– ಮದ್ವೆಯಾಗಿ ವಿದೇಶದಲ್ಲಿದ್ದ ಮಹಿಳೆಗೆ ಬೆದರಿಕೆ
ಬೆಂಗಳೂರು: ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದವನ ವಿರುದ್ಧ ವಿವಾಹಿತ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಯನ್ನು ನಿತೀಶ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
Advertisement
ಏನಿದು ಪ್ರಕರಣ?
ಸಂತ್ರಸ್ತ ಮಹಿಳೆಗೆ ಮದುವೆಯಾಗಿದ್ದು, ಪತಿ ಜೊತೆ ಜರ್ಮನಿಯಲ್ಲಿದ್ದಾರೆ. ಹರಿಯಾಣ ಮೂಲದ ನಿತೀಶ್ ಕುಮಾರ್ ಸಿಂಗ್ ಫೇಸ್ಬುಕ್ ಮೂಲಕ ಪರಿಚಯವಾಗಿದ್ದ. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಭೇಟಿಯಾಗಿದ್ದರು. ನಂತರ ಹೋಟೆಲ್ಗಳಿಗೆಲ್ಲಾ ಹೋಗಿ ಸುತ್ತಾಡಿದ್ದರು. ಆಗ ಮಹಿಳೆಯ ಜೊತೆ ಸಿಂಗ್ ಸಲುಗೆ ಬೆಳೆಸಿಕೊಂಡಿದ್ದನು.
Advertisement
Advertisement
ಈ ಸಂದರ್ಭದಲ್ಲಿ ಕಾಲ ಕಳೆದ ಫೋಟೋ ಮತ್ತು ವಿಡಿಯೋಗಳನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು. ನಂತರ ಸಂತ್ರಸ್ತ ಮಹಿಳೆ ಆತನಿಂದ ದೂರ ಉಳಿದಿದ್ದರು. ಜೂನ್ ತಿಂಗಳಲ್ಲಿ ಬೆಂಗಳೂರಿನ ಎಸ್.ಆರ್.ಕಾಲೋನಿಯಲ್ಲಿರುವ ತಂದೆ ಮನೆಗೆ ಮಹಿಳೆ ಬಂದಿದ್ದರು. ಈ ಬಗ್ಗೆ ತಿಳಿದ ಆರೋಪಿ ಮಹಿಳೆಯ ತಂದೆಗೆ ಫೋನ್ ಮಾಡಿ ಅವಹೇಳನಕಾರಿಯಾಗಿ ಮಾತನಾಡಿದ್ದನು.
ಆಕೆ ನನ್ನ ಜೊತೆ ಸಂಬಂಧವನ್ನ ಮುಂದುವರಿಸದಿದ್ದಲ್ಲಿ ಖಾಸಗಿ ಫೋಟೋ ಮತ್ತು ವಿಡಿಯೋಗಳು ಇವೆ. ಅದೆಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಮರುದಿನ ಮಹಿಳೆಯ ತಂದೆಗೆ ಮತ್ತೆ ಫೋನ್ ಮಾತನಾಡಿದ್ದನು.
ಅಷ್ಟೇ ಅಲ್ಲದೇ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ವಾಟ್ಸಪ್ಗೆ ಕಳುಹಿಸಿದ್ದನು. ಈಗಲೂ ಒಪ್ಪದಿದರೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋ ವೈರಲ್ ಮಾಡಿ ಮಾನ ಕಳೆಯುವುದಾಗಿ ಬ್ಲ್ಯಾಕ್ಮೇಲ್ ಮಾಡಿದ್ದನು. ಕೊನೆಗೆ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ತಂದೆಯ ಜೊತೆ ಬಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.