ನವದೆಹಲಿ: ಮಾಜಿ ಕೇಂದ್ರ ಸಚಿವ ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ಕೇಂದ್ರ ಸಂಪುಟದಿಂದ ಕೂಕ್ ಪಡೆಯುತ್ತಿದ್ದಂತೆ ರಾಜಕೀಯ ನಿವೃತ್ತಿಗೆ ಮುಂದಾಗಿದ್ದಾರೆ.
Advertisement
ಪಶ್ಚಿಮ ಬಂಗಾಳದಿಂದ ಸಂಸದರಾಗಿ ಆಯ್ಕೆಯಾಗಿದ್ದ ಹಾಡುಗಾರ ಬಬುಲ್ ಸುಪ್ರಿಯೋ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ಕೆಲದಿನಗಳ ಹಿಂದೆ ಸಚಿವ ಸಂಪುಟ ಪುನರ್ ರಚನೆಯಾದಾಗ ಸಚಿವ ಸ್ಥಾನ ಕಳೆದುಕೊಂಡಿದ್ದರು. ಬಳಿಕ ರಾಜಕೀಯ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಇದಕ್ಕೆಲ್ಲ ತೆರೆ ಎಳೆದು ರಾಜಕಾರಣಕ್ಕೆ ನಿವೃತ್ತಿ ಘೋಷಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆನ್ಲೈನ್ಗೇಮ್ 40 ಸಾವಿರ ಕಳ್ಕೊಂಡು ಪ್ರಾಣ ಬಿಟ್ಟ ಬಾಲಕ
Advertisement
Advertisement
ಗುಡ್ ಬೈ ನಾನು ಬೇರೆ ಯಾವುದೇ ಪಕ್ಷಕ್ಕೂ ಕೂಡ ಸೇರುವುದಿಲ್ಲ, ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವುದಕ್ಕೂ ಹೋಗಲಾರೆ. ನನ್ನನ್ನು ಯಾರು ಕೂಡ ಬನ್ನಿ ಎಂದು ಕರೆದು ಕೂಡ ಇಲ್ಲ. ನಾನು ಬೆಂಬಲಿಸಿದ್ದು ಒಂದೇ ಪಕ್ಷವನ್ನು. ಪಾರ್ಟಿಯಲ್ಲಿ ಹಲವು ಕಾಲಗಳವರೆಗೆ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇನೆ. ಇದೀಗ ನಾನು ರಾಜೀನಾಮೆಗೆ ಮುಂದಾಗಿದ್ದೇನೆ. ನಾಳೆ ಸ್ಪೀಕರ್ ಬಳಿ ತೆರಳಿ ನನ್ನ ರಾಜೀನಾಮೆ ಪತ್ರವನ್ನು ನೀಡಲಿದ್ದೇನೆ. ಒಂದು ತಿಂಗಳ ಒಳಗಾಗಿ ನನ್ನ ಸರ್ಕಾರಿ ನಿವಾಸವನ್ನು ಕೂಡ ಖಾಲಿ ಮಾಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
Advertisement
BJP MP & ex-Union Minister Babul Supriyo quits politics, makes an announcement through his Facebook page.
"Goodbye. I'm not going to any political party. TMC, Congress, CPI(M) nobody has called me, I'm not going anywhere…One need not be in politics to do social work," he posts pic.twitter.com/MLSHfaFq6x
— ANI (@ANI) July 31, 2021
ಬಬುಲ್ ಸುಪ್ರಿಯೋ ಅವರು ಪಶ್ಚಿಮ ಬಂಗಾಳದಿಂದ 2014 ಮತ್ತು 2019ರಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅರೂಪ್ ಬಿಸ್ವಾಸ್ ವಿರುದ್ಧ ಜಯಗಳಿಸಿದ್ದರು.