದ್ದರು. ಬಳಿಕ ಆಸ್ಪತ್ರೆಯ ಸಿಬ್ಬಂದಿ ಮಹಿಳೆಯ ಅಂಗಾಂಗಗಳನ್ನು ದಾನ ಮಾಡುವುದಾಗಿ ಕುಟುಂಬಸ್ಥರಿಗೆ ಕೇಳಿದಾಗ ಒಪ್ಪಿಕೊಂಡಿದ್ದಾರೆ.
Advertisement
Advertisement
ಬಳಿಕ ಮಹಿಳೆಯ ಅಂಗಾಂಗಗಳನ್ನು ದೇಹದಿದಂದ ಹೊರತೆಗೆದು ಮಾರ್ಚ್ 29ರಂದು ಬೆಳಗ್ಗೆ 5 ಗಂಟೆಗೆ ವರ್ಗಾಯಿಸಲಾಗಿತು. ಆಕೆಯ ಕಿಡ್ನಿವೊಂದನ್ನು ದ್ವಾರಕಾದ ಆಕಾಶ್ ಹೆಲ್ತ್ಕೇರ್ನಲ್ಲಿರುವ 52 ವರ್ಷದ ವ್ಯಕ್ತಿಗೆ ನೀಡಲಾಗಿದ್ದು, ಮಹಿಳೆಯ ಲೀವರ್ನನ್ನು ಗುರ್ಗಾಂವ್ನ ಮೆಡಂತಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 71 ವರ್ಷದ ವ್ಯಕ್ತಿಗೆ ನೀಡಲಾಗಿದೆ ಎಂದು ಆಕಾಶ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಮಹಿಳೆಯ ಕಾರ್ನಿಯಾಗಳನ್ನು ಶ್ರಾಫ್ ಕಣ್ಣಿನ ಕೆಂದ್ರದಲ್ಲಿರುವ ಕಣ್ಣಿನ ಬ್ಯಾಂಕ್ನಲ್ಲಿ ಸಂರಕ್ಷಿಸಲಾಗಿದ್ದು, ಮಹಿಳೆಯ ಅಂಗಾಂಗಗಳನ್ನು ಕಸಿ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 20 ಗಂಟೆಗಳ ಕಾಲ ಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.