– ಶೀಘ್ರವೇ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಗೆ ಭೇಟಿ ನೀಡುವೆ
ಬೆಂಗಳೂರು: ಪ್ರವಾಸೋದ್ಯ ಸಚಿವ ಸಿ.ಟಿ ರವಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾ ಎಂದು ಪ್ರಶ್ನಿಸಿದರು. ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ಅವರು ಸಚಿವರನ್ನ ಅನ್ನೋದನ್ನ ಮರೆತಿದ್ದಾರೆ ಅನ್ಸುತ್ತೆ. ರಾಯಣ್ಣ ವಿಚಾರಕ್ಕೆ ರಾಜಕೀಯ ಬಣ್ಣ ಬಳಿಯಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಎರಡ್ಮೂರು ದಿನದಲ್ಲಿ ಡಿಜೆ ಹಳ್ಳಿ, ಕೆಜೆ ಹಳ್ಳಿಗೆ ಹೋಗುತ್ತೇನೆ. ತನಿಖೆ ನಿಷ್ಪಕ್ಷಪಾತವಾಗಿ ಆಗಬೇಕು. ಇದರ ಹಿಂದೆ ಯಾವ ಪಕ್ಷ ಇರಲಿ, ಪಕ್ಷದವರೇ ಇರಲಿ. ಯಾರೂ ತಪ್ಪು ಮಾಡಿದ್ರೂ ತಪ್ಪೇ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಇದರ ಕಡೆ ಪೊಲೀಸ್ ಅವರು, ಸರ್ಕಾರ ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದರು.
Advertisement
Advertisement
ಸರ್ಕಾರದ ಸಚಿವರು ಬೇಜವಾಬ್ದಾರಿಯ ಹೇಳಿಕೆ ಕೊಡ್ತಿದ್ದಾರೆ. ಅವರ ಹೇಳಿಕೆಗಳು ತನಿಖೆ ಮೇಲೆ ಪ್ರಭಾವ ಬೀರುತ್ತವೆ. ಅಖಂಡ ಶ್ರೀನಿವಾಸ ಮೂರ್ತಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡ್ತಿದ್ದಾರೆ. ಜನರ ಪ್ರೀತಿ ವಿಶ್ವಾಸ ಇಲ್ಲದಿದ್ದರೆ ಅಖಂಡ ಅಷ್ಟು ಓಟು ತೆಗೆದುಕೊಳ್ಳಲು ಆಗ್ತಿತ್ತಾ?. ತನಿಖೆ ಮೊದಲೇ ಇಂಥವರೇ ಮಾಡಿದ್ದಾರೆ ಅಂತ ಹೇಳೋಕಾಗತ್ತಾ?. ಸರ್ಕಾರ ತ್ವರಿತವಾಗಿ ಕ್ರಮ ತಗೆದುಕೊಂಡಿದ್ದರೆ ಹಾನಿಯನ್ನು ತಪ್ಪಿಸಬಹುದಿತ್ತು. ಇವರ ಇಂಟೆಲಿಜೆನ್ಸ್ ಏನು ಮಾಡ್ತಿತ್ತು?. ಕಂಪ್ಲೆಂಟ್ ಕೊಟ್ಟ ತಕ್ಷಣ ತೆಗೆದುಕೊಂಡಿದ್ರೆ ಗಲಾಟೆ ಆಗ್ತಿರಲಿಲ್ಲ ಎಂದು ಹೇಳಿದರು.
ನಾನು ಸೋಮವಾರ ಅಥವಾ ಮಂಗಳವಾರ ಭೇಟಿ ನೀಡ್ತೇನೆ. ಅಲ್ಲಿರುವವರು ಅಮಾಯಕರೋ ಅಲ್ವೋ ..? ಅನ್ನೋದು ಗೊತ್ತಿಲ್ಲ. ಆದರೆ ಅವರು ಬಡವರಾಗಿದ್ದು, ಪರಿಹಾರ ಕೊಡುತ್ತಿದ್ದೇನೆ ಅಂತ ಜಮೀರ್ ನಮ್ಮ ಜೊತೆ ಹೇಳಿದ್ದಾರೆ ಎಂದು ತಿಳಿಸಿದರು.