ಮಡಿಕೇರಿ: ಕೊಡಗಿನಲ್ಲಿ 60 ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇಂದು ಬಸ್ ಸಂಚಾರ ಆರಂಭವಾಗುತ್ತಿದ್ದಂತೆ ಲಾಕ್ಡೌನ್ ನಲ್ಲಿ ಸಿಲುಕಿದ್ದ ಬಹುತೇಕರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು. ಮಡಿಕೇರಿ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಮೊದಲ ಬಸ್ ಬೆಳಗ್ಗೆ 10 ಗಂಟೆಗೆ ಸಂಚಾರ ಆರಂಭಿಸಿತು.
ಆನ್ಲೈನ್ ನಲ್ಲಿ ಬುಕ್ಕಿಂಗ್ ಮಾಡಿದ್ದ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಮೂರು ಸೀಟು ಇರುವ ಕಡೆಗಳಲ್ಲಿ ಕೇವಲ ಇಬ್ಬರು ಮತ್ತು ಎರಡು ಸೀಟು ಇರುವ ಕಡೆಯಲ್ಲಿ ಕೇವಲ ಒಬ್ಬರು ಕುಳಿತು ಪ್ರಯಾಣಿಸಿದ್ರು.
Advertisement
Advertisement
ಮಡಿಕೇರಿಯಿಂದ ಬಸ್ಸು ಹೊರಡುತ್ತಿದ್ದಂತೆ ಪ್ರಯಾಣಿಕರು ತಮ್ಮ ಸಂಬಂಧಿಕರಿಗೆ ಕೈಬೀಸಿ ಹೊರಟರು. ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಅಧಿಕಾರಿಗಳು ಪ್ರಯಾಣಿಕರ ಆರೋಗ್ಯ ಸ್ಥಿತಿ ತಿಳಿದುಕೊಂಡು ಟಿಕೆಟ್ ನೀಡಿದರು. ಇಂದು ಮಡಿಕೇರಿಯಿಂದ ಬೆಂಗಳೂರಿಗೆ ಒಟ್ಟು ಮೂರು ಬಸ್ ಗಳು ಹೊರಟಿವೆ. ಬೆಳಗ್ಗೆ 10, 11 ಮತ್ತು 12 ಗಂಟೆಗೆ ಬಸ್ ಗಳ ಸಮಯ ನಿಗದಿ ಮಾಡಲಾಗಿತ್ತು.
Advertisement